ಜಿ-20 ಶೃಂಗಸಭೆಗೆ ಆಗಮಿಸಿದ್ದ ಕಾಂಬೋಡಿಯಾ ಪ್ರಧಾನಿಗೆ ಕೊರೋನಾ ಪಾಸಿಟಿವ್

Social Share

ನುಸಾ ದುವಾ (ಇಂಡೋನೇಷ್ಯಾ), ನವೆಂಬರ್ 15 – ಜಿ-20 ಸಮ್ಮೇಳನಕ್ಕೆ ಆಗಮಿಸಿದ ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಕೂಡಲೆ ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ.

ತನ್ನ ಫೇಸ್‍ಬುಕ್ ಪುಟದಲ್ಲಿ ವಿವರವಾದ ಮಾಹಿತಿ ಪೋಸ್ಟ್ ಮಾಡಿದ ಅವರು ಕಳೆದ ರಾತ್ರಿ ಆರೋಗ್ಯ ಪರೀಕ್ಷೆ ಮಾಡಲಾಗಿತ್ತು,ಇಂಡೋನೇಷ್ಯಾದ ವೈದ್ಯರು ಕೋವಿಡ್ ಇರುವುದು ದೃಢೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಎ-20 ಮತ್ತು ಬ್ಯಾಂಕಾಕ್‍ನಲ್ಲಿನ ಆರ್ಥಿಕ ವೇದಿಕೆ ಸಭೆಗಳನ್ನು ರದ್ದುಗೊಳಿಸುತ್ತಿದ್ದಾರೆ.

ಕಳೆದ ಭಾನುವಾರದಂದು ಕೊನೆಗೊಂಡ ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಷನ್ ಶೃಂಗಸಭೆಯಲ್ಲಿ ಭಾಗವಹಿಸಿ ಹಲವು ನಾಯಕರನ್ನು ಭೇಟಿಯಾಗಿದ್ದರು ನಾಮ್ ಪೆನ್‍ನಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್,

ಶನಿ ಸಂತಾನದಂತೆ ಬಿಜೆಪಿ ಆಡಳಿತ : ವೀರಪ್ಪ ಮೊಯ್ಲಿ ಟೀಕೆ

ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಭಾರತದ ಪ್ರಧಾನಿ ನರೇಂದ್ರ ಮೋದಿ ,ಬ್ರಿಟನ್ ಪ್ರಧಾನಿ ರಿಷಿ ಸಿನಿಕ್ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವï, ಚೀನಾದ ಪ್ರಧಾನಿ ಲಿ ಕೆಕಿಯಾಂಗ್ ಸೇರಿದಮತೆ ಅನೇಕರು ವಿಶ್ವ ನಾಯಕರು ಭಾಗಿಯಾಗಿದ್ದಾರೆ.

ವಿಶ್ವಶ್ರೇಷ್ಠ ತಂಡದಲ್ಲಿ ಕೊಹ್ಲಿ, ಸೂರ್ಯಕುಮಾರ್ ಯಾದವ್‍ಗೆ ಸ್ಥಾನ

Articles You Might Like

Share This Article