ಚಿತ್ರದುರ್ಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಕಾರು, ಸ್ಥಳದಲ್ಲೇ ಮೂವ ಸಾವು

ಚಿತ್ರದುರ್ಗ, ಅ.25- ವೇಗವಾಗಿ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ತಡರಾತ್ರಿ ನಡೆದಿದೆ. ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಕಾರು ಚಾಲಕ ಮನು (21), ಚಿತ್ರದುರ್ಗ ತಾಲೂಕಿನ ಮೆದೇಹಳ್ಳಿ ಗ್ರಾಮದ ಹರೀಶ್ (25), ಸಚಿನ್ (25) ಮೃತಪಟ್ಟ ದುರ್ದೈವಿಗಳು. ಇಂಡಿಕಾ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು, ಪ್ರವಾಸಿ ಮಂದಿರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು […]

90 ವರ್ಷದ ನಂತರ ತುಂಬಿದ ವಾಣಿ ವಿಲಾಸ ಸಾಗರ

ಚಿತ್ರದುರ್ಗ, ಸೆ.1- ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆ ಹಾಗೂ ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ 90 ವರ್ಷಗಳ ನಂತರ ಹಿರಿಯೂರು ತಾಲ್ಲೂಕಿನಲ್ಲಿರುವ ಪ್ರಸಿದ್ಧ ವಾಣಿ ವಿಲಾಸ ಜಲಾಶಯ ಭರ್ತಿಯಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದು, ಐತಿಹಾಸಿಕ ಜಲಾಶಯ ತುಂಬಿರುವುದರಿಂದ ರೈತ ಸಮುದಾಯದಲ್ಲಿ ಹರ್ಷದ ಹೊನಲು ಹರಿದಿದೆ.ಜಲಾಶಯಕ್ಕೆ ಮೂರೂವರೆ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದು ಬಹುತೇಕ 130 ಅಡಿ ಎತ್ತರದ ಜಲಾಶಯ ಇಂದು ಭರ್ತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 30 ಟಿಎಂಸಿ ನೀರು ಶೇಖರಿಸಬಹುದಾದ ಈ […]

ಲವ್ ಮಾಡಿದ ಹುಡುಗಿ ಜೊತೆ ಮದುವೆ ಮಾಡಿಸಲು ನಿರಾಕರಿಸಿದ ಚಿಕ್ಕಪ್ಪನ ಕೊಲೆ

ಚಿತ್ರದುರ್ಗ,ಜು.11-ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಹಾಗೂ ಹಣಕಾಸಿನ ವಿಚಾರಕ್ಕೆ ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಳಲ್ಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿತ್ರಲಿಂಗ(21) ಬಂಧಿತ ಆರೋಪಿ. ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಈಶ್ವರಪ್ಪ(65) ಕೊಲೆಯಾದ ಮೃತ ದುರ್ದೈವಿ. ಇದೇ ಗ್ರಾಮದ ಈಶ್ವರಪ್ಪನ ಸೋದರ ಸಂಬಂಧಿ ಮಗ ಚಿತ್ರಲಿಂಗ ಕೊಲೆಯಾದ ಈಶ್ವರಪ್ಪನ ಮೊಮ್ಮಗಳನ್ನು ಪ್ರೀತಿಸುತ್ತಿದ್ದ, ಅಲ್ಲದೆ,ಈಶ್ವರಪ್ಪನ ಬಳಿ ಮೊಮ್ಮಗಳನ್ನು ನನಗೆ ಕೊಟ್ಟು ಮದುವೆ ಮಾಡುವಂತೆ ಕೇಳಿದ್ದ. ಆದರೆ ಇದಕ್ಕೆ ಒಪ್ಪದ ಈಶ್ವರಪ್ಪನನ್ನು ಹನುಮನಕಟ್ಟೆಗೆ ಹೋಗಿ ಬರೋಣವೆಂದು […]

ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸುತ್ತಿದ್ದ ಆರೋಪಿಗಳ ಅಂದರ್

ಚಿತ್ರದುರ್ಗ,ಜ.17- ಸಾರ್ವಜನಿಕರಿಗೆ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲಾ ಹರಪನಹಳ್ಳಿ ಮೂಲದ ಸುರೇಶ (25), ಶೇಖರಪ್ಪ ಯಾನೆ (48) ಹಾಗೂ ಹಾಸನ ಜಿಲ್ಲಾಯ ಅರಸೀಕೆರೆ ತಾಲೂಕಿನ ಕೇಶವಮೂರ್ತಿ(30) ಬಂಧಿತ ಆರೋಪಿಗಳು. ಚಿತ್ರದುರ್ಗ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಹೋಗಿ, ನಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಬಂಗಾರ ಸಿಕ್ಕಿದೆ ಎಂದು ಹೇಳಿ ನಂಬಿಸಿ, ನಿರ್ಜನ ಪ್ರದೇಶಕ್ಕೆ ಜನರನ್ನು ಕರೆದುಕೊಂಡು ಹೋಗಿ ಶುದ್ಧ ಬಂಗಾರವನ್ನು ತೋರಿಸಿ ನಂತರ, ನಕಲಿ […]

ಲಗೇಜ್ ಆಟೋಗೆ ಕಾರು ಡಿಕ್ಕಿ: ಮಹಿಳೆ ಮತ್ತು ಮಗು ಸಾವು

ಚಿತ್ರದುರ್ಗ,ಜ.5- ಕಾರು ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಹಾಗೂ ಮಗು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಹೊಸದುರ್ಗ ತಾಲ್ಲೂಕಿನ ನೀರಗುಂದ ಪೀಲಾಪುರ ಗೇಟ್ ಬಳಿ ನಡೆದಿದೆ. ಮೃತರನ್ನು ಹೊನ್ನೆಕೇರಿ ಗೊಲ್ಲರಹಟ್ಟಿಯ ಕರಿಯಮ್ಮ(50) ಧನುಷ್ (3) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ರಾಜು, ಲತಾ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತರೀಕೆರೆ ತಾಲೂಕಿನ ತೀರು ಮುರುಡಿ ದೇವಸ್ಥಾನಕ್ಕೆ ಹೋಗಿ ಜವಳ (ತಲೆ ಕೂದಲು) ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಈ […]