ಬೆಂಗಳೂರು,ಫೆ.22 – ಕಾಲ್‍ಗರ್ಲ್‍ಗಳನ್ನು ಬಳಸಿಕೊಂಡು ಗಿರಾಕಿಗಳನ್ನು ಅಪಹರಿಸಿ, ಬೆದರಿಸಿ ಹಣ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಗ್ಯಾಂಗ್ ಇನ್ನೂ ಹಲವು ಯುವಕರನ್ನು ಸುಲಿಗೆ ಮಾಡಿರುವ ಶಂಕೆಯಿದೆ.
ನಗರದ ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ ಪ್ರದೇಶಗಳಲ್ಲಿ ಈ ಗ್ಯಾಂಗ್ ಇದೇ ರೀತಿ ಯುವಕರ ಅಪಹರಿಸಿ ಹಣ ಸುಲಿಗೆ ಮಾಡಿ ಪರಾರಿಯಾಗಿತ್ತು ಎಂದು ತಿಳಿದು ಬಂದಿದೆ.
ಆದರೆ ಈ ಗ್ಯಾಂಗ್‍ನಿಂದ ಸುಲಿಗೆಗೆ ಒಳಗಾದ ಯುವಕರು ಮರ್ಯಾದೆಗೆ ಅಂಜಿ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದೆ ಬರುತ್ತಿಲ್ಲ. ಈ ಆರೋಪಿಗಳು ಅದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಕೃತ್ಯವನ್ನು ಮುಂದುವರೆಸಿದು,್ದ ಇದೀಗ 8 ಮಂದಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಗೋವಾಕ್ಕೆ ಗೋಮಾಂಸ ರಫ್ತು ಮಾಡುತ್ತಿರುವುದಾಗಿ ಒಪ್ಪಿಕೊಂಡ ರಾಜ್ಯ ಸರ್ಕಾರ
ಈ ಗ್ಯಾಂಗ್ ಎಷ್ಟು ಮಂದಿ ಯುವಕರನ್ನು ಅಪಹರಿಸಿ ಯಾವ ರೀತಿ ಸುಲಿಗೆ ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಫೆ.17ರಂದು ಮುಂಜಾನೆ 1.30ರ ಸುಮಾರಿನಲ್ಲಿ ಸ್ನೇಹಿತರಾದ ಮಂಜುನಾಥ್ ಮತ್ತು ರಜನಿಕಾಂತ್ ಬನ್ನೇರುಘಟ್ಟ ರಸ್ತೆಯ ಹೊಟೇಲ್ ಬಳಿ ಯುವತಿಯೊಂದಿಗೆ ಮಾತನಾಡುತ್ತಾ ನಿಂತಿದ್ದರು.
ಆ ಸಂದರ್ಭದಲ್ಲಿ ಮೂರು ಬೈಕ್‍ಗಳಲ್ಲಿ ಬಂದ ಆರು ಮಂದಿ, ನಮ್ಮ ಬೈಕ್‍ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದೀರೆಂದು ಮಂಜುನಾಥ್ ಮತ್ತು ರಜನೀಕಾಂತ್ ಜೊತೆ ಜಗಳವಾಡಿದ್ದಾರೆ. ನಂತರ ಆರೋಪಿಗಳು ಕಾರಿನಲ್ಲಿ ಈ ಮೂವರನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ ಮಂಜುನಾಥ್ ಬುದ್ದಿವಂತಿಕೆಯಿಂದ ದಾರಿ ಮಧ್ಯೆ ಕಾರಿನಿಂದ ಹೊರಗೆ ಹಾರಿ ತಪ್ಪಿಸಿಕೊಂಡು ಕೋಳಿ ಫಾರಂ ಗೇಟ್ ಬಳಿ ಬಂದು ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ಒಟ್ಟು 466 ಕೋಟಿ ಪರಿಹಾರ
ಬೇಗೂರು ಠಾಣೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಯುವತಿ ಸೇರಿದಂತೆ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
callgirl kidnap, threaten money, Prostitution