ಪಣಜಿ, ಜು 28 -ನಾಲ್ಕು ಜನರಿದ ಐಷಾರಾಮಿ ಕಾರು ಸೇತುವೆಯಿಂದ ಜುವಾರಿ ನದಿಗೆ ಬಿದ್ದ ಘಟನೆ ಇಂದು ಮುಂಜಾನೆ ದಕ್ಷಿಣ ಗೋವಾ ನಡೆದಿದೆ. ಬೆಳಗಿನ ಜಾವ 1.10 ರ ಸುಮಾರಿಗೆ ಸಂಭವಿಸಿದ ಈ ಅಪಘಾತದ ಸಂಭವಿಸಿದ್ದು ಭಾರತೀಯ ಕರಾವಳಿ ಪಡೆ, ನೌಕಾಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದ್ದಿ ಮತ್ತು ಪೊಲೀಸರು ವಾಹನ ಮತ್ತು ಅದರಲ್ಲಿದ್ದವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ರಾಜ್ಯ ರಾಜಧಾನಿ ಪಣಜಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಕೊರ್ಟಾಲಿಮ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಹೊಗುತ್ತಿದ್ದ ವಾಹನವನ್ನು ಔವರ್‍ಟೇಕ್ ಮಾಡಲು ಹೋಗಿ ಕಾರು ಜುವಾರಿ ನದಿ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರಿನಲ್ಲಿ ಕನಿಷ್ಠ ನಾಲ್ಕು ಜನರಿದ್ದರು ಮತ್ತು ಅದನ್ನು ಮಹಿಳೆ ಓಡಿಸುತ್ತಿದ್ದರು ಎಂದು ಹೇಳಿದ್ದಾರೆ ಭಾರತೀಯ ನೌಕಾಪಡೆಯ ಈಜುಗಾರರು ಕೂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದ್ದಾರೆ.ಕಾರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರಬಹುದು ಎಂಬ ಆನುಮಾನವಿದೆ.