10 ಜನರನ್ನು ಕೊಂದ ಹಂತಕ 72 ವರ್ಷದ ವೃದ್ಧ..!

Social Share

ಲಾಸ್‍ಏಂಜಲೀಸ್,ಜ.23- ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಹತ್ಯೆಗೈದ ವ್ಯಕ್ತಿಯನ್ನು 72 ವರ್ಷದ ವೃದ್ದ ಎಂದು ಪತ್ತೆ ಹಚ್ಚಲಾಗಿದೆ.

ಚೀನಿಯರ ಹೊಸ ವರ್ಷದ ಪಾರ್ಟಿ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಹತೈಗೈದು ಇತರ 10 ಮಂದಿ ಚಿಂತಾಜನಕ ಪರಿಸ್ಥಿತಿ ತಲುಪುವಂತೆ ಮಾಡಿರುವ 72 ವರ್ಷದ ನಂತರ ಕೃತ್ಯದ ಸ್ಥಳಕ್ಕೆ ಆಗಮಿಸಿದ್ದ ವ್ಯಾನ್‍ನೊಳಗೆ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಲಾಸ್‍ಏಂಜಲೀಸ್ ಪೊಲೀಸರು ತಿಳಿಸಿದ್ದಾರೆ.

ವ್ಯಾನ್‍ನೊಳಗೆ ಆಡಗಿಕೊಂಡಿದ್ದ ವೃದ್ದ ಹಂತಕ ಹುಯು ಕ್ಯಾನ್ ಟ್ರಾನ್‍ನನ್ನು ಪೊಲೀಸರು ಸುತ್ತುವರೆದು ಶರಣಾಗುವಂತೆ ಸೂಚಿಸಿದಾಗ ಆತ ಪೊಲೀಸರಿಗೆ ಸಿಕ್ಕಿ ಬೀಳದೆ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪರಾಕ್ರಮ್ ದಿವಸ್ : ನೇತಾಜಿ ಸ್ಮರಿಸಿದ ಪ್ರಧಾನಿ ಮೋದಿ

ಸಾಮೂಹಿಕ ಗುಂಡಿನ ಘಟನೆಯಲ್ಲಿ ಬೇರೆ ಯಾವುದೇ ಶಂಕಿತರು ಇಲ್ಲ ಎಂದು ಜಿಲ್ಲಾಧಿಕಾರಿ ದೃಢಪಡಿಸಿದರು ಮತ್ತು ದಾಳಿಯ ಉದ್ದೇಶ ಇನ್ನೂ ತಿಳಿದಿಲ್ಲ ಎಂದು ಹೇಳಿದರು. ತನಿಖೆ ಇನ್ನೂ ಮುಂದುವರಿದಿದೆ.

ಪತ್ತೆದಾರರು ಕಣ್ಗಾವಲು ವೀಡಿಯೊವನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಶಂಕಿತರು ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂಬುದು ಇನ್ನೂ ತಿಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಮೂಹಿಕ ಗುಂಡಿನ ದಾಳಿಗೆ ಬಲಿಯಾದವರನ್ನು ಗೌರವಿಸಲು ಸಾರ್ವಜನಿಕ ಕಟ್ಟಡಗಳಲ್ಲಿ ಅಮೆರಿಕ ಧ್ವಜಗಳನ್ನು ಅರ್ಧದಲ್ಲಿ ಹಾರಿಸುವಂತೆ ಅಧ್ಯಕ್ಷ ಜೋ ಬಿಡನ್ ಆದೇಶಿಸಿದ್ದಾರೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾರು-ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ, ಐವರ ಸಾವು

ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಎರಡು ದಿನಗಳ ಚಂದ್ರನ ಹೊಸ ವರ್ಷದ ಹಬ್ಬಕ್ಕೆ ಹತ್ತಾರು ಸಾವಿರ ಜನರು ಜಮಾಯಿಸಿದ್ದರು. ದಾಳಿಯ ನಂತರ ಎರಡನೇ ದಿನದ ಉತ್ಸವವನ್ನು ರದ್ದುಗೊಳಿಸಲಾಯಿತು.

2022 ರಲ್ಲಿ ಅಮೆರಿಕಾದಾದ್ಯಂತ 44,000 ಕ್ಕೂ ಹೆಚ್ಚು ಜನರು ಗುಂಡಿನ ಗಾಯಗಳಿಂದ ಸಾವನ್ನಪ್ಪಿದರು, ಗುಂಡಿನ ದಾಳಿ ನಡೆಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಾರ್ಹ ವಿಚಾರವಾಗಿದೆ.

California, shooting, suspect kills, Lunar, New Year, massacre,

Articles You Might Like

Share This Article