ಟೊರೊಂಟೊ, ಜ.28 – ಕೆನಡಾ-ಅಮೆರಿಕ ಗಡಿಯ ಮ್ಯಾನಿಟೋಬಾ ಪ್ರದೇಶದಲ್ಲಿದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಶಿಶು ಸೇರಿದಂತೆ ನಾಲ್ಕು ಭಾರತೀಯರ ಶವ ಪತ್ತೆಯಾಗಿದೆ. ಮೃತರನ್ನು ಜಗದೀಶ್ ಬಲದೇವ್ಭಾಯ್ ಪಟೇಲ್ ( 39), ವೈಶಾಲಿಬೆನ್ ಪಟೇಲ್ (37) ,ವಿಹಂಗಿಪಟೇಲ್ (11) 1 ವರ್ಷದ ಶಿಶು ಎಂದು ಕೆನಡಾದ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಇಲ್ಲಿನ ಭಾರತದ ಹೈಕಮಿಷನ್ ತಿಳಿಸಿದೆ.
ಕಳೆದ ಜ-19 ರಂದು ಗಡಿಯ ಬಳಿ ಶವಗಳನ್ನು ತನಿಖೆ ಕೈಗೊಂಡಾಗ ನಾಲ್ವರೂ ಭಾರತೀಯ ಪ್ರಜೆಗಳೆಂದು ತಿಳಿಯಿತು ಮೃತರ ಹತ್ತಿರದ ಸಂಬಂಧಿಕರೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾ ನಾವು ಎಲ್ಲಾ ಸಹಕಾರ ನೀಡಿದೇವೆ ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್‍ನಿಂದ ಬಂದಿದ್ದ ಕುಟುಂಬವು ವಿಪರೀತ ಚಳಿಯ ವಾತಾವರಣದಿಂದ ಸಾವನ್ನಪ್ಪಿದೆ ಎಂದು ಹೇಳಲಾಗಿದೆ ತನಿಖೆ ನಡೆಸುತ್ತಿದೆ. ವಲಸೆ ಮತ್ತು ಕಾನೂನುಬದ್ಧ ಕುರಿತು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಇಂತಹ ದುರಂತಗಳು ಮರುಕಳಿಸುವುದಿಲ್ಲ ಎಂದು ಹೈಕಮಿಷನ್ ಹೇಳಿದೆ.
ಅನಿಯಮಿತ ವಲಸೆ, ವಲಸಿಗರ ಕಳ್ಳಸಾಗಣೆ ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಮತ್ತು ನಿಗ್ರಹಿಸಲು ಮತ್ತು ಸುಸ್ಥಿರ ಮತ್ತು ಚಲನಶೀಲತೆಯನ್ನು ಸುಲಭಗೊಳಿಸಲು, ಭಾರತ ಈಗಾಗಲೆ ಕೆನಡಾಕ್ಕೆ ಸಮಗ್ರ ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದವನ್ನು ಪ್ರಸ್ತಾಪಿಸಿದೆ, ಕೆನಡಾ ಸರ್ಕಾರ ಪರಿಗಣನೆಯಲ್ಲಿದೆ ತಿಳಿಸಲಾಗಿದೆ.
