ಖ್ಯಾತ ವ್ಯಂಗ್ಯ ಚಿತ್ರಕಾರ ನಾರಾಯಣ ವಿಧಿವಶ

Social Share

ಕೋಲ್ಕತ್ತಾ, ಜ. 18- ಬಂತೂಲ್ ದಿ ಗ್ರೇಟ್, ಹಂಡಾ ಬೋಂಡಾ, ನೋಂಟೆ ಪೋ0ಟೆ ಎಂಬ ಹಾಸ್ಯ ಕಾರ್ಟೂನ್‍ಗಳನ್ನು ಬಿಡಿಸುವ ಮೂಲಕ ಖ್ಯಾತರಾಗಿದ್ದ ವ್ಯಂಗ್ಯ ಚಿತ್ರಕಾರ ನಾರಾಯಣ ದೇಬಾಂತ್ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾರಾಯ ದೇಬಾಂತ್ ಅವರನ್ನು ಡಿಸೆಂಬರ್ 24 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಆದರೆ ಇಂದು ಬೆಳಗ್ಗೆ 10.15ಕ್ಕೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ.
1925, ನವೆಂಬರ್ 25ರಂದು ಔರಾದಲ್ಲಿ ಜನಿಸಿದ ನಾರಾಯಣ್ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಯ ಮೇಲೆ ಅಪಾರ ಪ್ರೀತಿಯಿತ್ತು ಅವರು ಬಿಡಿಸಿದ ಹಂಡ ಬೋಂಡಾ ಎಂಬ ವ್ಯಂಗ್ಯ ಚಿತ್ರವೊಂದು ಅಲ್ಲಿನ ಪತ್ರಿಕೆಯೊಂದರಲ್ಲಿ 53 ವರ್ಷಗಳ ಕಾಲ ಪ್ರಕಟವಾಗಿತ್ತು. ಬ್ಲಾಕ್ ಡೈಮಾಂಡ್ ಇಂದ್ರಜಿತ್ ರಾಯ್, ಪಾತೋಲ್‍ಚಂದ್ ದಿ ಮೆಜಿಸಿಯನ್, ಸುಕ್ತಿ-ಮುಕ್ತಿ, ಹಸೀರ್ ಆಟಂ ಬಾಂಬ್ ಸೇರಿದಂತೆ ಇವರು ಬಿಡಿಸಿದ ಹಲವಾರು ವ್ಯಂಗ್ಯ ಚಿತ್ರಗಳು ಗಮನ ಸೆಳೆದಿದ್ದರು.
ನಾರಾಯಣ ದೇಬಾಂತ್ ಅವರ ಕಲಾ ಜೀವನವನ್ನು ಗುರುತಿಸಿ ಕೇಂದ್ರ ಸರ್ಕಾರವು 2021ರಲ್ಲಿ ದೇಶದ 4ನೆ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ರಾಷ್ಟ್ರಪತಿಗಳ ವಿಶೇಷ ಪ್ರಶಸ್ತಿ (2007), ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2013), ಬಾಂಗ್ಲಾ ಭೂಷಣ್ (2013) ಸೇರಿದಂತೆ ಹಲವು ಪ್ರಶಸ್ತಿಗೆ ಪುರಸ್ಕøತರಾಗಿದ್ದರು.
ಖ್ಯಾತ ವ್ಯಂಗ್ಯ ಚಿತ್ರಕಾರ ನಾರಾಯಣ ಅವರ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Articles You Might Like

Share This Article