ಖಾಸಗಿ ಬಸ್ ಪಲ್ಟಿ : 40 ಮಂದಿಗೆ ಗಾಯ, 6 ಮಂದಿ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ,ನ.20- ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಬಸ್ ಕಾಲುವೆಗೆ ಉರುಳಿಬಿದ್ದ ಪರಿಣಾಮ 40ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಅಮಿಟಾಗಾನಹಳ್ಳಿ ಗೇಟ್ ಬಳಿ ನಡೆದಿದೆ. ಗಾಯಗೊಂಡವರಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಖಾಸಗಿ ಬಸ್ ಹಿಂದೂಪುರ ತಿರುಪತಿ ಮಾರ್ಗವಾಗಿ ಬರುತ್ತಿತ್ತು. 3ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ ಅಮಿಟಾಗಾನಹಳ್ಳಿ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿಬಿದ್ದಿದೆ. ಆರು ಮಂದಿ ಪ್ರಯಾಣಿಕರು ಗಂಭೀರವಾಗಿ […]

ಪ್ರಿಯಕರನೊಂದಿಗೆ ಮಗಳು ಪರಾರಿ, ಮನನೊಂದು ಆತ್ಮಹತ್ಯೆಗೆ ಶರಣಾದ ಕುಟುಂಬ

ಶಿಡ್ಲಘಟ್ಟ, ಅ.4- ಪ್ರೀತಿಸಿದ ಯುವಕನೊಂದಿಗೆ ಮಗಳು ಮನೆಬಿಟ್ಟು ಹೋಗಿದ್ದರಿಂದ ಮನನೊಂದು ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಶ್ರೀರಾಮಪ್ಪ (63), ಸರೋಜಮ್ಮ (58), ಇವರ ಪುತ್ರ ಮನೋಜ್ (24) ಆತ್ಮಹತ್ಯೆಗೆ ಶರಣಾದವರು.ಹಂಡಿಗನಾಳದಲ್ಲಿ ಶ್ರೀರಾಮಪ್ಪ ದಂಪತಿ ತಮ್ಮ ಮೂವರು ಮಕ್ಕಳಾದ ಅರ್ಚನಾ, ಮನೋಜ್, ರಂಜಿತ್ ಜತೆ ಜೀವನ ನಡೆಸುತ್ತಿದ್ದರು. ಗ್ರಾಮದಲ್ಲಿ ಈ ಕುಟುಂಬಕ್ಕೆ ಒಳ್ಳೆಯ ಗೌರವವಿದೆ. ಮಗಳು ಅರ್ಚನಾಳಿಗೆ ಉತ್ತಮ ವಿದ್ಯಾಭ್ಯಾಸ […]

ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ, ಸ್ಥಳದಲ್ಲೇ ಮೂವರ ಸಾವು

ಚಿಕ್ಕಬಳ್ಳಾಪುರ,ಫೆ.28- ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ಇಂದು ಬೆಳಗ್ಗೆ ನಡೆದಿದೆ.ಆಂಧ್ರಪ್ರದೇಶದ ಕದಿರಿ ಗ್ರಾಮದ ಗೌಸ್, ಅಮ್ಮಜಾನ್ ಮೃತಪಟ್ಟ ದುರ್ದೈವಿಗಳು. ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ 7ರ ಹೊನ್ನೇನಹಳ್ಳಿ ಗೇಟ್ ಬಳಿಯ ಹೋಟೆಲ್‍ನಲ್ಲಿ ತಿಂಡಿ ತಿಂದು ಮೂವರು ಆ್ಯಕ್ಟಿವಾದಲ್ಲಿ ರಸ್ತೆ ತಿರುವು ಪಡೆಯಬೇಕಾದರೆ ಬಾಗೇಪಲ್ಲಿ ಕಡೆಯಿಂದ ಚಿಕ್ಕಬಳ್ಳಾಪುರ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಚಕ್ರದಡಿ […]

ಮೈಸೂರು ದಸರಾ- ಹಂಪಿ ಉತ್ಸವ ಮಾದರಿ ನಂದಿಯಲ್ಲಿ ಶಿವೋತ್ಸವ

ಚಿಕ್ಕಬಳ್ಳಾಪುರ, ಫೆ.24- ಮೈಸೂರು ದಸರಾ ಹಾಗೂ ಹಂಪಿ ಉತ್ಸವ ರೀತಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿ 2023 ರಿಂದ ಶಿವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಯ ಭೋಗ ನಂದೀಶ್ವರ ಜಾತ್ರೆ ಆಯೋಜನೆ ಕುರಿತ ಪೂರ್ವಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , 2023 ರಿಂದ ನಂದಿಯಲ್ಲಿ ಶಿವರಾತ್ರಿಯಂದು ಶಿವೋತ್ಸವ […]

ಮನೆಯ ಗವಾಕ್ಷಿ ಮೂಲಕ ಒಳನುಗ್ಗಿ ದಂಪತಿಯನ್ನು ಕೊಂದ ದುಷ್ಕರ್ಮಿಗಳು..!

ಶಿಡ್ಲಘಟ್ಟ,ಫೆ.10- ಮನೆಯ ಗವಾಕ್ಷಿ ಮೂಲಕ ಒಳನುಗ್ಗಿದ ದುಷ್ಕರ್ಮಿಗಳು ವೃದ್ದ ದಂಪತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಪಟ್ಟಣದ ಕಾಮಾಟಿಗರ ಪೇಟೆಯ ವಾಸವಿ ಕಲ್ಯಾಣ ಮಂಟಪದ ಹಿಂಭಾಗದ ಮನೆಯಲ್ಲಿ ವಾಸವಾಗಿದ್ದ ಶ್ರೀನಿವಾಸಲು(77) ಮತ್ತು ಪತ್ನಿ ಪದ್ಮಾವತಿ(66) ಕೊಲೆಯಾದ ವೃದ್ದ ದಂಪತಿ. ಶ್ರೀನಿವಾಸಲು ಪಟ್ಟಣದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರನ್ನು ಮದುವೆ ಮಾಡಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ದಂಪತಿ […]

ಇತಿಹಾಸ ಪ್ರಸಿದ್ಧ ಚಿತ್ರಾವತಿ ಜಾತ್ರೆ ರದ್ದು

ಚಿಕ್ಕಬಳ್ಳಾಪುರ, ಫೆ.6- ಷಷ್ಠಿ ನಿಮಿತ್ತವಾಗಿ ಅದ್ಧೂರಿಯಾಗಿ ನಡೆಯಬೇಕಿದ್ದ ಚಿತ್ರಾವತಿ ಜಾತ್ರೆ ಕೋವಿಡ್ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳ ಜಾತ್ರೆ ಮಾತ್ರವಲ್ಲ, ಇಂದಿನ ಕುಮಾರ ಷಷ್ಠಿ ರಥೋತ್ಸವವೂ ನಡೆಯಲಿಲ್ಲ. ಚಿಕ್ಕಬಳ್ಳಾಪುರ ಸಮೀಪದ ಚಿತ್ರಾವತಿ ಜಾತ್ರೆಯು ಪ್ರತಿ ವರ್ಷ ಮಾಘಮಾಸದ ಈ ವಾರದಲ್ಲಿ ಸಡಗರ-ಸಂಭ್ರಮದಿಂದ ನಡೆಯುತ್ತಾ ಸಹಸ್ರಾರು ಭಕ್ತರು ಷಷ್ಠಿಯ ಈ ದಿನ ರಥೋತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಜಿಲ್ಲಾಡಳಿತವು ಕೋವಿಡ್ ನಿಯಂತ್ರಣದ ನೆಪವೊಡ್ಡಿ ಈ ಬಾರಿಯೂ ಇಲ್ಲಿನ ಎಲ್ಲಾ ಧಾರ್ಮಿಕ ಕೈಂಕರ್ಯಗಳನ್ನು ಸ್ಥಗಿತಗೊಳಿಸಿದೆ. ರಾಜ್ಯದ ಸುಪ್ರಸಿದ್ಧ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರ ಕ್ಷೇತ್ರಗಳಲ್ಲಿ […]

ಮೊಬೈಲ್‍ಗಾಗಿ ಬಾವಿಗಿಳಿದು ಪ್ರಾಣ ಕಳೆದುಕೊಂಡ ಯುವಕ..!

ಶಿಡ್ಲಘಟ್ಟ, ಜ.30- ಬಾವಿಯೊಳಗೆ ಬಿದ್ದ ಮೊಬೈಲ್ ತೆಗೆಯಲು ಹೋದ ಯುವಕ ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದಿದೆ. ಅನಿಲ್‍ಕುಮಾರ್ (35) ಮೃತಪಟ್ಟ ಯುವಕ. ತೋಟದಲ್ಲಿರುವ ಶೆಡ್ ಬಳಿ ಕೆಲಸ ಮಾಡುತ್ತಿದ್ದಾಗ ಮೂಬೈಲ್ ಕೈ ಜಾರಿ ಶೆಡ್ ನಲ್ಲಿರುವ ಕಿರು ಬಾವಿಗೆಬಿದ್ದಿದೆ. ಬಾವಿಯಲ್ಲಿ ಬಿದ್ದ ಮೋಬೈಲ್ ತೆಗೆದುಕೊಳ್ಳಲು ಯುವಕ ಬಾವಿಗಿಳಿದಿದ್ದಾನೆ ಮಧ್ಯಾಹ್ನವಾದರೂ ಅನಿಲ್ ಮನೆಗೆ ಬಾರದಿದ್ದಾಗ ಮನೆಯವರು ಹುಡುಕಿಕೊಂಡು ಜಮೀನಿನ ಬಳಿಗೆ ಬಂದಿದ್ದಾರೆ. ಬಾವಿ ಬಳಿ ಚಪ್ಪಲಿಗಳು ಇರುವುದನ್ನು ಗಮನಿಸಿದ ಸಹೋದರ ಅನುಮಾನಗೊಂಡು ಬಾವಿಗಿಳಿದು ನೋಡಲು […]

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ..!

ಚಿಕ್ಕಬಳ್ಳಾಪುರ, ಜ.22- ತಾಲ್ಲೂಕಿನ ಹಲವೆಡೆ ಭೂಕಂಪನದ ಅನುಭವವಾಗಿದೆ. ಶೆಟ್ಟಿಗೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮತ್ತೆ ಭೂಮಿ ಕಂಪಿಸಿದೆ. ಪರಿಣಾಮ ಗ್ರಾಮಸ್ಥರು ಮನೆಗಳನ್ನು ತೊರೆದು ಬಯಲು ಪ್ರದೇಶದಲ್ಲಿ ಕಾಲ ಕಳೆದಿದ್ದಾರೆ. ಇಂದು ಬೆಳಗ್ಗೆ ಭಾರೀ ಸದ್ದಿನೊಂದಿಗೆ ಹಲವಾರು ಬಾರಿ ಭೂಮಿ ಕಂಪಿಸಿದ್ದು, ಜನ ಭಯಭೀತರಾಗಿದ್ದಾರೆ. ಇದೇ ಪ್ರದೇಶದಲ್ಲಿ ಕಳೆದ ಡಿಸೆಂಬರ್ ಮತ್ತು ಜನವರಿ ಮೊದಲ ವಾರದಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದ್ದು, ಆತಂಕಕ್ಕೊಳಗಾಗಿದ್ದ ಜನ ಮನೆಯಿಂದ ಹೊರಗೋಡಿ ಬಂದಿದ್ದರು. ಕಂಪನದಿಂದ ಹಲವು ಮನೆಗಳು ಬಿರುಕುಬಿಟ್ಟಿದ್ದವು. ಈಗ ಮತ್ತೆ […]