40 ಲಕ್ಷ ಮೌಲ್ಯದ ನಿಷೇಧಿತ ಇ-ಸಿಗರೇಟ್ ಜಪ್ತಿ

ಬೆಂಗಳೂರು, ನ.30- ನಿಷೇಧಿತ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ನಗರದ ಅಂಗಡಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 40 ಲಕ್ಷಕ್ಕೂ ಹೆಚ್ಚು ಮೌಲ್ಯದ ಇ- ಸಿಗರೇಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ಆರೋಪಿಗಳು ವಿದೇಶದಿಂದ ಇ-ಸಿಗರೇಟ್ ಉತ್ಪನ್ನಗಳನ್ನು ಆಮದು ಮಾಡಿಕೊಂಡು ಕೋರಮಂಗಲ, ಬಾಣಸವಾಡಿ, ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಪ್ರೇಯಸಿಯ ಕೊಲೆಯಲ್ಲಿ ಕೊನೆಯಾಯ್ತು ಲಿವಿಂಗ್ ಟುಗೆದರ್ ಲವ್ ಈ ಬಗ್ಗೆ ಮಾಹಿತಿ ಕಲೆಹಾಕಿದ ಸಿಸಿಬಿ ಪೊಲೀಸರು ಅಂಗಡಿಗಳ ಮೇಲೆ ದಾಳಿ ಮಾಡಿ 40 […]

ಮೋಜು- ಮಸ್ತಿಗಾಗಿ ಕಳ್ಳತನಕ್ಕಿಳಿದಿದ್ದ ಇಬ್ಬರು ಅಂದರ್

ಬೆಂಗಳೂರು, ನ.26- ಮೋಜು-ಮಸ್ತಿಗಾಗಿ ದ್ವಿಚಕ್ರ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್ ಹಾಗೂ ಮನೆಗಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಇಬ್ಬರನ್ನು ವಿದ್ಯಾರಣ್ಯ ಪುರ ಠಾಣೆ ಪೊಲೀಸರು ಬಂಧಿಸಿ 6.87 ಲಕ್ಷ ರೂ. ಬೆಲೆಬಾಳುವ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ನಿವಾಸಿಗಳಾದ ರಂಜಿತ್ ಅಲಿಯಾಸ್ ಸಂತು ಅಲಿಯಾಸ್ ಕರಿಯಾ ಅಲಿಯಾಸ್ ಪುಟ್ಟ(27) ಮತ್ತು ಅಜಿತ್(25) ಬಂಧಿತರು. ವಿದ್ಯಾರಣ್ಯ ಪುರದ ದೇಶಬಂಧು ನಗರ ನಿವಾಸಿ ಅಬ್ದುಲ್ ಖಾದರ್ ಎಂಬುವವರ ಮನೆಯಲ್ಲಿ 20 ಸಾವಿರ ಬೆಲೆಯ ವಿವೋ ಕಂಪೆನಿಯ ಮೊಬೈಲ್ 70 ಸಾವಿರ ಬೆಲೆಯ ಲ್ಯಾಪ್‍ಟಾಪ್ ಕಳ್ಳತನವಾಗಿರುವ […]

ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರ ಬಂಧನ

ಬೆಂಗಳೂರು, ನ.26- ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ರೂ. ಬೆಲೆಬಾಳುವ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಗಿರಿನಗರದ ವೀರಭದ್ರ ನಿವಾಸಿ ಸಂಜಯ್(24) ಮತ್ತು ಶೇಖರ್ ಅಲಿಯಾಸ್ ತಿಪ್ಪೆ (27) ಬಂಧಿತ ಆರೋಪಿಗಳು.ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಆರೋಪಿ ಮತ್ತು ವಾಹನ ಪತ್ತೆಗಾಗಿ ನೇಮಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ 7 ಪ್ರಕರಣಗಳನ್ನು […]

ಮೋಜಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದವನ ಬಂಧನ

ಬೆಂಗಳೂರು, ನ.22- ಶೋಕಿ, ಮೋಜು- ಮಸ್ತಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದ ನಟೋರಿಯಸ್ ವಾಹನ ಕಳ್ಳನೊಬ್ಬನನ್ನು ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ರೂ. ಬೆಲೆಬಾಳುವ 8 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಕೋಲಾರದ ಕೆಜಿಎಫ್‍ನ ಭಾರತಿಪುರಂ ನಿವಾಸಿ ಸೈಯ್ಯದ್ ಸಲ್ಮಾನ್(25) ಬಂಧಿತ ಆರೋಪಿ. ಈತನಿಂದ 7 ಬೈಕ್‍ಗಳು ಮತ್ತು ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳ ಹ್ಯಾಂಡ್ ಲಾಕ್‍ಗಳನ್ನು ಮುರಿದು, ಇಗ್ನೀಷಿಯನ್ ವೈರನ್ನು ಕತ್ತರಿಸಿ ವಾಹನಗಳನ್ನು ಡೈರೆಕ್ಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದನು. ಆರೋಪಿಯು ಸುಲಭವಾಗಿ […]

ಹಲ್ಲೆ ಮಾಡಿ ಪರಾರಿಯಾಗಿದ್ದ ದರೋಡೆಕೋರನ ಬಂಧನ

ಬೆಂಗಳೂರು, ನ.22- ಬಸ್ ಮತ್ತು ಲಾರಿಗಳ ಗಾಜು ಹೊಡೆದು ಚಾಲಕ ಮತ್ತು ಕ್ಲೀನರ್‍ಗಳಿಗೆ ಲಾಂಗ್‍ನಿಂದ ಹಲ್ಲೆ ಮಾಡಿ ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ದರೋಡೆಕೋರರ ಪೈಕಿ ಒಬ್ಬಾತನನ್ನು ಕಾಮಾಕ್ಷಿ ಠಾಣೆ ಪೊಲೀಸರು ಬಂಧಿಸಿ, 2.35 ಲಕ್ಷ ರೂ. ಬೆಲೆಬಾಳುವ ಮೂರು ಮೊಬೈಲ್ ಹಾಗೂ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಾಲೇಔಟ್ ನಿವಾಸಿ ವಿಕ್ರಂ ಅಲಿಯಾಸ್ ಸೈತಾನ್(21) ಬಂಧಿತ ಆರೋಪಿ. ಪ್ರಮುಖ ಆರೋಪಿ ವಿನಾಯಕ ಅಲಿಯಾಸ್ ಆರ್‍ಬೆಟ್ಟು ತಲೆಮರೆಸಿಕೊಂಡಿದ್ದಾನೆ. ನ.10ರಂದು ಬೆಳಗಿನ ಜಾವ 3.45ರ ಸುಮಾರಿನಲ್ಲಿ ಚೇತನ್ […]

ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ : 83.79 ಲಕ್ಷ ಮೌಲ್ಯದ ಚಿನ್ನ,ಬೆಳ್ಳಿ, ವಾಹನಗಳ ವಶ

ಬೆಂಗಳೂರು,ನ.18- ಉತ್ತರ ವಿಭಾಗದ ಸೋಲದೇವನಹಳ್ಳಿ ಮತ್ತು ರಾಜಗೋಪಾಲನಗರ ಠಾಣೆ ಪೊಲೀಸರು ಕನ್ನಗಳವು, ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 8 ಮಂದಿ ಆರೋಪಿಗಳನ್ನು ಬಂಧಿಸಿ ನಗದು ಸೇರಿದಂತೆ 83.79 ಲಕ್ಷ ಮೌಲ್ಯದ 1259 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಸಾಮಗ್ರಿಗಳು ಹಾಗೂ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ. ಸೋಲದೇವನಹಳ್ಳಿ ಠಾಣೆ ಸರಹದ್ದಿನ ಹೆಸರುಘಟ್ಟದಲ್ಲಿ ಕಳೆದ ಅಕ್ಟೋಬರ್ 4ರಂದು ಮನೆಯೊಂದರ ಕಿಟಕಿ ಸರಳನ್ನು ಕತ್ತರಿಸಿ ಒಳನುಗ್ಗಿ 61.45 ಲಕ್ಷ ಮೌಲ್ಯದ 829ಗ್ರಾಂ ಚಿನ್ನಾಭರಣ, 250 ಗ್ರಾಂ ತೂಕದ ಬೆಳ್ಳಿ ಲಕ್ಷ್ಮಿ ವಿಗ್ರಹ […]

ನಕಲಿ ಸಿಮ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ವಂಚಿಸುತ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು, ಸೆ.30- ನಕಲಿ ಸಿಮ್ ಕಾರ್ಡ್ಗಳನ್ನು ಬಳಸಿಕೊಂಡು ಸಾಮಾಜಿಕ ತಾಣದಲ್ಲಿ ಖಾತೆಗಳನ್ನು ತೆರೆದು ಲಿಂಕ್ ಕಳಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿ 222 ಸಿಮ್ ಕಾರ್ಡ್, 10 ಮೊಬೈಲ್, 10 ಡೆಬಿಟ್ಕಾರ್ಡ್ ಮತ್ತು ಪಾಸ್ಬುಕ್, ಚೆಕ್ಬುಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಕೇರಳದ ಕಣ್ಣೂರಿನ ನಿವಾಸಿ ಶಾನೀದ್ ಅಬ್ದುಲ್ ಅಮೀದ್ (29) ಬಂಧಿತ ಆರೋಪಿ.ಸಾರ್ವಜನಿಕರಿಗೆ ಮೋಸವಾಗುತ್ತಿರುವ ಬಗ್ಗೆ ಮಾಹಿತಿ ಪಡೆದು ಆರೋಪಿಯ ಮನೆಗೆ ಹೋಗಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಟೆಲಿಗ್ರಾಂ ಜಾಲತಾಣದಲ್ಲಿ ಗ್ರೂಪ್ […]

ಆನ್‍ಲೈನ್ ಇನ್ಸುರೆನ್ಸ್ ಅಪ್ಲಿಕೇಷನ್‍ಬಳಸಿ ವಾಹನಗಳಿಗೆ ನಕಲಿ ವಿಮೆ : ಏಜೆಂಟ್ ಬಂಧನ

ಬೆಂಗಳೂರು,ಸೆ.20- ಆನ್‍ಲೈನ್ ಇನ್ಸುರೆನ್ಸ್ ಅಪ್ಲೆಕೇಶನ್ ಬಳಸಿಕೊಂಡು 225 ಕಮರ್ಷಿಯಲ್ ವಾಹನಗಳಿಗೆ ನಕಲಿ ಇನ್ಸ್‍ರೆನ್ಸ್ ಪಾಲಿಸಿಗಳನ್ನು ಮಾಡಿಸಿ ವಂಚಿಸುತ್ತಿದ್ದ ಏಜೆಂಟ್‍ನನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಕೊ ಜನರಲ್ ಇನ್ಸ್‍ರೆನ್ಸ್ ಕಂಪೆನಿಯ ಅಪ್ಲಿಕೇಶನ್‍ನಲ್ಲಿನ ಲೋಪದೋಷಗಳನ್ನು ಅಪರಿಚಿತ ವ್ಯಕ್ತಿಗಳು ದುರ್ಬಳಕೆ ಮಾಡಿ 2ಲಕ್ಷಕ್ಕೂ ಅಧಿಕ ನಕಲಿ ಕಮರ್ಷಿಯಲ ವಾಹನಗಳನ್ನು ದೇಶಾದ್ಯಂತ ಇರುವ ವಿವಿಧ ಆರ್‍ಟಿಒಗಳಲ್ಲಿ ನೋಂದಣಿ ಮಾಡಿಸಿರುವುದಾಗಿ ವ್ಯಕ್ತಿಯೊಬ್ಬರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ನಂಬರ್‍ನ ತಾಂತ್ರಿಕ […]

ಪ್ರಿಯತಮನ ಕೊಲೆ : ಪ್ರೇಯಸಿ ಸೇರಿ ಮೂವರ ಸೆರೆ

ಬೆಂಗಳೂರು, ಸೆ.19- ತನ್ನ ಮಾನ ಕಳೆದ ಪ್ರಿಯತಮನನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಿಯತಮೆ ಸೇರಿದಂತೆ ಮೂವರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರತಿಷಾ ಮತ್ತು ಈಕೆಯ ಸ್ನೇಹಿತರಾದ ಸುಶಿಲ್, ಗೌತಮ್ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಸೂರ್ಯ ಎಂಬಾತ ತಲೆಮರೆಸಿಕೊಂಡಿದ್ದಾನೆ. ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ್ದ ಡಾ.ವಿಕಾಸ್ ಚೆನ್ನೈನಲ್ಲಿ ವೃತ್ತಿ ಮಾಡಿಕೊಂಡಿದ್ದರು. ಪ್ರತಿಷಾ ಹಾಗೂ ವಿಕಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಎರಡು ಕುಟುಂಬದವರಿಂದಲೂ ಒಪ್ಪಿಗೆ ಸಿಕ್ಕಿತ್ತು. ಈ ನಡುವೆ ಪ್ರತಿಷಾಳ ಅಶ್ಲೀಲ ಫೋಟೋಗಳನ್ನು ವಿಕಾಸ್ […]

ಹಾಡಹಗಲೇ ಗುಜರಿ ವ್ಯಾಪಾರಿ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು,ಸೆ.13-ಆಟೋದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಹಾಡಹಗಲೇ ಗುಜರಿ ವ್ಯಾಪಾರಿ ಮೇಲೆ ಲಾಂಗ್‍ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಂದು ನಡೆದಿದೆ. ವಿವಿ ಗಿರಿ ಬಡಾವಣೆಯ ನಿವಾಸಿ ಗಣೇಶ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶ ಅವರು ಗಾಂಧಿ ನಗರದಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ತಮ್ಮ ಮಗನನ್ನು ಶಾಲೆಗೆ ಬಿಟ್ಟು ಬೈಕ್‍ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ನಟರಾಜ ಚಿತ್ರಮಂದಿರದ ಪಕ್ಕದ ರಸ್ತೆಯಲ್ಲಿ ಆಟೋದಲ್ಲಿ ಬಂದ […]