ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾವಣಗೆರೆ ಪೋರಿ

ದಾವಣಗೆರೆ,ಫೆ.3- ಈ ಪುಟ್ಟ ಬಾಲಕಿ 26 ತರಹೇವಾರಿ ರೋಗಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಯಾವ ರೀತಿಯ ಔಷಧ ನೀಡಬೇಕು ಎಂದು ಅರಳು ಹುರಿದಂತೆ ಪಟ ಪಟಾ ಅಂತ ಹೇಳ್ತಾಳೆ. ಜಿಲ್ಲಾಯ ಜಗಳೂರು ಪಟ್ಟಣದ ನಿವಾಸಿ ಡಾ.ಚೇತನ್ ಹಾಗೂ ವಸುಧಾ ದಂಪತಿಯ ಏಕೈಕ ಪುತ್ರಿ ತನಸ್ವಿ. ಡಾ.ಚೇತನ್ ತಮ್ಮ ರೋಗಿಗಳಿಗೆ ನೀಡುತ್ತಿದ್ದ ವೈದ್ಯರ ಔಷಧಿ ಚೀಟಿ ಕೇಳುತ್ತಾ ಬೆಳೆದ ತನಸ್ವಿಗೆ ಎಲ್ಲವೂ ಮನಸ್ಸಿನಲ್ಲಿ ಅಚ್ಚೊತ್ತಿವೆ. ಅವಳಿಗೆ ಇನ್ನೂ ಆರು ವರ್ಷ ಪೂರ್ಣವಾಗಿಲ್ಲ. 26 ವಿವಿಧ ರೋಗಗಳಿಗೆ ಆಯುರ್ವೇದಿಕ್ ಔಷಧೋಪಚಾರವನ್ನು ಪಟಪಟಾ […]

ಮಧ್ಯರಾತ್ರಿ ಮನೆಗೆ ನುಗ್ಗಿ ದಂಪತಿ ಕೊಲೆ

ದಾವಣಗೆರೆ : ಮನೆಯ ಕಾಲಿಂಗ್ ಬೆಲ್ ಒತ್ತಿ ಬಾಗಿಲು ತೆರೆಸಿದ ದುಷ್ಕರ್ಮಿಗಳು ಏಕಾಏಕಿ ಒಳಗೆ ನುಗ್ಗಿ ಮಾರಾಕಾಸ್ತ್ರಗಳಿಂದ ವೃದ್ದ ದಂಪತಿಯನ್ನು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ನಡೆದಿದೆ. ತಾಲೂಕಿನ ಎಲೆಬೇತೂರು ಗ್ರಾಮದ ಗರುಸಿದ್ದಯ್ಯ(80), ಸರೋಜಮ್ಮ (75) ಕೊಲೆಯಾದ ವೃದ್ದ ದಂಪತಿ. ಹಲವಾರು ವರ್ಷಗಳಿಂದ ತೋಟ ಮನೆ ನೋಡಿಕೊಂಡು ಈ ಗ್ರಾಮದಲ್ಲಿ ವಾಸವಾಗಿದ್ದ ದಂಪತಿ ತಮ್ಮ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು. ಮನೆಯಲ್ಲಿ ದಂಪತಿ ಇಬ್ಬರೆ ವಾಸವಾಗಿದ್ದರು. […]

ವಸತಿ ಶಾಲೆಯಲ್ಲಿ ಫುಡ್ ಪಾಯಿಜನ್ ನಿಂದ 50 ಮಕ್ಕಳು ಅಸ್ವಸ್ಥ

ದಾವಣಗೆರೆ, ಜ.15- ವಿಷಾಹಾರ ಸೇವಿಸಿದ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ಜಿಲ್ಲಾಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ಇಂದಿರಾಗಾಂಧಿ ಪರಿಶಿಷ್ಟ ಜಾತಿಯ ವಸತಿ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ರಾತ್ರಿ ವೇಳೆಯ ಊಟ ಮಾಡಿದ ಮಕ್ಕಳಿಗೆ ಫುಡ್ ಪಾಯಿಜನ್ ಆಗಿದ್ದು, 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅಸ್ವಸ್ಥರಾದ ಮಕ್ಕಳನ್ನು ತಕ್ಷಣ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ನೇರವಾಗಿ ಇಂದಿರಾ ಗಾಂಧಿ ವಸತಿ […]

ರಾತ್ರಿ ಕಪ್ರ್ಯೂ ನಡುವೆಯೇ ತೋಟದ ಮನೆಗಳಲ್ಲಿ ವರ್ಷಾಚರಣೆ ಜೋರು

ದಾವಣಗೆರೆ, ಜ.1- ರಾತ್ರಿ ಕಪ್ರ್ಯೂ ನಡುವೆಯೇ ಜಿಲ್ಲಾಯಲ್ಲಿ ಹೊಸ ವರ್ಷವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು. ಕೊರೊನಾ ಕಾರಣ ಡಿಜೆ ಸೌಂಡ್ ಅಬ್ಬರ, ವೇದಿಕೆ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರಿಂದ ಜಿಲ್ಲಾಯ ಹೋಟೆಲ್‍ಗಳು, ಬಾರ್ ಮತ್ತು ರೆಸ್ಟೋರಂಟ್‍ಗಳು , ರೆಸಾರ್ಟ್‍ಗಳು, ಕ್ಲಬ್‍ಗಳು ಜನರಿಲ್ಲದೆ ಬಣಗುಡುತ್ತಿದ್ದವು. ಆದರೆ, ಪಾರ್ಸಲ್‍ಗಳ ವ್ಯಾಪಾರ ಜೋರಾಗಿತ್ತು. ನಾನ್‍ವೆಜ್ ಹೊಟೇಲ್‍ಗಳಲ್ಲಿ ವ್ಯಾಪಾರ ಇನ್ನಷ್ಟು ಹೆಚ್ಚಾಗಿತ್ತು. ಬಹುತೇಕ ಮಂದಿ ಮನೆ ಮುಂದೆ ತೋಟದ ಮನೆ, ಜಮೀನುಗಳಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಆಚರಿಸಿದರು. ಪೊಲೀಸರು ರಾತ್ರಿ 8 […]