ಕರ್ನಾಟಕ ರತ್ನ ಮೂಲಕವೂ ಹಲವು ದಾಖಲೆ ಬರೆಯಲಿದ್ದಾರೆ ಅಪ್ಪು

ಬೆಂಗಳೂರು,ಅ.31- ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಸ್ಯಾಂಡಲ್ ವುಡ್‍ನ ಪ್ರತಿಭಾವಂತ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ನಾಳೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಲಿದೆ. ಈ ಮೂಲಕ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಚಿತ್ರನಟ ಎಂಬ ಹೆಗ್ಗಳಿಕೆಗೆ ಪುನೀತ್ ರಾಜ್‍ಕುಮಾರ್ ಪಾತ್ರರಾಗಲಿದ್ದಾರೆ.ಈವರೆಗೂ ಎಂಟು ಮಂದಿಗೆ ಕರ್ನಾಟಕ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು. ಆದರೆ ಇದು ಜೀವಿತಾವಯಲ್ಲೇ ಈ ಪ್ರಶಸ್ತಿ ಲಭಿಸಿತ್ತು. ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ನಾಳೆ […]

ಪುನೀತ್ ಪ್ರಥಮ ಪುಣ್ಯಸ್ಮರಣೆಗೆ ಹರಿದುಬಂದ ಅಭಿಮಾನಿ ಸಾಗರ

ಬೆಂಗಳೂರು, ಅ.29- ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಆಗಲಿ ಇಂದಿಗೆ ಒಂದು ವರ್ಷ ಕಳೆದೇ ಹೋಯ್ತು. ಆದರೆ ಅವರ ನೆನಪುಗಳು ಪ್ರತಿಯೊಬ್ಬರ ಮನಗಳಲ್ಲಿ ಅಚ್ಚಳಿಯದೆ ಹಾಗೆ ಉಳಿದುಕೊಂಡಿವೆ. ಕಳೆದ ವರ್ಷ ಇದೇ ತಿಂಗಳು ಇದೇ ದಿನ ಅಚಾನಕ್ಕಾಗಿ ಯಾರಿಗೂ ಹೇಳದೆ ಬಾರದ ಲೋಕಕ್ಕೆ ಪಯಣ ಬೆಳೆಸಿದ ರಾಜಕುಮಾರನಿಗೆ ಮಿಡಿದ ಹೃದಯಗಳು ಅಗಣಿತ. ತಮ್ಮ ಮನೆಯಲ್ಲಿ ಒಬ್ಬ ಸದಸ್ಯರನ್ನು ಕಳೆದುಕೊಂಡಿದ್ದಕ್ಕಿಂತ ಹೆಚ್ಚು ಶೋಕ ವ್ಯಕ್ತಪಡಿಸಿದರು. ಯಾರೇ ಒಬ್ಬ ಗಣ್ಯ ವ್ಯಕ್ತಿ ಇಹಲೋಕ ತ್ಯಜಿಸಿದಾಗ ಒಂದು ಅಥವಾ ಎರಡು […]

ಪನೋರಮಾ ಚಿತ್ರೋತ್ಸವದಲ್ಲಿ ಕನ್ನಡದ 3 ಚಿತ್ರಗಳ ಪ್ರದರ್ಶನ

ನವದೆಹಲಿ, ಅ.22- ಗೋವಾದಲ್ಲಿ ನಿನ್ನೆಯಿಂದ ಆರಂಭವಾಗಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‍ಎಫ್‍ಐ)ದಲ್ಲಿ ಜೈ ಭೀಮ್, ಮೇಜರ, ದಿ ಕಾಶ್ಮೀರ್ ಪೈಲ್ ಸೇರಿದಂತೆ 25ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. 2022ರ ಸಾಲಿನ ಭಾರತೀಯ ಪನೋರಮಾ ವಿಭಾಗಕ್ಕೆ ಹದಿನೇಲೆಂಟು ಮತ್ತು ದಿ ಶೋ ಮಸ್ಟ್ ಗೋ ಆನ್ ಎಂಬ ಚಿತ್ರಗಳು ಆರಂಭಿಕ ಪ್ರದರ್ಶನ ಕಂಡಿವೆ. ಶನಿವಾರ ಐಎಫ್‍ಎಫ್‍ಐ ವೈಶಿಷ್ಟ ಮತ್ತು ವೈಶಿಷ್ಟವಲ್ಲದ ಚಿತ್ರಗಳ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಭಾರತೀಯ ಭಾಷೆಗಳ 25 ಚಿತ್ರಗಳು ಸೇರಿವೆ. ಪ್ರಮುಖವಾಗಿ ಜೈ ಭೀಮ್, ಮೇಜರ್, […]

ಪುನೀತ್ ಪರ್ವಕ್ಕೆ ಕ್ಷಣಗಣನೆ, ಅರಮನೆ ಮೈದಾನದಲ್ಲಿ ಸೆಲೆಬ್ರೆಟಿಗಳ ಸಮಾಗಮ

ಬೆಂಗಳೂರು,ಅ.21- ಅಪ್ಪು ಅವರು ತುಂಬ ಪ್ರೀತಿಯಿಂದ ಮಾಡಿದ ಕೊನೆ ಸಿನಿಮಾ ಗಂಧದ ಗುಡಿ ಇದೇ ತಿಂಗಳು 28 ರಂದು ಬಿಡುಗಡೆಯಾಗುತ್ತಿದೆ . ನಾಡು-ನುಡಿ ಬಗ್ಗೆ ಅಪಾರ ಅಭಿಮಾನ ಪ್ರೀತಿ ಹೊಂದಿದ್ದ ಇವರು ಕನ್ನಡ ನಾಡಿನ ಸಂಸ್ಕøತಿ, ಪರಂಪರೆ, ಪ್ರಕೃತಿ ಸೌಂದರ್ಯವನ್ನು ಪರಿಚಯಿಸುವ ಮಹತ್ಕಾರ್ಯವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ ಎಂದು ರಾಘವೇಂದ್ರ ರಾಜಕುಮಾರ್ ತಿಳಿಸಿದ್ದಾರೆ. ನಮ್ಮನ್ನೆಲ್ಲ ಆಗಲಿ ಹೋಗುವ ಮುನ್ನ ಮಾಡಿದ ಕೊನೆಯ ಸಿನಿಮಾ ಆಗಿರುವುದರಿಂದ, ಇವರನ್ನ ನೆನೆಯಲು ರಾಜ್ ಕುಟುಂಬ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂದು […]

ಭಾರೀ ವಿವಾದಕ್ಕೆ ಕಾರಣವಾಯ್ತು ಕಾಂತಾರ ಚಿತ್ರ ಕುರಿತ ನಟ ಚೇತನ್ ಹೇಳಿಕೆ

ಬೆಂಗಳೂರು,ಅ.19- ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶದಲ್ಲೂ ಭರ್ಜರಿ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ ಕಾಂತಾರ ಚಿತ್ರಕ್ಕೆ ನಟ ಚೇತನ್ ಅಹಿಂಸಾ ಮಾಡಿರುವ ಟ್ವೀಟ್ ಭಾರೀ ವಿವಾದವನ್ನು ಸೃಷ್ಟಿಸಿದೆ. ಕಾಂತಾರ ಚಿತ್ರದ ಭೂತಕೋಲ ಹಿಂದೂ ಸಂಸ್ಕøತಿಗೆ ಸೇರಿಲ್ಲ ಎಂದು ಟ್ವೀಟ್ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ತಮ್ಮ ಟ್ವೀಟ್‍ನಲ್ಲಿ ಚೇತನ್ ಅವರು, ನಮ್ಮ ಕನ್ನಡದ ಚಲನಚಿತ್ರ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು […]

‘ಗಂಧದಗುಡಿ’ ಬೈಕ್ ರ‍್ಯಾಲಿ

ಬೆಂಗಳೂರು, ಅ.16- ಪ್ರಕೃತಿ ಮತ್ತು ಮನುಷ್ಯನ ನಡುವಿನ ಗಾಢ ಸಂಬಂಧವನ್ನು ನಟ ಪುನೀತ್ ರಾಜಕುಮಾರ್ ತಮ್ಮ ಜೀವಿತಾವಧಿಯಲ್ಲಿ ತೋರಿಸಿದ್ದು, ನಮಗೆ ಮಾದರಿಯಾಗಿ ಹೋಗಿದ್ದಾರೆ ಎಂದು ಉನ್ನತ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ನೆನಪಿಸಿಕೊಂಡಿದ್ದಾರೆ. ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ಗಂಧದ ಗುಡಿ ಬೈಕ್ ರ್ಯಾಲಿ ಉದ್ಘಾಟನೆ ಮತ್ತು ಸಸಿ ನೆಡುವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅರಣ್ಯ ಭವನದಿಂದ ಕಾವೇರಿ ಚಿತ್ರಮಂದಿರದವರೆಗೆ ಸಚಿವರು ಸ್ವತಃ ಬೈಕ್ ಚಾಲನೆ ಮಾಡಿ ರ್ಯಾಲಿಗೆ ಚಾಲನೆ ನೀಡಿದರು. ಗಂಧದ ಗುಡಿ ಸಿನಿಮಾದ ಟೀಸರ್ […]

ಜ್ಯುವೆಲ್ಸ್ ಆಫ್ ಇಂಡಿಯಾವನ್ನು ಉದ್ಘಾಟಿಸಿದ ನಟಿ ಮೇಘನಾರಾಜ್

ಬೆಂಗಳೂರು- ನಗರದ ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಅಕ್ಟೋಬರ್ 13ರಿಂದ 16 ರವರೆಗೂ ಆಯೋಜಿಸಿರುವ “ಜ್ಯುವೆಲ್ಸ್ ಆಫ್‌ ಇಂಡಿಯಾ” ನಟಿ ಮೇಘನಾ ರಾಜ್ ಅವರಿಂದ ಉದ್ಘಾಟನೆಯಾಗಿದೆ. ಹೆಣ್ಣು ಮಕ್ಕಳಿಗೆ ಆಭರಣ ಎಂದರೆ ಅಚ್ಚುಮೆಚ್ಚು. ಅವರಿಗೆ ಬೇಕಾದ ಎಲ್ಲಾ ರೀತಿಯ ಅಭರಣಗಳು ಒಂದೇ ಕಡೆ ಸಿಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ನಾನು ಹಿಂದೆ ಜ್ಯುವೆಲ್ಸ್ ಆಫ್ ಇಂಡಿಯಾ ಗೆ ಬಂದಿದೆ. ಆದರೆ ನಾನೇ ಇದಕ್ಕೆ ರಾಯಭಾರಿ ಆಗುತ್ತೇನೆ ಅಂದುಕೊಂಡಿರಲಿಲ್ಲ. ಜ್ಯವೆಲ್ಸ್ ಆಫ್ ಇಂಡಿಯಾ ಆಭರಣ ಮೇಳ ಯಶಸ್ವಿಯಾಗಲಿ […]

ಹಿರಿಯ ನಟ ಲೋಹಿತಾಶ್ವ ಆರೋಗ್ಯ ಗಂಭೀರ

ಬೆಂಗಳೂರು.ಅ.11- ಹಿರಿಯ ನಟ ಲೋಹಿತಾಶ್ವ ಅವರಿಗೆ ಜೀವರಕ್ಷಕ ಸಾದನ (ವೆಂಟಿಲೇಟರ್) ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಪರಿಸ್ಥಿತಿ ಗಂಭೀರವಾಗಿದೆ. ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಆಸ್ಪತ್ರೆ ಬಳಿ ಪುತ್ರ ಶರತ್ ಲೋಹಿತಾಶ್ವ ಮಾತನಾಡಿ ತಂದೆಯ ಸ್ಥಿತಿ ತುಂಬ ಗಂಭೀರವಾಗಿದೆ ಶೀಘ್ರದಲ್ಲೇ ವೈದ್ಯರು ಹೆಚ್ಚಿನ ಮಾಹಿತಿ ನೀಡುತ್ತಾರೆ ಹೇಳಿದ್ದಾರೆ. ಕೆಲವೇ ದಿನಗಳ ಹಿಂದೆ ಲೋಹಿತಾಶ್ವ ಅವರಿಗೆ ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಉಂಟಾಗಿತ್ತು ಅದಕ್ಕೆ ಚಿಕಿತ್ಸೆ ನೀಡುತ್ತಿರುವಾಗಲೇ ಪರಿಸ್ಥಿತಿ ಗಂಭೀರ ಆಯಿತು. ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿತು. […]

ಪುನೀತ್ ಪರ್ವ ಕಾರ್ಯಕ್ರಮಕ್ಕೆ ಸಿಎಂಗೆ ಅಹ್ವಾನ ನೀಡಿದ ಅಶ್ವಿನಿ

ಬೆಂಗಳೂರು,ಅ.11-ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಗಂಧಗುಡಿ ಪ್ರೀ ರಿಲೀಸ್ ಇವೆಂಟ್ ಪುನೀತ್ ಪರ್ವಕ್ಕೆ ಆಗಮಿಸುವಂತೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಿದರು. ಮುಖ್ಯಮಂತ್ರಿ ಭೇಟಿಯ ನಂತರ ಮಾತನಾಡಿದ ನಟ ರಾಘವೇಂದ್ರ ರಾಜ್‍ಕುಮಾರ್, ಅಕ್ಟೋಬರ್ 28ಕ್ಕೆ ಗಂಧದ ಗುಡಿ ಸಿನಿಮಾ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಅಕ್ಟೋಬರ್ 21ರಂದು ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಇದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರನ್ನು ಆಹ್ವಾನಿಸಲು ಬಂದಿದ್ದೆವು ಎಂದರು. ದಕ್ಷಿಣ ಭಾರತದ ಚಿತ್ರರಂಗದ ತಾರೆಯರನ್ನು ಈ […]

ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾರಾಮ್, ಅಭಿಷೇಕ್‍

ಬೆಂಗಳೂರು, ಅ.3- ಚಂದನವನದಲ್ಲಿ ಇಂದು ಮತ್ತೆ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಡಿಂಪಲ್ ಕ್ವೀನ್ ರಚಿತಾರಾಮ್ ತಮ್ಮ 30ನೆ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರೆ, ಯಂಗ್ ರೆಬೆಲ್‍ಸ್ಟಾರ್ ಅಭಿಷೇಕ್ ಅಂಬರೀಷ್ ಅವರು 28ನೆ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟ ಹಾಗೂ ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಲೆಂದೇ ನಿನ್ನೆ ಮಧ್ಯರಾತ್ರಿಯೇ ರಾಜೇಶ್ವರಿನಗರದ ರಚಿತಾರಾಮ್ ಮತ್ತು ಜಯನಗರದ ಅಭಿಷೇಕ್ ಅಂಬರೀಷ್ ಅವರ ಮನೆಗಳ ಮುಂದೆ ಅಭಿಮಾನಿಗಳು ಹೂವು, ವಿವಿಧ ಮಾದರಿಯ ಕೇಕ್‍ಗಳೊಂದಿಗೆ ಜಮಾಯಿಸಿದ್ದರು. ತಮ್ಮ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ […]