ನವರಾತ್ರಿಯಲ್ಲಿ ನವ ದೇವತೆಗಳ ಆರಾಧನೆಯ ವಿಶೇಷತೆ ಗೊತ್ತೆ..?

ನವರಾತ್ರಿ ಹಿಂದೂ ಧರ್ಮದಲ್ಲಿ, ಸ್ತ್ರೀಯರ ಗೌರವಾರ್ಥವಾಗಿ ನಡೆಯುವ ಪ್ರಮುಖ ಹಬ್ಬ. ದುರ್ಗಾ ಪೂಜೆ. ಅಶ್ವಿನಿ, ಅಥವಾ ಅಶ್ವಿನಾ ತಿಂಗಳಲ್ಲಿ ನವರಾತ್ರಿ 9 ದಿನಗಳು ಸಂಭವಿಸುತ್ತದೆ. (ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ, ಸಾಮಾನ್ಯವಾಗಿ ಸೆಪ್ಟೆಂಬರ್ – ಅಕ್ಟೋಬರ್) 10ನೇ ದಿನದವನ್ನು ದಸರಾ – ವಿಜಯದಶಮಿ ಎಂದೂ ಕರೆಯುತ್ತಾರೆ. ಭಾರತದ ವಿವಿಧ ಪ್ರದೇಶಗಳಲ್ಲಿ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಕೆಲವು ಭಾಗಗಳಲ್ಲಿ, ದಸರಾವನ್ನು ಹಬ್ಬದ ಕೇಂದ್ರ ಬಿಂದುವಾಗಿ ಪರಿಗಣಿಸಲಾಗುತ್ತದೆ. ಶರದ್ ನವರಾತ್ರಿ ಎಂದೂ ಕರೆಯಲ್ಪಡುವ ಶರತ್ಕಾಲದ ಆರಂಭದ ಹಬ್ಬ ಅತ್ಯಂತ ಮಹತ್ವದ್ದಾಗಿದೆ. ಈ ಭಾರತದ […]

ಸ್ವರ್ಣ ಗೌರಿ ಹಬ್ಬದ ಮಹತ್ವ ಗೊತ್ತೇ..?

ಹಿಂದೂ ಸಂಪ್ರಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆ ಹಾಗೂ ಧಾರ್ಮಿಕ ಸಂಪ್ರದಾಯ ಹೊಂದಿವೆ. ಅಂತಹ ಹಬ್ಬಗಳಲ್ಲಿ ಗೌರಿ – ಗಣೇಶ ಹಬ್ಬ ಅತ್ಯಂತ ಪ್ರಮುಖವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ. ಗೌರಿ ಹಬ್ಬಕ್ಕೆ ವಿಶೇಷ ಸ್ಥಾನವಿದ್ದು, ಗೌರಿ ಭೂಮಿಗೆ ಬರುತ್ತಾಳೆ ಎಂಬ ಪ್ರತೀತಿಯಿದೆ. ಗೌರಿ ದೇವಿ ಪ್ರಕೃತಿಯ ಸ್ವರೂಪ. ಪಾರ್ವತಿ ದೇವಿಯ ಅಪರಾವತಾರ. ಕುಟುಂಬದ ಸಂತೋಷ, ಸಮೃದ್ಧಿ ಹೆಚ್ಚಿಸಲಿ, ನಮಗೆ ಶಕ್ತಿನೀಡಲಿ ಎಂದು ಶ್ರದ್ಧೆ-ಭಕ್ತಿಯಿಂದ ಗೌರಿಯನ್ನು ಪೂಜಿಸಲಾಗುವುದು. ಗೌರಿ ಹಬ್ಬವನ್ನು ಸುವರ್ಣ ಗೌರಿ ಹಬ್ಬವೆಂದು […]

ಸ್ವಾತಂತ್ರ್ಯ ಅಮೃತ ಮಹೋತ್ಸವ, ಇದು ಆತ್ಮಾವಲೋಕನಕ್ಕೆ ಸಕಾಲ

*ಸುಮ ಚಂದ್ರಶೇಖರ್ಎಪ್ಪತ್ತೈದು ವರ್ಷಗಳ ಅನುಭವದಲ್ಲಿ ಈಗ ಕಲಿಯಬೇಕಾದ ಪಾಠವೆಂದರೆ ಗುರಿ ಮುಟ್ಟುವುದಕ್ಕಿಂತಲೂ ಗುರಿ ಮುಟ್ಟುವ ದಾರಿ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಎಲ್ಲಿಯವರೆಗೆ ಹೋರಾಟ ಗೆಲ್ಲುವವರೆಗೆ ಹೋರಾಟ ಎಂಬುದು ರಾಜಕೀಯ ಪಕ್ಷಗಳ ಮಹಾಗುರಿ. ಈ ಗುರಿ ಮುಟ್ಟಲು ಯಾವುದೇ ಮಾರ್ಗವಾದರೂ ಸರಿ ಎಂಬ ನಂಬಿಕೆಯನ್ನು ಕಿತ್ತೊಗೆಯುವುದು ಭಾರತೀಯರ ಮಟ್ಟಿಗೆ ದೊಡ್ಡ ಸವಾಲು. ಆಗ ಮಾತ್ರ ದಾಸ್ಯದಿಂದ ಪಡೆದ ವಿಮೋಚನೆ ಭಾರತೀಯರಿಗೆ ನಿಲುಕುವ ಸಾಧ್ಯತೆ ಖಚಿತ. ಅದುವೆ ಗಾಂ ಮಹಾತ್ಮ ಪ್ರತಿಪಾದಿಸಿದ ರಾಮರಾಜ್ಯದ ಸಂಸ್ಥಾಪನೆ. ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಗಿ […]

ಸಿಎಂ ಹಾಗೂ ಗೃಹ ಸಚಿವರ ನಿವಾಸಕ್ಕೆ ನುಗ್ಗಲೆತ್ನಿಸಿದ ಎಬಿವಿಪಿ ಕಾರ್ಯಕರ್ತರು, ಲಘು ಲಾಠಿ ಪ್ರಹಾರ

ಬೆಂಗಳೂರು,ಜು.30- ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಮೂರು ದಿನಗಳ ಹಿಂದೆ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್‍ನೆಟ್ಟಾರು ಕೊಲೆ ಪ್ರಕರಣದ ಬಿಸಿ ಇದೀಗ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೂ ತಟ್ಟಿದ್ದು, ಬಿಜೆಪಿ ವಿರುದ್ಧ ಎಬಿವಿಪಿ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.ಮೂರು ದಿನಗಳ ಹಿಂದಷ್ಟೇ ಬಿಜೆಪಿ ರಾಜ್ಯಾದ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರಾದ ಸುನೀಲ್‍ಕುಮಾರ್ ಅಂಗಾರ ಸೇರಿದಂತೆ ವಿವಿಧ ಮುಖಂಡರಿಗೆ ಬಿಸಿ ಮುಟ್ಟಿಸಿದ್ದ ಆರ್‍ಎಸ್‍ಎಸ್‍ನ ಅಂಗ ಸಂಸ್ಥೆಗಳು, ಇದೀಗ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧವೇ […]

ಹೆತ್ತವರ ಸೇವೆ ಮಾಡಿ ಎತ್ತರಕ್ಕೇರಿದ ಬಸವರಾಜ ಬೊಮ್ಮಾಯಿ

(ಜ.28 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ವಿಶೇಷ ಲೇಖನ) ನೈತಿಕ ಮೌಲ್ಯಗಳು, ಬಡವರಪರ ಕಳಕಳಿ, ಕರ್ತವ್ಯಪರತೆ ಇವೆಲ್ಲವುಗಳ ಒಟ್ಟುಗೂಡಿದ ಮೂರ್ತರೂಪ ಬಸವರಾಜ ಬೊಮ್ಮಾಯಿ.ಅವರು ಇಂದು ನಾಡಿನ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿದ್ದರೂ ಸರಳತೆ,ಸ್ಪಂದನಶೀಲತೆಗೆ ಹೆಸರಾದವರು.ಕಷ್ಟದಲ್ಲಿರುವವರಿಗೆ ಮಿಡಿಯುವ ಗುಣ , ಅಭಿವೃದ್ಧಿ ಪರ ಚಿಂತನೆ ಮತ್ತು ಕಾರ್ಯಗಳು ಅವರ ವ್ಯಕ್ತಿತ್ವವೇ ಆಗಿವೆ. ಇಂತಹ ಉದಾತ್ತತೆ ಅವರಿಗೆ ತಂದೆ-ತಾಯಿಯವರಿಂದ ರಕ್ತಗತವಾಗಿಯೇ ಬಂದ ಬಳುವಳಿಯಾಗಿದೆ. ಬಸವರಾಜ ಬೊಮ್ಮಾಯಿಯವರು ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಅನರೋಗ್ಯಕ್ಕೀಡಾದ ತಮ್ಮ ಹೆತ್ತ […]

ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ ನಕಲಿ ಮದ್ಯದ ಹಾವಳಿ

#ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು, ಜ.18- ಸೆಕೆಂಡ್ಸ್  ಮದ್ಯದ ಹಾವಳಿ ತಡೆಗಟ್ಟಿ ದಶಕ ಕಳೆದರೂ ಇದೀಗ ಅದನ್ನು ಮೀರಿಸುವ ನಕಲಿ ಮದ್ಯದ ಜಾಲ ರಾಜ್ಯಾದ್ಯಂತ ವ್ಯವಸ್ಥಿತವಾಗಿ ಹಬ್ಬುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಪ್ರಭಾವಿಗಳೇ ಕಿಂಗ್ ಪಿನ್‍ಗಳಾಗಿ ಈ ನಕಲಿ ಮದ್ಯದ ಜಾಲವನ್ನು ನಡೆಸುತ್ತಿದ್ದು, ಮೊದಲ ಹಂತದಲ್ಲಿ ರಾಜ್ಯದ ಪ್ರಮುಖ ನಗರ ಪ್ರದೇಶಗಳನ್ನು ಈ ನಕಲಿ ಮದ್ಯ ಆವರಿಸುತ್ತಿದೆ. ಅದರಲ್ಲೂ ದುಬಾರಿ ಬೆಲೆಯ ಮದ್ಯದ ಬ್ರಾಂಡ್‍ಗಳನ್ನು ನಕಲು ಮಾಡಲಾಗುತ್ತಿದ್ದು, ಇದು ಮಿಲ್ಟ್ರಿ ಕ್ಯಾಂಟೀನ್ ದಾಸ್ತಾನು ಎಂಬಂತೆ ಪ್ರತಿಬಿಂಬಿಸಿ ಮಾರಾಟ ಮಾಡಲಾಗುತ್ತಿದೆ. […]