ಕೊಯಮತ್ತೂರಿನ ದೇವಸ್ಥಾನದ ಬಳಿ ಕಾರ್ ಸ್ಫೋಟ, ಉಗ್ರರ ಕೈವಾಡದ ಶಂಕೆ

Social Share

ನವದೆಹಲಿ,ಅ.24-ಕೊಯಮತ್ತೂರಿನ ದೇವಸ್ಥಾನದ ಬಳಿ ಸಂಭವಿಸಿದ ಕಾರ್ ಸ್ಫೋಟ ದ ಪ್ರಕರಣದ ನಂತರ ತಮಿಳುನಾಡಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಾರ್ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡ ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನಲೆಯಲ್ಲಿ ತಮಿಳುನಾಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಉಗ್ರರು ತಮಿಳುನಾಡಿನಲ್ಲಿ ದುಷ್ಕøತ್ಯ ನಡೆಸುವ ಸಾಧ್ಯತೆ ಇರುವ ಕಾರಣ ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಾರು ಸ್ಫೋಟಿಸಿ ಮೃತಪಟ್ಟ ಮುಬಿನಾ ಅವರನ್ನು 2019ರಲ್ಲಿ ಐಸಿಸ್ ಸಂಪರ್ಕದ ಆರೋಪದ ಮೇಲೆ ಎನ್‍ಐಎ ಪೊಲೀಸರು ಪ್ರಶ್ನಿಸಿದ್ದರು.

ಕಾರ್ಗಿಲ್‍ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪ ಹೊಂದಿದ್ದ ಮುಬಿನಾ ಅವರು ಕಾರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ನಂತರ ಅವರ ಮನೆಯಲ್ಲಿ ಹುಡುಕಾಟ ನಡೆಸಿದಾಗ ಪೊಟ್ಯಾಷಿಯಮ್ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್, ಇದ್ದಿಲು, ಗಂಧಕ ಮತ್ತಿತರ ಸೋಟಕ ತಯಾರಿಕಾ ಕಚ್ಚಾ ವಸ್ತುಗಳು ದೊರೆತಿದ್ದವು.

ಕಾರ್ಗಿಲ್‍ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಅಲ್ಲದೆ, ಸ್ಫೋಟಗೊಂಡ ಕಾರಿನಲ್ಲಿ ಮೊಳೆಗಳು, ಮಾರ್ಬಲ್‍ಗಳು ಮತ್ತು ಇತರ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ವಿಧಿವಿಜ್ಞಾನ ವಿಭಾಗಕ್ಕೆ ರವಾನಿಸಲಾಗಿದೆ ಎಂದು ತಮಿಳುನಾಡು ಪೊಲೀಸ್ ಮುಖ್ಯಸ್ಥ ಶೈಲೆಂದ್ರ ಬಾಬು ತಿಳಿಸಿದ್ದಾರೆ.

Articles You Might Like

Share This Article