ಹಿಂದೂ ದೇವಾಲಯ ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು

Social Share

ಟೊರೊಂಟೊ, ಸೆ.15- ಕೆನಡಾದ ಖಲಿಸ್ತಾನಿ ಉಗ್ರಗಾಮಿಗಳು ಪ್ರಮುಖ ಸ್ವಾಮಿ ನಾರಾಯಣ ಹಾಗೂ ಹಿಂದೂ ದೇವಾಲಯದ ಗೊಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚಿ ವಿರೂಪಗೊಳಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವಂತೆ ಕೆನಡಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಏತನ್ಮಧ್ಯೆ, ಬ್ರಾಂಪ್ಟನ್ ಸೌತ್ ಸಂಸದೆ ಸೋನಿಯಾ ಸಿಧು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಟೊರೊಂಟೊದ ಸ್ವಾಮಿನಾರಾಯಣ ಮಂದಿರದಲ್ಲಿ ನಡೆದ ವಿಧ್ವಂಸಕ ಕೃತ್ಯದಿಂದ ನಾನು ವಿಚಲಿತರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ.
ನಾವು ಬಹು ಸಂಸ್ಕøತಿಕ ಮತ್ತು ಬಹು-ನಂಬಿಕೆಯ ಸಮುದಾಯದಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ಪ್ರತಿಯೊಬ್ಬರೂ ಸುರಕ್ಷಿತವಾಗಿರಲು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : BIG NEWS : ಉಕ್ರೇನ್‍ ಅಧ್ಯಕ್ಷ ಝೆಲೆನ್‍ಸ್ಕಿ ಕಾರು ಅಪಘಾತ, ಗಂಭೀರ ಗಾಯ

ಭಾರತ ಮೂಲದ ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಕೂಡ ಘಟನೆ ಖಂಡಿಸಿದ್ದು, ಇದು ಕೇವಲ ಒಂದು ಘಟನೆಯಲ್ಲ. ಕೆನಡಾದಲ್ಲಿರುವ ಹಿಂದೂ ದೇವಾಲಯಗಳು ಇತ್ತೀಚಿನ ದಿನಗಳಲ್ಲಿ ಈ ರೀತಿಯ ದಾಳಿಗೆ ಗುರಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಪರಾಧಗಳನ್ನು ದ್ವೇಷಿಸುತ್ತೇನೆ ಹಿಂದೂ ಕೆನಡಿಯನ್ನರು ನ್ಯಾಯಸಮ್ಮತ ನಡೆಯನ್ನು ಬಯಸುತ್ತಾರೆ. ಸ್ವಾಮಿ ನಾರಾಯಣ ಸಂಸ್ಥೆ ಆಧ್ಯಾತ್ಮಿಕ, ಸ್ವಯಂ ಸೇವೆಯ ನಂಬಿಕೆ ಹೊಂದಿದ್ದು ನಿಸ್ವಾರ್ಥ ಸೇವೆಯ ಜೊತೆಗೆ ಹಿಂದೂ ಆದರ್ಶಗಳನ್ನು ಬೆಳೆಸುವ ಮೂಲಕ ಸಮಾಜ ಸುಧಾರಿಸಲು ಸಮರ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಅಪರಾಧಿಗಳನ್ನು ಶೀಘ್ರ ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ಹಲವು ನಾಯಕರು ಒತ್ತಾಯಿಸಿದ್ದಾರೆ.

Articles You Might Like

Share This Article