ಉತ್ತರ ಗ್ರೀಸ್‍ನ ಕವಾಲಾ ನಗರದ ಬಳಿ ಕಾರ್ಗೋ ವಿಮಾನ ಪತನ

Social Share

ಗ್ರೀಸ್.ಜು.17- ಉತ್ತರ ಗ್ರೀಸ್‍ನ ಕವಾಲಾ ನಗರದ ಬಳಿ ಉಕ್ರೇನಿಯನ್ ಏರ್‍ಲೈನ್ಸ್ ನಿರ್ವಹಿಸುತ್ತಿದ್ದ ಆಂಟೊನೊವ್ ಕಾರ್ಗೋ ವಿಮಾನ ಪತನಗೊಂಡಿದೆ. ಅಪಘಾತದ ನಂತರ ಭಾರಿ ಸದ್ದು ಕೇಳಿಸಿತು, ಬೆಂಕಿಯ ಉಂಡೆಯಾಗಿ ವಿಮಾನ ಉರಿದು ಬೂದಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಮಾನವು ಸರ್ಬಿಯಾದಿಂದ ಜೋರ್ಡಾನ್‍ಗೆ ಹೋಗುತ್ತಿತ್ತು ಎಂದು ಗ್ರೀಸ್ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಎನ್-12, ಸೋವಿಯತ-ನಿರ್ಮಿತ ಟರ್ಬೊಪ್ರೊಪ್ ವಿಮಾನವನ್ನು ಕಾಗೋ ಕ್ಯಾರಿಯರ್ ಮೆರಿಡಿಯನ್ ಕಂಪನಿ ನಿರ್ವಹಿಸುತ್ತಿತ್ತು.ವಿಮಾನದಲ್ಲಿ ಎಂಟು ಜನರಿದ್ದರು ಮತ್ತು ಅದು 12 ಟನ್‍ಗಳಷ್ಟು ಅಪಾಯಕಾರಿ ವಸ್ತುಗಳನ್ನು, ಹೆಚ್ಚಾಗಿ ಸ್ಪೋಟಕಗಳನ್ನು ಹೊತ್ತೊಯ್ಯುತ್ತಿತ್ತು ಎಂದು ಗ್ರೀಕ್ ಮಾಧ್ಯಮ ವರದಿ ಮಾಡಿದೆ.

ಆದರೆ ಸ್ಥಳೀಯ ಅಧಿಕಾರಿಗಳು ಸರಕುಗಳ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೀಡಿಲ್ಲ .ಅಪಘಾತದ ಸ್ಥಳದಿಂದ ತೀವ್ರ ವಾಸನೆ ಬರುತ್ತಿದ್ದರಿಂದ ಮುನ್ನೆಚ್ಚರಿಕೆಯಾಗಿ, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿಯು ಅಪಘಾತ ಸಂಭವಿಸಿದ ಸ್ಥಳಕ್ಕೆ ಸಮೀಪವಿರುವ ಎರಡು ಪ್ರದೇಶಗಳ ನಿವಾಸಿಗಳಿಗೆ ಕಿಟಕಿಗಳನ್ನು ಮುಚ್ಚುವಂತೆ ತಿಳಿಸಿದೆ ಮತ್ತು ಮುಖವಾಡಗಳನ್ನು ಧರಿಸಲು ಹೇಳಿದ್ದಾರೆ.

ಗ್ರೀಸ್ ನಾಗರಿಕ ವಿಮಾನಯಾನ ಪ್ರಾಕಾರವು ವಿಮಾನದ ಇಂಜಿನ್‍ನಲ್ಲಿ ಸಮಸ್ಯೆಯ ಬಗ್ಗೆ ಎಚ್ಚರಿಸುವಲ್ಲಿ ಪೈಲಟ್ ಯಶಸ್ವಿಯಾದರು ಮತ್ತು ಅವರಿಗೆ ಥೆಸಲೋನಿಕಿ ಅಥವಾ ಕವಾಲಾ ವಿಮಾನ ನಿಲ್ದಾಣಗಳಲ್ಲಿ ತುರ್ತು ಲ್ಯಾಂಡಿಂಗ್ ಮಾಡಲುಆಯ್ಕೆಯನ್ನು ನೀಡಲಾಯಿತು ಮತ್ತು ಅವರು ಕವಾಲಾವನ್ನು ಆಯ್ಕೆ ಮಾಡಿಕೊಂಡರುನ ತರಸಂವಹನವು ತಕ್ಷಣವೇ ಸ್ಥಗಿತಗೊಂಡಿತು.

ವಿಮಾನ ನಿಲ್ದಾಣದಿಂದ ಪಶ್ಚಿಮಕ್ಕೆ 40 ಕಿಲೋಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದೆ.
ಅಪಘಾತದ ನಂತರ ಎರಡು ಗಂಟೆಗಳ ಕಾಲ ಸ್ಪೋಟಗಳು ಕೇಳಿಬಂದವು ಎಂದು ಸುದ್ದಿಮಾಧ್ಯಮಗಳುತಿಳಿಸಿದೆ,

Articles You Might Like

Share This Article