ಮೂತ್ರಪಿಂಡದಲ್ಲಿ ಕಲ್ಲಿನ (Kidney stone) ಸಮಸ್ಯೆ ಕಡಿಮೆ ಮಾಡುವುದು ಹೇಗೆ.. ?

Social Share

ಬೆಂಗಳೂರು,ಡಿ.16- ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿಗೆ ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಯಾಗುವ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಕಾರಣವೇನೆಂದರೆ ಹಲವು ರೋಗಗಳಿಂದಲೂ ಹೀಗಾಗಬಹುದು ಅಥವಾ ಔಷಗಳ ಅಡ್ಡ ಪರಿಣಾಮವೂ ಕಾರಣವಾಗಬಹುದು.

ಮನುಷ್ಯನ ಸ್ಥೂಲಕಾಯ, ಆಹಾರ ಪದ್ದತಿ ಅಥವಾ ಜೀವನ ಶೈಲಿಯೂ ಇದಕ್ಕೆ ಕಾರಣವಾಗಿರಬಹುದು. ಆದ್ದರಿಂದ ಸರಳ ಚಿಕಿತ್ಸಾ ಕ್ರಮಗಳ ಮೂಲಕ ಕಿಡ್ನಿ ಸ್ಟೋನ್ ಬೆಳವಣಿಗೆಯನ್ನು ತಡೆಯಬಹುದು ಎಂದು ನಗರದ ಎನ್ಯು ಆಸ್ಪತ್ರೆಗಳ ಹಿರಿಯ ಆಹಾರ ತಜ್ಞರಾದ ಸುನಿತಾ ಅಭಿಪ್ರಾಯಪಟ್ಟರು.

ಕಿಡ್ನಿ ಸ್ಟೋನ್ ಎಂದರೆ ಮೂತ್ರಪಿಂಡದಲ್ಲಿ ರೂಪುಗೊಳ್ಳುವ ಖನಿಜ ಮತ್ತು ಲವಣಗಳ ಗಟ್ಟಿಯಾದ ನಿಕ್ಷೇಪಗಳು ಅಷ್ಟೆ. ಕಿಡ್ನಿ ಸ್ಟೋನ್ ಗಾತ್ರ ಮತ್ತು ಸ್ಥಿತಿಯನ್ನು ಆಧರಿಸಿ ಆಹಾರ ಸೇವನಾ ಕ್ರಮ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ರೂಪಿಸಲಾಗುತ್ತದೆ ಎಂದರು.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು ಉತ್ತಮ ಆಹಾರ ಸೇವನಾ ಕ್ರಮದಿಂದ ಕಿಡ್ನಿ ಸ್ಟೋನ್ ನಂತಹ ಅಪಾಯಕಾರಿ ಪರಿಸ್ಥಿತಿಯನ್ನು ನಿಯಂತ್ರಿಸಬಹುದಾಗಿದೆ. ನೀವು ಕಡಿಮೆ ಫೈಬರ್ ಯುಕ್ತ ಆಹಾರ ಸೇವಿಸುವವರಾಗಿದ್ದರೆ ಅಥವಾ ಸರಿಯಾದ ರೀತಿಯ ದ್ರವಗಳೊಂದಿಗೆ ನಿಮ್ಮನ್ನು ಸಾಕಷ್ಟು ಹೈಡ್ರೀಕರಿಣ ಮಾಡಿಕೊಳ್ಳದಿದ್ದರೆ, ನಿಮ್ಮ ದೇಹದಲ್ಲಿ ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಯ ಅಪಾಯ ಇರುತ್ತದೆ. ಬೇಸರದ ಸಂಗತಿ ಎಂದರೆ, ಅನೇಕರು ಸಾಕಷ್ಟು ಫೈರ್ಬ ಹೊಂದಿರುವ ಸಂಪೂರ್ಣ ಆಹಾರ ಸೇವನಾ ಪದ್ಧತಿಯನ್ನೇ ನಿಲ್ಲಿಸಿಬಿಟ್ಟಿದ್ದಾರೆ.

ಉಗ್ರರ ಮೇಲಿನ ತಮ್ಮ ಪ್ರೇಮವನ್ನು ಡಿಕೆಶಿ ಜಗಜ್ಜಾಹೀರು ಮಾಡಿದ್ದಾರೆ : ಕಟೀಲ್

ತ್ವರಿತವಾಗಿ ತಯಾರಾಗುವ ಫಾಸ್ಟ್ ಫುಡ್ ಮತ್ತು ಫೈಬರ್ಗಳ ಕೊರತೆಯಿರುವ ಸಂಸ್ಕರಿಸಿದ ಆಹಾರಗಳ ಸೇವನಾ ಕ್ರಮವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ತಿಂಗಳಿನಲ್ಲಿ ಬಹುಪಾಲು ದಿನಗಳು ಹೋಟೆಲ್ಗಳಲ್ಲಿ ಮತ್ತು ರೆಸ್ಟೋರೆಂಟ್ ಗಳಲ್ಲಿ ಆಹಾರವನ್ನು ಆರ್ಡ್ರ್ ಮಾಡಿ ತರಿಸಿಕೊಂಡು ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ರಚನೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದರು.

#KidneyStone, #Health, #Symptoms, #Treatment, ಮೂತ್ರಪಿಂಡ,

Articles You Might Like

Share This Article