ಬೆಂಗಳೂರು,ಫೆ.5- ಪುಂಡನೊಬ್ಬ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ದಾಂಧಲೆ ನಡೆಸಿರುವ ಘಟನೆ ಮಲ್ಲೇಶ್ವರಂ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಮಲ್ಲೇಶ್ವರದ 13ನೇ ಕ್ರಾಸ್, 2ನೇ ಮೇನ್‍ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳ ಮೇಲೆ ದಾಳಿ ನಡೆಸಿದ ಪುಂಡನೊಬ್ಬ ದೊಣ್ಣೆಯಿಂದ ಗಾಜುಗಳನ್ನು ಪುಡಿ ಪುಡಿ ಮಾಡಿ ಪರಾರಿ ಯಾಗಿದ್ದಾನೆ. ಬೆಳಗ್ಗೆ ಕಾರಿನ ಮಾಲೀಕರು ಹಾಗೂ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುತೂಹಲ ಕೆರಳಿಸಿದ ಬೊಮ್ಮಾಯಿ ಹಾಗೂ ಬಿಎಸ್‌ವೈ ದೆಹಲಿ ಪ್ರವಾಸ
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮಲ್ಲೇಶ್ವರಂ ಪೊಲೀಸ್ ಠಾಣೆ ಸಿಬ್ಬಂದಿಗಳು ಸಿಸಿಟಿವಿಯ ಫುಟೇಜ್‍ನ್ನು ಪರಿಶೀಲನೆ ನಡೆಸಿದಾಗ , ಮುಂಜಾನೆ ಪುಂಡನೊಬ್ಬ ದಾಂಧಲೆ ನಡೆಸಿರುವುದು ಸೆರೆಯಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಠಾಣೆ ಪೊಲೀಸರು ಪುಂಡನ ಪತ್ತೆಗೆ ಬಲೆ ಬೀಸಿದ್ದಾರೆ.
cars, Malleswaram, police station,