ಪುರುಷರನ್ನು ಬಾಧಿಸುವ 4 ವಿಧದ ಕ್ಯಾನ್ಸರ್‌ಗ‌ಳು

Spread the love

ಬೆಂಗಳೂರು,ಫೆ.4- ಜಾಗತಿಕ ವಾಗಿ ಸಾವುಗಳಿಗೆ ಬಹುಶಃ ಎರಡನೇ ಮುಖ್ಯ ಕಾರಣ ಕ್ಯಾನ್ಸರ್ ಆಗಿದೆ. ಪ್ರತಿ ವರ್ಷ ಅಂದಾಜು 96 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಇದು ಕಾರಣವಾಗುತ್ತದೆ. ಸ್ತನ, ಕರುಳು ಗುದನಾಳ, ಶ್ವಾಸಕೋಶ, ಗರ್ಭಕೋಶದ ಕೊರಳು, ಥೈರಾಯ್ಡ್ ಕ್ಯಾನ್ಸರ್‍ಗಳು ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್‍ಗಳಾಗಿದ್ದರೆ; ಪುರುಷರಲ್ಲಿ ಶ್ವಾಸಕೋಶ, ಪ್ರೊಸ್ಟೇಟ್, ಕರುಳು ಗುದನಾಳ, ಹೊಟ್ಟೆ ಮತ್ತು ಪಿತ್ತಜನಕಾಂಗದ ಕ್ಯಾನ್ಸರ್‍ಗಳು ಅತ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್‍ಗಳಾಗಿವೆ. ಪುರುಷರನ್ನು ಬಾಧಿಸುವ ಕ್ಯಾನ್ಸರ್‍ಗಳು ಪ್ರೊಸ್ಟೇಟ್ ಕ್ಯಾನ್ಸರ್ – ಪ್ರೊಸ್ಟೇಟ್ ಗ್ರಂಥಿಯ ಅಂಗಾಂಶಗಳಲ್ಲಿ ಈ ಕ್ಯಾನ್ಸರ್ ಅಭಿವೃದ್ಧಿ ಹೊಂದುತ್ತದೆ ಮತ್ತು ಅಂತಿಮವಾಗಿ ಮೂತ್ರ ವ್ಯವಸ್ಥೆ ಮತ್ತು ಅದರ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ.

ಈ ರೋಗದ ಅತ್ಯಂತ ಸಾಮಾನ್ಯ ಲಕ್ಷಣಗಳು ಎಂದರೆ ಮೂಳೆಯ ನೋವು, ಮೂತ್ರದಲ್ಲಿ ರಕ್ತ, ಮೂತ್ರ ವಿಸರ್ಜನೆಯ ವೇಳೆ ಸುಸ್ತಾಗುವ ಭಾವನೆಗಳಾಗಿರುತ್ತವೆ. ಶ್ವಾಸಕೋಶದ ಕ್ಯಾನ್ಸರ್- ಧೂಮಪಾನದ ಅಭ್ಯಾಸಗಳಿಲ್ಲ ದಿದ್ದರೂ ಯಾರನ್ನು ಬೇಕಾದರೂ ಇದು ಬಾಧಿಸಬಹುದು. ಶ್ವಾಸಕೋಶದ ಕ್ಯಾನ್ಸರ್ ಎಲ್ಲದಕ್ಕಿಂತಲೂ ಅತ್ಯಂತ ಮಾರಕ ರೋಗ. ಪರಿಸರ ಮಾಲಿನ್ಯ, ತಂಬಾಕು ಸೇವನೆ ಮತ್ತು ಕ್ಯಾನ್ಸರ್‍ಕಾರಕ ರಸಾಯನಿಕಗಳ ಸಂಪರ್ಕ ಮುಂತಾದವುಗಳಿಂದ ಬರುತ್ತದೆ. ಶ್ವಾಸಕೋಶದ ಕ್ಯಾನ್ಸರ್‍ನ ಸಾಮಾನ್ಯ ಲಕ್ಷಣಗಳಲ್ಲಿ, ಕೆಮ್ಮು, ಉಸಿರಾಟದ ತೊಂದರೆ, ಎದೆನೋವು, ಧ್ವನಿ ಒರಟಾಗುವುದು, ಉಸಿರಾಡು ವಾಗ ಸದ್ದಾಗುವುದು, ಕಫದಲ್ಲಿ ಬದಲಾವಣೆ ಮತ್ತು ಕೆಮ್ಮಿದಾಗ ರಕ್ತ ಬರುವುದು ಸೇರಿರುತ್ತವೆ.

ಕರುಳು ಗುದನಾಳದ ಕ್ಯಾನ್ಸರ್- ಕರುಳು ಅಥವಾ ಗುದನಾಳಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಈ ಕೋಲೊರೆಕ್ಟಲ್ ಕ್ಯಾನ್ಸರ್ ಆಗಿದ್ದು, ಹಿರಿಯ ವಯಸ್ಕ ಪುರುಷರು/ ಮಹಿಳೆಯರನ್ನು ಇದು ಪ್ರಾಥಮಿಕ ವಾಗಿ ಬಾಧಿಸುತ್ತದೆ. ಬೊಜ್ಜು ಮೈ, ಧೂಮಪಾನ ಮತ್ತು ಕುರಳಿ ನಲ್ಲಿ ಉರಿಯೂತದ ರೋಗ ಗಳು, ಈ ಕ್ಯಾನ್ಸರ್ ಅಪಾಯ ವನ್ನು ಹೆಚ್ಚಿಸಬಹುದು. ವಂ± ಪಾರಂಪರ್ಯವಾಗಿ, ದೈಹಿಕ ಚಟುವಟಿಕೆ ಇಲ್ಲದಿರುವುದು, ನಾರಿನಂಶವುಳ್ಳ ಆಹಾರದ ಕೊರತೆ, ಸಂಸ್ಕರಿತ ಮತ್ತು ಕೆಂಪು ಮಾಂಸಗಳನ್ನು ಅತಿಯಾಗಿ ಸೇವಿಸುವುದರಿಂದ ರೋಗ ಉಲ್ಭಣಿಸುವ ಸಾಧ್ಯತೆಯಿದೆ.

ಪಿತ್ತಜನಕಾಂಗದ ಕ್ಯಾನ್ಸರ್- ದೇಹದ ಇತರೆ ಪ್ರದೇಶಗಳಿಂದ ಪಿತ್ತಜನಕಾಂಗಕ್ಕೆ ಹರಡುವ ಕ್ಯಾನ್ಸರ್‍ನ್ನು ಪಿತ್ತಜನಕಾಂಗದ ಕ್ಯಾನ್ಸರ್ ಎಂದು ಹೇಳುತ್ತಾರೆ. ಜಾಡೀಸ್, ಹಸಿವು ಕಡಿಮೆ ಯಾಗುವುದು, ಹೊಟ್ಟೆನೋವು ಮುಂತಾದವುಗಳು ಈ ರೋಗದ ಲಕ್ಷಣಗಳಾಗಿರುತ್ತವೆ. ಮದ್ಯಪಾನ ಸೇವನೆಯನ್ನು ಮಿತಿಗೊಳಿಸುವುದು, ನಿಗದಿತ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ, ತೂಕ ನಿರ್ವಹಣೆ ಮತ್ತು ಹೆಪಟೈಟಿಸ್ ಬಿ ಮತ್ತು ಸಿ ವೈರಸ್‍ಗಳ ಸೋಂಕು ಉಂಟಾಗದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದರಿಂದ ಈ ರೋಗವನ್ನು ತಗ್ಗಿಸಬಹುದು.

ಈ 4 ರೀತಿಯ ಕ್ಯಾನ್ಸರ್‍ಗಳು ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುತ್ತವೆ. ರೋಗವನ್ನು ತಡೆಯುವ ಕ್ರಮಗಳನ್ನು ಅನುಸರಿಸು ವುದು ಮತ್ತು ಸರಿಯಾದ ಕಾಲಕ್ಕೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿದೆ ಎಂದು ವೈದ್ಯಕೀಯ ಕ್ಯಾನ್ಸರ್ ರೋಗಶಾಸ್ತ್ರ ಮತ್ತು ರಕ್ತ ಕ್ಯಾನ್ಸರ್ ರೋಗಶಾಸ್ತ್ರ- ಫೆÇೀರ್ಟಿಸ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನ ನಿರ್ದೇಶಕÀ ನಿತಿ ರೈಜಾದಾ ಹೇಳುತ್ತಾರೆ.

Facebook Comments