ವೇಗವಾಗಿ ನುಗ್ಗಿ ಬಂದು ಗುದ್ದಿದ ಕಾರು, ಗ್ರಾಪಂ ಸದಸ್ಯ ಸಾವು

ವೀರಾಜಪೇಟೆ,ಜೂ.9- ವೇಗವಾಗಿ ಬಂದ ಕಾರು ರಸ್ತೆಬದಿ ಮಾತನಾಡುಡುತ್ತಾ ನಿಂತಿದ್ದ ಸ್ನೇಹಿತರತ್ತ ನುಗ್ಗಿದ ಪರಿಣಾಮ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವೀರಾಜಪೇಟೆ ತಾಲ್ಲೂಕಿನ ಹರಿಶ್ಚಂದ್ರಪುರದಲ್ಲಿ ನಡೆದಿದೆ.

ಗೋಣಿಕೊಪ್ಪ ಗ್ರಾಮಪಂಚಾಯ್ತಿ ಸದಸ್ಯ ಕಲಿಮುಲ್ಲಾ ಮೃತಪಟ್ಟ ದುರ್ದೈವಿ.  ನಿನ್ನೆ ರಾತ್ರಿ ಹರಿಶ್ಚಂದ್ರಪುರ ವೃತ್ತದಲ್ಲಿ ಕಲಿಮುಲ್ಲಾ ಮತ್ತು ಸ್ನೇಹಿತರು ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಕೊಡಗು ಕಡೆಯಿಂದ ವೇಗವಾಗಿ ಬಂದ ಕಾರು ಇವರ ಮೇಲೆ ನುಗ್ಗಿದೆ. ಪರಿಣಾಮ ಕಲ್ಲಿಮುಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ವೀರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗ್ರಾಮ ಪಂಚಾಯ್ತಿ ಸದಸ್ಯನ ಸಾವಿಗೆ ಹರಿಶ್ಚಂದ್ರಪುರ ಹಾಗೂ ಗೋಣಿಕೊಪ್ಪ ಗ್ರಾಮಸ್ಥರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ದುಃಖ ವ್ಯಕ್ತಪಡಿಸಿದ್ದಾರೆ.