Saturday, September 23, 2023
Homeಆರೋಗ್ಯ / ಜೀವನಶೈಲಿಗ್ರಾಹಕರ ಸೇವೆಗಳಿಗಾಗಿ ಕ್ಯಾಪ್ ಜೆಮಿನಿ DCX ಫೌಂಡ್ರಿ

ಗ್ರಾಹಕರ ಸೇವೆಗಳಿಗಾಗಿ ಕ್ಯಾಪ್ ಜೆಮಿನಿ DCX ಫೌಂಡ್ರಿ

- Advertisement -

ಬೆಂಗಳೂರು, ಕ್ಯಾಪ್ ಜೆಮಿನಿ DCX ಫೌಂಡ್ರಿ ತನ್ನ ಗ್ರಾಹಕರಿಗೆ ಸಂಸ್ಥೆಯು ಪರಿಕಲ್ಪನೆ, ನಾವೀನ್ಯತೆಯಲ್ಲಿ ಅತ್ಯುತ್ಕೃಷ್ಟವಾದ ಗ್ರಾಹಕ ಅನುಭವ ಹೆಚ್ಚಿಸುವ ನಿಟ್ಟಿನಲ್ಲಿ ಪಾಲುದಾರರೊಂದಿಗೆ ಪಾಲುದಾರಿಕೆಯನ್ನು ಬೆಳೆಸುವತ್ತ ಸಹಕಾರ ಮತ್ತು ಕ್ರಿಯಾತ್ಮಕ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಸಂಸ್ಥೆಯ ಈವಿಪಿ ಸಂಜಯ್ ಬನ್ಯಾಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕುರಿತು ಮಾತನಾಡಿದ ಇವರು ತಂತ್ರಜ್ಞಾನದ ವಿಕಾಸವನ್ನು ಆಧರಿಸಿ ಅದರಂತೆ ಕಟ್ಟ ಕಡೆಯ ಗ್ರಾಹಕರವರೆಗೂ ಹೆಚ್ಚುತ್ತಿರುವ ನಿರೀಕ್ಷೆಗಳನ್ನು ನಿರಂತರವಾಗಿ ಮರುರೂಪಿಸುತ್ತಾ ಬರಲಾಗುತ್ತಿದೆ. ಮಾರುಕಟ್ಟೆಯಲ್ಲಿರುವ ಸ್ಪರ್ಧಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು ಉದ್ಯಮಗಳು ಇಂತಹ ಅನುಭವಗಳನ್ನು ನೀಡಬೇಕಾಗಿದೆ.

- Advertisement -

ಈ ಹಿನ್ನಲೆಯಲ್ಲಿ DCX ಫೌಂಡಿ ಸಂಸ್ಥೆಯು ಉದ್ಯಮಗಳು ಸ್ಪರ್ಧಾತ್ಮಕ ಮತ್ತು ಸಮರ್ಥನೀಯವಾಗಿ ಕಾರ್ಯ ನಿರ್ವಹಣೆ ಮಾಡಲು ಅನುವು ಮಾಡಿಕೊಡುವ ಸಂದರ್ಭದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ವಿಕಸನಗೊಳಿಸುವಾಗ ಎದುರಾಗುವ ಸಂದಿಗ್ಧತೆಗಳು ಅಥವಾ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಯುಪಿಯಲ್ಲಿ ಪ್ರಿಯಾಂಕ್ ಖರ್ಗೆ, ಉದಯನಿಧಿ ವಿರುದ್ಧ ಎಫ್‍ಐಆರ್ ದಾಖಲು

ಗ್ರಾಹಕರ ಅನುಭವಗಳನ್ನು ಗುಣಮಟ್ಟದಲ್ಲಿ ಉನ್ನತೀಕರಿಸಲು ಮತ್ತು ಈ ಅನುಭವಗಳನ್ನು ಮುಂದಿನ ಪೀಳಿಗೆವರೆಗೆ ಮುಂದುವರಿಸಲು ಪೂರಕವಾದ ಅನುಭವ – ಆಧಾರಿತ ವಿನ್ಯಾಸಗಳನ್ನು ರಚಿಸುವತ್ತ ತನ್ನ ಚಿತ್ತವನ್ನು ಹರಿಸಿದೆ.DCX ಫೌಂಡ್ರಿಯು ತನ್ನ ಗ್ರಾಹಕರಿಗೆ ಒಂದು ಅತ್ಯುತ್ತಮವಾದ ಕಾರ್ಯತಂತ್ರದ ಪಾಲುದಾರ ಸಂಸ್ಥೆಯಾಗಿ ಮತ್ತು ಪರಿಣತ ಕಾರ್ಯನಿರ್ವಾಹಕ ಸಂಸ್ಥೆಯಾಗಿ ಸೇವೆ ಸಲ್ಲಿಸುವುದರೊಂದಿಗೆ ಉತ್ತಮ ಮೌಲ್ಯವನ್ನು ತಂದುಕೊಡುತ್ತಿದೆ. ಇದು ಸಮಗ್ರವಾಗಿ ಎಂಡ್-ಟು-ಎಂಡ್ ಮೌಲ್ಯವನ್ನು ಒದಗಿಸುತ್ತದೆ.

ಉದ್ಯಮಕ್ಕೆ ಅನುಗುಣವಾಗಿ ಕಾರ್ಯತಂತ್ರಗಳನ್ನು ರೂಪಿಸಿ ಗ್ರಾಹಕ ಪ್ರಯಾಣ ಕೇಂದ್ರಿತ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ಯಾಪ್ ಜೆಮಿನಿ ಪ್ರತಿ ಗ್ರಾಹಕರ ಅನುಭವವನ್ನು ಅವರ ಅನನ್ಯ ವ್ಯಾಪಾರ ಅಗತ್ಯಗಳೊಂದಿಗೆ ಹೊಂದಾಣಿಕೆ ಮಾಡಲು ಸಹಕಾರಿಯಾಗಿದೆ ಎಂದರು.

Capgemini, #DCXFoundry, #Immersive, #Customer, #Experience,

- Advertisement -
RELATED ARTICLES
- Advertisment -

Most Popular