ಕಾಂಬೋಡಿಯ, ಮಾ.3 – ವಿಸರ್ಜಿತ ಕಾಂಬೋಡಿಯ ನ್ಯಾಷನಲ್ ರೆಸ್ಕ್ಯು ಪಾರ್ಟಿಯ ನಾಯಕ ಕೆಮ್ ಶೋಕ್ ಅವರಿಗೆ ಕಾಂಬೋಡಿಯ ಕೋರ್ಟ್ ದೇಶದ್ರೋಹ ಆರೋಪದ ಮೇಲೆ 27 ವರ್ಷಗಳ ಗೃಹ ಬಂಧನವನ್ನು ವಿಧಿಸಿದೆ.
2017 ರಲ್ಲಿ ಕೆಮ್ ಬಂಧನವಾಗುವವರೆಗೆ ವಿದೇಶಿ ಶಕ್ತಿಗಳೊಂದಿಗೆ ನಂಟು ಹೊಂದಿರುವುದು ದೃಢಪಟ್ಟಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಕೋರ್ಟ್ ತಿಳಿಸಿದೆ.
ಅಮೇರಿಕಾದ ಆಡಳಿತಪರ ಗುಂಪುಗಳೊಂದಿಗಿರುವ ವಿಡಿಯೋ ಬಹಿರಂಗವಾದ ಹಿನ್ನೆಲೆ, ಅಧಿಕಾರಕ್ಕಾಗಿ ವಿದೇಶಿ ಶಕ್ತಿಗಳನ್ನು ಬಳಸಿಕೊಂಡಿರುವ ಆರೋಪದ ಮೇಲೆ ಕೆಮ್ ಶೆಕ್ ಅವರನ್ನು 2017 ರಲ್ಲಿ ಬಂಧಿಸಲಾಗಿತ್ತು. ಇದೀಗ ತೀರ್ಪು ಹೊರಬಿದ್ದಿದೆ.
40% ಸರ್ಕಾರಕ್ಕೆ ಮಾಡಾಳು ಪುತ್ರ ಮತ್ತೊಂದು ಸಾಕ್ಷಿ : ಹೆಚ್‌ಡಿಕೆ
ಕೆಮ್ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಮತ ದಾನದಲ್ಲೂ ಭಾಗವಹಿಸುವಂತಿಲ್ಲ. ಮನೆಯವರು ಹೊರತು ಪಡಿಸಿ ಯಾವುದೇ ವ್ಯಕ್ತಿಗಳು ಅವರನ್ನು ಭೇಟಿ ಮಾಡುವಂತಿಲ್ಲ. ಅನುಮತಿ ಪಡೆದು ಮನೆಯಿಂದ ಹೊರಹೋಗಬಹುದು ಎಂದು ಕೋರ್ಟ್ ತಿಳಿಸಿದೆ.
Cambodian, opposition, figure, Kem Sokha, sentenced 27 years, house arrest,