1137 ಕಾನ್‍ಸ್ಟೆಬಲ್‍ಗಳ ನೇಮಕಾತಿಗೆ ಅಧಿಸೂಚನೆ

ಬೆಂಗಳೂರು,ಅ.13- ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1137 ಪೊಲೀಸ್ ಕಾನ್‍ಸ್ಟೆಬಲ್ (ಸಿವಿಲ್) ನೇಮಕಾತಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ತೃತೀಯ ಲಿಂಗಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಒಟ್ಟು 1137 ಪೊಲೀಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಪುರುಷರಿಗೆ 683, ಮಹಿಳೆಯರಿಗೆ 229, ತೃತೀಯ ಲಿಂಗಿ(ಪುರುಷ)ಗಳಿಗೆ 22, ತೃತೀಯ ಲಿಂಗಿ(ಮಹಿಳೆ)ಗಳಿಗೆ 10, ಸೇವಾ ನಿರತ ಪೊಲೀಸರಿಗೆ(ಪುರುಷ) 134, ಸೇವಾ ನಿರತ ಪೊಲೀಸರಿಗೆ(ಮಹಿಳೆ) 57, ಸೇವಾ ನಿರತ ಪೊಲೀಸ್ ಕಾನ್‍ಸ್ಟೆಬಲ್( ಪುರುಷ) ತೃತೀಯ ಲಿಂಗಿ 1 ಮತ್ತು ಸೇವಾ ನಿರತ […]

ಶಿಕ್ಷಕರ ನೇಮಕಾತಿಗಾಗಿ ವರ್ಷಕ್ಕೆ 2 ಬಾರಿ ಟಿಇಟಿ ಪರೀಕ್ಷೆ : ಸಚಿವ ನಾಗೇಶ್

ಬೆಂಗಳೂರು,ಆ.8- ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ನೇಮಕ ಪರೀಕ್ಷೆಯ ಫಲಿತಾಂಶವನ್ನು ಇದೇ ತಿಂಗಳ ಅಂತ್ಯದೊಳಗೆ ಪ್ರಕಟಿಸುವ ಗುರಿ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡು ಆಗಸ್ಟ್ 7ಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಆಗಿರುವ ಪ್ರಗತಿಯ ಮಾಹಿತಿಯನ್ನು ಸಚಿವರು ಹಂಚಿಕೊಂಡಿದ್ದು, ಅಕ್ಟೋಬರ್ ಅಂತ್ಯದೊಳಗೆ ನೇಮಕ ಪ್ರಕ್ರಿಯೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಸರ್ಕಾರಿ ಶಾಲೆಗಳ […]

ಶೀಘ್ರದಲ್ಲೇ 5 ಸಾವಿರ ಕಾನ್ಸ್ ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಬೆಂಗಳೂರು,ಆ.4- ಗೃಹ ಇಲಾಖೆಯನ್ನು ಬಲಪಡಿಸುವ ಸದುದ್ದೇಶದಿಂದ ಶೀಘ್ರದಲ್ಲೇ ಪೊಲೀಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ಮತ್ತೆ 5 ಸಾವಿರ ಕಾನ್ಸ್ ಸ್ಟೆಬಲ್ ಹುದ್ದೆ ನೇಮಕಾತಿ ಮಾಡಿಕೊಳ್ಳುತ್ತೇವೆ. 545 ಹುದ್ದೆ ಬಿಟ್ಟು 450 ಪಿಎಸ್‍ಐ ಗಳ ನೇಮಕಾತಿ ಹೊಸದಾಗಿ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ನಮ್ಮ ಅವಧಿಯಲ್ಲಿ ಹೇಗೆ ಪರೀಕ್ಷೆ ಮಾಡೋದು ಎಂಬುದನ್ನು ತೋರಿಸಿಕೊಡುತ್ತೇವೆ ಎಂದರು. ಅಭ್ಯರ್ಥಿಗಳು ವಯಸ್ಸಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. […]

ನೋಡುಗರ ಮನಸೂರೆಗೊಂಡ ಅಂತಾರಾಷ್ಟ್ರೀಯ ಫ್ಯಾಷನ್ ವೀಕ್

ಬೆಂಗಳೂರು: ಕೊರೋನ ಆತಂಕ ಕೊಂಚ ತಗ್ಗುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಫ್ಯಾಷನ್ ಕಲರವ ಶುರುವಾಗಿದೆ.ವೈಟ್ ಫೀಲ್ಡ್ ನಲ್ಲಿರುವ ಮ್ಯಾರಿಯೆಟ್ ಹೋಟೆಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ “ಟಾಕ್ ಆಫ್ ದಿ ಟೌನ್- 2022″ ಫ್ಯಾಷನ್ ವೀಕ್” ಈ ಎಲ್ಲದ್ದಕ್ಕು ಸಾಕ್ಷಿಯಾಯಿತು. ಈ ಫ್ಯಾಷನ್ ವೀಕ್‌ನಲ್ಲಿ 40 ಸೂಪರ್ ಮಾಡೆಲ್‌ಗಳ ಮಾದಕ ಕ್ಯಾಟ್‌ವಾಕ್ ನೋಡುಗರಲ್ಲಿ ಮಿಂಚು ಹರಿಸಿತು. ಝಗಮಗಿಸುವ ವೇದಿಕೆ, ಮನಸನ್ನು ಕುಣಿಸುವ ಮ್ಯೂಸಿಕ್, ಆ ಮ್ಯೂಸಿಕ್ ನ ತಾಳಕ್ಕೆ ತಕ್ಕಂತೆ ಲಲನೆಯರು ಹಾಕಿದ ಮೋಹಕ ಹೆಜ್ಜೆ ಫ್ಯಾಷನ್ […]