ವೋಟರ್ ಡೇಟಾ ಅಕ್ರಮ ನಡೆದಿಲ್ಲ ಎಂದಾದರೆ IAS ಅಧಿಕಾರಿಗಳ ಅಮಾನತಾಗಿದ್ದೇಕೆ..?

ಬೆಂಗಳೂರು, ನ.26- ಮತದಾರರ ಪಟ್ಟಿಯಲ್ಲಿ ಅಕ್ರಮಗಳೇ ನಡೆದಿದ್ದ ಎಂದು ವಾದಿಸುತ್ತಿದ್ದ ಮುಖ್ಯಮಂತ್ರಿಯವರೆ, ಹಾಗಿದ್ದರೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು ಯಾಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮತದಾರರ ಪಟ್ಟಿ ಅಕ್ರಮಗಳ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಗರಣಗಳ ಬಗ್ಗೆ ಬಿಜೆಪಿ ವರಸೆಗಳು ಹಾಸ್ಯಾಸ್ಪದವಾಗಿವೆ. ಮೊದಲು ಅಕ್ರಮವೇ ನಡೆದಿಲ್ಲ ಎಂದು ನಿರಾಕರಿಸಲಾಗುತ್ತದೆ. ಹಗರಣ ಹೊರಬಂದನಂತರ ಇದೊಂದು ಸಣ್ಣ ಲೋಪ ಎಂಬಂತೆ ಮಾತಾಡುತ್ತದೆ. ಹಗರಣದ ತೀವ್ರತೆ ಹೊರಬಂದಾಗ ಪ್ರಭಾವಿಗಳ ರಕ್ಷಣೆಗೆ ತಂತ್ರ ಹೂಡುತ್ತದೆ. ಪಿಎಸ್‍ಐ […]

BIG NEWS : ನಿಮ್ಮ ಖುಷಿ ತುಂಬಾ ದಿನ ಇರಲ್ಲ : ADGP ಅಲೋಕ್ ಕುಮಾರ್‌ಗೆ ಜೀವ ಬೆದರಿಕೆ

ಬೆಂಗಳೂರು,ನ.24-ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ತಿರುವು ದೊರೆತಿದ್ದು, ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಘಟನೆಯ ಹೊಣೆ ಹೊತ್ತುಕೊಂಡಿದೆ. ಜತೆಗೆ ಎಡಿಜಿಪಿ ಅಲೋಕ್‍ಕುಮಾರ್‍ಗೂ ಬೆದರಿಕೆ ಹಾಕಲಾಗಿದೆ. ಅನಾಮದೇಯ ಮೂಲಗಳಿಂದ ಬಂದಿರುವ ಪತ್ರಿಕಾ ಹೇಳಿಕೆಯ ತಲೆಬರಹ ಅರೆಬಿಕ್ ಭಾಷೆಯಲ್ಲಿದೆ. ಮಜಿಲ್ ಅಲ್ ಮುಕ್ವಾವಹಮ್ಮದ್ ಅಲ್-ಇಸ್ಲಾಮಿಯಾ ಎಂದು ಬರೆಯಲಾಗಿದ್ದು, ಕೆಳಗೆ ಶಂಕಿತ ಉಗ್ರ ಶಾರಿಕ್‍ನ ಎರಡು ಫೋಟೋಗಳನ್ನು ಪ್ರಕಟಿಸಲಾಗಿದೆ. ಒಂದು ಫೋಟೋ ಆತ ಸೋಟಕ್ಕೂ ಮುನ್ನ ಸ್ಟೈಲೀಶ್‍ಆಗಿ ಫೋಸ್‍ಕೊಟ್ಟಿರುವುದು, ಮತ್ತೊಂದು ಸ್ಪೋಟದ ಬಳಿಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. […]

ಮಿಜೋರಾಂನಲ್ಲಿ ಭಾರಿ ಪ್ರಮಾಣದ ಸ್ಪೋಟಕ ವಶಕ್ಕೆ ಪಡೆದ ಎನ್‍ಐಎ

ನವದೆಹಲಿ, ನ.23- ಮಿಜೋರಾಂನಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಸ್ಪೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಜ್ವಾಲಿನ್‍ನಲ್ಲಿ ಲಾಲ್ರಿಂಗ್ಸಂಗ (54) ಎಂಬುವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 21 ರಂದು ಮಿಜೋರಾಂನ ಟಿಪಾದ ಬಳಿ ವಾಹನದಲ್ಲಿ ಸಾಗಿಸುತ್ತಿದ್ದ 2,421 ಕೆಜಿ ಸ್ಪೋಟಕಗಳು, 1,000 ಡಿಟೋನೇಟರ್‍ಗಳು, 4,500 ಮೀಟರ್ ಸ್ಪೋಟಿಸುವ ಫ್ಯೂಸ್ ವಯರ್ ಮತ್ತು – 73,500 ರೂ ನಗದು ಮತ್ತು 9.35 ಲಕ್ಷ ಮ್ಯಾನ್ಮಾರ್ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು […]

ಕೈ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ದಾಳಿ

ಚಿಕ್ಕಮಗಳೂರು, ನ.17- ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ನಿವಾಸದ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.10ಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ಚಿಕ್ಕಮಗಳೂರು ನಗರದ ಹೂವಿನ ಮಾರುಕಟ್ಟೆ ರಸ್ತೆಯಲ್ಲಿರುವ ಗಾಯತ್ರಿ ಶಾಂತೇಗೌಡರ ನಿವಾಸದ ಮೇಲೆ ದಾಳಿ ನಡೆಸಿದರು.ಯಾವುದೇ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ತಾವು ಬಂದ ವಾಹನಗಳ ಮೇಲೆ ಐಟಿ ಅಧಿಕಾರಿಗಳು ಮದುವೆ ಬೋರ್ಡ್ ಹಾಕಿಕೊಂಡಿದ್ದರು. ಅಭಿನವ ವೆಡ್ಸ್ ದೀಪಿಕಾ ಎಂದು ಐಟಿ ಅಧಿಕಾರಿಗಳ ವಾಹನಗಳ ಮೇಲೆ ಬೋರ್ಡ್ […]

ಇರೋ ಬಸ್ಸುಗಳಿಗೆ ಚಾಲಕರಿಲ್ಲ, ಬಿಎಂಟಿಸಿಗೆ ಹೊಸ ಬಸ್ ಖರೀದಿ ಅವಶ್ಯಕತೆ ಏನಿತ್ತು.. ?

ಬೆಂಗಳೂರು,ನ.17- ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಜುಟ್ಟಿಗೆ ಮಲ್ಲಿಗೆ ಹೂ ಬೇಕು ಅಂತರಲ್ಲ ಅನ್ನೋ ಗಾದೆ ಮಾತಿನ ಹಾಗೆ ಈಗಾಗಲೇ ನಷ್ಟದಲ್ಲಿದ್ದು ಮತ್ತೆ ಹೊಸ ಬಸ್‍ಗಳನ್ನು ಖರೀದಿ ಮಾಡಲು ಬಿಎಂಟಿಸಿ ಮುಂದಾಗಿದೆ.ಸದ್ಯ ಬಿಎಂಟಿಸಿಯಲ್ಲಿ 6500 ಬಸ್‍ಗಳು ಸಂಚರಿಸುತ್ತಿವೆ. ಈ ಬಸ್‍ಗಳ ಸಂಖ್ಯೆಯನ್ನು 10 ಸಾವಿರಕ್ಕೆ ಹೆಚ್ಚಿಸಲು ಬಿಎಂಟಿಸಿ ಪ್ಲಾನ್ ಹಾಕಿಕೊಂಡಿದೆ. ಈಗ ಇರುವ 6500 ಬಸ್‍ಗಳಿಗೆ ಚಾಲಕರು ಸಿಗದೆ ಹಲವಾರು ರೂಟ್‍ಗಳನ್ನು ಬಿಎಂಟಿಸಿ ನಿಗಮ ಕ್ಯಾನ್ಸಲ್ ಮಾಡುತ್ತಿದೆ. ಆದರೂ ಹೊಸ ಬಸ್ ಖರೀದಿಗೆ ಉತ್ಸಾಹ ತೋರುತ್ತಿರುವುದು ಯಾಕೆ ಅನ್ನೋದು […]

ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾಡೆಲ್ : 25 ಬಿಜೆಪಿಶಾಸಕರಿಗೆ ಕೊಕ್..!

ಬೆಂಗಳೂರು,ನ.12- ಕೇಂದ್ರ ಬಿಜೆಪಿ ವರಿಷ್ಠರು ಒಂದು ವೇಳೆ ಗುಜರಾತ್ ಮಾದರಿಯನ್ನೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಿದರೆ ಹಾಲಿ ಎರಡು ಡಜನ್ ಸಚಿವರು ಮತ್ತು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಮಾಡಿರುವ ಟ್ವೀಟ್ ಆಡಳಿತರೂಢ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಗುಜರಾತ್ ಮಾದರಿಯೇ ಅಂತಿಮ ಎಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಘಟಾನುಘಟಿ ಸಚಿವರು ಮತ್ತು ಶಾಸಕರಿಗೆ ಗೇಟ್ ಪಾಸ್ ಖಚಿತ ಎಂಬ ಮಾತು ಕೇಸರಿ ಪಾಳಯದಲ್ಲಿ ಕೇಳಿ ಬರುತ್ತಿವೆ. ಸಾಮಾನ್ಯವಾಗಿ […]

ಟಿ-20 ವಿಶ್ವಕಪ್ : ಆಂಗ್ಲರಿಗೆ ಐತಿಹಾಸಿಕ ಗೆಲುವು, ಭಾರತಕ್ಕೆ ಹೀನಾಯ ಸೋಲು

ಅಡಿಲೇಡ್,ನ.10-ಟಿ-20 ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಐತಿಹಾಸಿಕ ವಿಜಯ ಸಾಸಿದೆ. ಇಲ್ಲಿ ನಡೆದ ಎರಡನೇ ಸಮಿಪೈನಲ್‍ನಲ್ಲಿ ಭಾರತ ತಂಡದ ವಿರುದ್ದ ವಿಕೆಟ್ ನಷ್ಠವಿಲ್ಲದೆ 10 ವಿಕೆಟ್‍ಗಳ ಭರ್ಜರಿ ಗೆಲವು ಸಾಧಿಸಿರುವ ಇಂಗ್ಲೆಂಡ್ ಪೈನಲ್‍ಗೆ ಅದ್ವಿತೀಯ ಪ್ರವೇಶ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಯ್ಲಿ ಅವರ ಜವಾಬ್ದಾರಿಯಿತ ಆಟದ ನೆರವಿನಿಂದ 168 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ರೋಚಕ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್‍ನಾಯಕ ಬಟ್ಲರ್ ಮತ್ತು ಅಲೆಕ್ಸ್ […]

ಗುಜರಾತ್‍ ಚುನಾವಣೆ : ಬಿಜೆಪಿ 160 ಅಭ್ಯರ್ಥಿಗಳ ಪಟ್ಟಿ ಪ್ರಕಟ

ನವದೆಹಲಿ,ನ.10- ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್‍ನ ವಿಧಾನಸಭೆಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ 160 ಮಂದಿಗೆ ಬಿ ಫಾರಂ ಘೋಷಿಸಿದೆ. ಕೇಂದ್ರ ಸಚಿವರಾದ ಮನುಸ್ಕ್ ಮಾಂಡವೀಯ, ಭೂಪೇಂದ್ರಯಾದವ್, ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಟೇಲ್ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರ ಪ್ರಕಾರ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗಟ್ಲೋಡಿಯಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ ರೈವಾಬ ಜಡೇಜ ಅವರಿಗೆ ಜಾಮ್ನಾನಗರ್ ಉತ್ತರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ […]

ಟಿ-20 ವಿಶ್ವಕಪ್ : ಫೈನಲ್ ಪ್ರವೇಶಿಸಿದ ಪಾಕ್

ಸಿಡ್ನಿ : ಐಸಿಸಿ ವಿಶ್ವಕಪ್ ಕ್ರಿಕೆಟ್ ಟಿ ಟ್ವೆಂಟಿ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ತಂಡದ ವಿಲಿಯಮ್ಸ್ ಅವರ ಆಟದ ನೆರವಿನಿಂದ 152 ರನ್ಗಳ ಸವಾಲಿನ ಮೊತ್ತವನ್ನ ಕಲೆಹಾಕಿತು, ಪಾಕಿಸ್ತಾನ ವೇಗದ ಬೌಲರ್ ಗಳ ಕರಾರುವಕ್ಕೂ ದಾಳಿಗೆ ಕತ್ತರಿಸಿದ ನ್ಯೂಜಿಲ್ಯಾಂಡ್ ತಿಣುಕುತ್ತಲೇ ಆಗಾಗ ವಿಕೆಟ್ ಕಳೆದುಕೊಂಡರು ಕೂಡ 152 ರನ್ಗಳನ್ನ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನದ ರಿಜ್ವಾನ್ […]

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ, 6 ಮಂದಿ ಸಾವು

ಕಠ್ಮಂಡು/ನವದೆಹಲಿ, ನ.9-ನೇಪಾಳ ಗಡಿಯ ಉತ್ತರಾಖಂಡದ ಪಿಥೋರಗಢ ಸಮೀಪ ಹಿಮಾಲಯ ಪ್ರದೇಶದಲ್ಲಿ ಇಂದು ಮುಂಜಾನೆ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಉತ್ತರ ಭಾರತ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಪ್ರಬಲ ಕಂಪನಗಳು ಸಂಭವಿಸಿದೆ, ನಸುಕಿನ 1.57ಕ್ಕೆ ಸಂಭವಿಸಿದ 6.3 ತೀವ್ರತೆಯ ಭೂಕಂಪದ ಕೇಂದ್ರಬಿಂದು ಪಿಥೋರಗಢ್‍ನಿಂದ ಪೂರ್ವ ಆಗ್ನೇಯಕ್ಕೆ 90 ಕಿಮೀ ದೂರದಲ್ಲಿರುವ ನೇಪಾಳದಲ್ಲಿದೆ ಎಂದು ಭಾರತೀಯ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‍ಸಿಎಸ್) ತಿಳಿಸಿದೆ. ನೇಪಾಳದ ರಾಷ್ಟ್ರೀಯ ಭೂಕಂಪ ನಿಗಾ ಕೇಂದ್ರದ […]