ಕುಡಿದು ಕೋರ್ಟ್‍ಗೆ ಬಂದ ಕಕ್ಷಿದಾರನಿಗೆ ದಂಡ

ಚನ್ನಪಟ್ಟಣ, ನ.25-ನ್ಯಾಯಾಲಯದ ಕಲಾಪದ ಸಂದರ್ಭದಲ್ಲಿ ಕುಡಿದು ಬಂದಿದ್ದ ಕಕ್ಷಿದಾರನಿಗೆ ನ್ಯಾಯಾೀಧಿಶರು ದಂಡ ವಿಧಿಸಿ ಎಚ್ಚರಿಕೆ ನೀಡಿರುವ ಘಟನೆ ನಗರದ ನ್ಯಾಯಾಲಯದಲ್ಲಿ ನಡೆದಿದೆ. ತಾಲ್ಲೂಕಿನ ಗ್ರಾಮದವರಾದ ಸುಮಾರು 45 ವರ್ಷದ ವ್ಯಕ್ತಿಯೊರ್ವರು ನ್ಯಾಯಾಲಯದಲ್ಲಿ ತಮ್ಮ ಜಮೀನಿನ ಪ್ರಕರಣವೊಂದರಲ್ಲಿ ಕಕ್ಷಿದಾರನಾಗಿದ್ದ ಆತ ನ್ಯಾಯಾಲಯಕ್ಕೆ ಕುಡಿದು ಬಂದಿದ್ದನೆಂದು ಹೇಳಲಾಗಿದ್ದು, ಕಟಕಟ್ಟೆಯಲ್ಲಿಯೂ ಆತನ ತೊದಲು ನುಡಿಗಳನ್ನು ಆಲಿಸಿದ ಮಾನ್ಯ ನ್ಯಾಯಾೀಧಿಶರು ಕೂಡಲೇ ಆತನಿಗೆ ದಂಡವಿಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನ್ಯಾಯದೇವತೆಯ ಸ್ಥಾನವಾಗಿರುವ ಪವಿತ್ರವಾದ ನ್ಯಾಯಾಲಯದಲ್ಲಿ ಪಾನಮತ್ತನಾಗಿ ಪ್ರವೇಶ ಮಾಡಿದ್ದು ಅಲ್ಲದೆ ತನ್ನ ಸರದಿಯ ಸಂದರ್ಭದಲ್ಲಿ […]

ಹುಡುಕಿಕೊಂಡು ಬಂದು ಮನೆ ಮೇಲೆ ದಾಳಿ ಮಾಡಿದ ಆನೆ

ಸಕಲೇಶಪುರ, ನ.24- ಆರು ತಿಂಗಳ ನಂತರ ಹುಡುಕಿಕೊಂಡು ಬಂದು ಮನೆಯ ಕಿಟಕಿ ಗಾಜುಗಳನ್ನು ಕಾಡಾನೆ ಧ್ವಂಸ ಮಾಡಿರುವ ಘಟನೆ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸಗುಲಿ ಗ್ರಾಮದಲ್ಲಿ ನಡೆದಿದೆ. ಕಳೆದ ಆರು ತಿಂಗಳ ಹಿಂದೆ ಗಿರೀಶ್ ಎಂಬುವವರ ಮನೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿತ್ತು. ಈ ರೀತಿ ಮನೆ ನುಗ್ಗುವ ಕಾಡಾನೆಯನ್ನು ಅರಣ್ಯ ಇಲಾಖೆ ಗುರುತಿಸಿ ಸೆರೆ ಹಿಡಿದು ಮಲೆಮಾದೇಶ್ವರ ಬೆಟ್ಟದ ಕಾಡಿಗೆ ಬಿಟ್ಟಿದ್ದರು. ಆದರೂ ಕಳೆದ ಒಂದು ತಿಂಗಳ ಹಿಂದೆ ಕಾಡಿನಿಂದ ಮತ್ತೆ […]

ಆಣೆ ಮಾಡಲು ಹೋಗಿ ನೀರು ಪಾಲಾದ ಯುವಕರು

ಹಾಸನ, ನ.4- ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ.ಚಂದ್ರು (35), ಆನಂದ್ (30) ಮೃತಪಟ್ಟವರು. ವ್ಯವಹಾರದ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ಕಳೆದ ರಾತ್ರಿ ಗಂಗೆ ಮೇಲೆ ಆಣೆ ಮಾಡಲು ಕೆರೆ ಬಳಿಗೆ ಹೋಗಿದ್ದಾರೆ. ಈ ವೇಳೆ ಕಾಲು ಜಾರಿ ಬಿದ್ದು ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. BREAKING : ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ದಾಖಲೆ ಕೇಳುವಂತಿಲ್ಲ ಕೆರೆಯಲ್ಲಿ ಶವಗಳು ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ […]

ಮಹಿಳೆಯನ್ನು ತುಳಿದು ಕೊಂದ ಒಂಟಿ ಸಲಗ

ಚನ್ನಪಟ್ಟಣ, ಆ.9- ಬೆಳ್ಳಂಬೆಳಗ್ಗೆ ಒಂಟಿ ಸಲಗವೊಂದು ಮಹಿಳೆ ಮೇಲೆ ದಾಳಿ ಮಾಡಿ ತುಳಿದು ಸಾಯಿಸಿರುವ ಘಟನೆ ಚೆನ್ನಮ್ಮನ ಹೊಸ ಹಳ್ಳಿ ಬಳಿ ನಡೆದಿದೆ. ಸಿದ್ದಪ್ಪಾಜಿ ದೇವಾಲಯ ಅರ್ಚಕ ಚೆನ್ನಪ್ಪ ಅವರ ಪತ್ನಿ ಚೆನ್ನಮ್ಮ(65) ಆನೆ ದಾಳಿಗೆ ಒಳಗಾಗಿ ಮೃತಪಟ್ಟಿರುವ ಮಹಿಳೆ. ಎಂದಿನಂತೆ ಇಂದು ಬೆಳಗಿನ ಜಾವ 5.30ರ ಸುಮಾರಿನಲ್ಲಿ ಚೆನ್ನಮ್ಮ ಅವರು ತೋಟಕ್ಕೆ ಹೋಗಿ ಹಸುವಿನ ಹಾಲು ಕರೆಯುತ್ತಿದ್ದಾಗ ಏಕಾಏಕಿ ಅವರ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿ ತುಳಿದಿದೆ. ಮಹಿಳೆಯ ಕೂಗಾಟ, ಚೀರಾಟ ಕೇಳಿ ಅಕ್ಕ-ಪಕ್ಕದವರು […]

ಕಾಡಾನೆ ದಾಳಿಗೆ ವ್ಯಕ್ತಿ ಬಲಿ, ನಿಲ್ಲದ ಸಾವಿನ ಸರಣಿ

ಹಾಸನ,ಆ.8-ತಾಲೂಕಿನೆಲ್ಲೆಡೆ ಸುರಿಯುತ್ತಿರುವ ಭಾರೀ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದರೆ, ಮತ್ತೊಂದೆಡೆ ಕಾಡಾನೆಗಳ ಹಾವಳಿ ಮುಂದುವರೆದಿದೆ. ಕಾಡಾನೆ ದಾಳಿಯಿಂದ ಅಮಾಯಕ ವ್ಯಕ್ತಿಯೋಬ್ಬರು ಇಂದು ಬೆಳಿಗ್ಗೆ ಮೃತಪಟ್ಟಿರುವ ಘಟನೆ ತಾಲೂಕಿನ ಸುಳ್ಳಕ್ಕಿ ಸಮೀಪ ನಡೆದಿದೆ. ಮಂಜುನಾಥ್ ಆಲಿಯಾಸ್ ಕೆಂಪಣ್ಣ (53) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ. ತಾಲೂಕಿನ ಸುಳ್ಳಕ್ಕಿ ಸಮೀಪದ ಮೇಲಕೆರೆಯಲ್ಲಿ ಮಂಜುನಾಥ್ ಬೆಳಗ್ಗೆ ಗದ್ದೆ ಕೆಲಸಕ್ಕೆ ಹೋಗುವಾಗ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಕಾಡಾನೆಗಳು ಮನುಷ್ಯರನ್ನು ಬಲಿ ಪಡೆಯುತ್ತಿದ್ದು, ಕಳೆದ 2 ದಿನಗಳ ಹಿಂದಷ್ಟೆ […]

ಗೋಡೆ ಕುಸಿದು ಬಾಲಕ ಸಾವು

ಹಾಸನ, ಆ.5- ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವ ಘಟನೆ ನುಗ್ಗೆಹಳ್ಳಿ ಹೋಬಳಿಯ ಭುವನಹಳ್ಳಿಯಲ್ಲಿ ನಡೆದಿದೆ.ಪ್ರಜ್ವಲ್ (13) ಮೃತಪಟ್ಟ ಬಾಲಕ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮನೆಯ ಗೋಡೆಗೆ ನೀರು ಇಳಿದ ಪರಿಣಾಮ ಮಲಗಿದ್ದ ಪ್ರಜ್ವಲ್ ಮೇಲೆ ರಾತ್ರಿ ಗೋಡೆ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪೋಷಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಗನನ್ನು ರಕ್ಷಿಸಿಕೊಳ್ಳಲು ಪೋಷಕರು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ಏಳನೇ ತರಗತಿ ಓದುತ್ತಿದ್ದ ಪ್ರಜ್ವಲ್ ಪ್ರತಿಭಾವಂತ ವಿದ್ಯಾರ್ಥಿ. ಓದಿನಲ್ಲೂ ಮುಂದಿದ್ದ. ಬಾಲಕನ ಸಾವು ಕುಟುಂಬ ಸದಸ್ಯರಿಗೆ ಬರಸಿಡಿಲಿನಂತೆ ಬಂದೆರಗಿದೆ. ಕಣ್ಣೆದುರೇ […]

2023ರ ಡಿಸೆಂಬರ್ ವೇಳೆಗೆ ಹಾಸನದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ…!

ಹಾಸನ, ಜು.23- ಮುಂದಿನ ವರ್ಷ 2023ರ ಡಿಸೆಂಬರ್ ವೇಳೆಗೆ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ವಿಮಾನ ಹಾರಾಟ ಆರಂಭವಾಗಲಿದೆ ಎಂದು ಕೆಎಸ್‍ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ತಿಳಿಸಿದರು. ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ಹಾಗೂ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಮೂಲಸೌಕರ್ಯ ಸಚಿವ ವಿ. ಸೋಮಣ್ಣ ಅವರು ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲಾಯ ವಿಮಾನ ನಿಲ್ದಾಣಗಳ ಕಾಮಗಾರಿ ಅಭಿವೃದ್ಧಿ […]

ನೋಡುಗರ ಕಣ್ಮನ ಸೆಳೆಯುತ್ತಿರುವ ವಿಷ್ಣುಸಮುದ್ರ ಕೆರೆ

ಬೇಲೂರು,ಜು.18- ಪಟ್ಟಣದ ಇತಿಹಾಸ ಪ್ರಸಿದ್ದ ವಿಷ್ಣು ಸಮುದ್ರಕೆರೆ ತುಂಬಿ ಕೋಡಿ ಬಿದ್ದಿದ್ದು, ಬಂಡೆಕಲ್ಲಿನ ಮೇಲಿನಿಂದ ನೀರು ಹರಿಯುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಕೆಲ ದಿನಗಳಿಂದ ನಿರಂತರವಾಗಿ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅದರಲ್ಲೂ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಆ ಭಾಗದ ನೀರೆಲ್ಲ ಹಳ್ಳ ಕೊಳ್ಳಗಳ ಮೂಲಕ ಪಟ್ಟಣ ಸಮೀಪದ ವಿಷ್ಣು ಸಮುದ್ರಕೆರೆಗೆ ಹರಿದು ಬರುತ್ತಿರುವುದರಿಂದ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಕೋಡಿ ಬಿದ್ದಿರುವ ರಭಸಕ್ಕೆ ನೀರು ಹಿಂದುರುದ್ರಭೂಮಿ ಪಕ್ಕದಲ್ಲಿನ ಬಂಡೆಗಳ ಮೇಲಿನಿಂದ […]

ಕಬಿನಿ ಜಲಾಶಯ ಭರ್ತಿ, ಪ್ರವಾಹ ಭೀತಿ, ಮುನ್ನೆಚ್ಚರಿಕೆಗೆ ಸೂಚನೆ

ನಂಜನಗೂಡು, ಜು.12- ಕೇರಳದ ವೈನಾಡು ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿರುವುದ ರಿಂದ ಜಲಾಶಯ ಭರ್ತಿಯಾದ ಕಾರಣ ಕಬಿನಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ಅಧಿಕವಾಗಿ ನೀರು ನದಿಗೆ ಬಿಡಲಾಗಿದೆ. ಪ್ರವಾಹ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಪಿಲಾ ನದಿಯ ಇಕ್ಕೆಲಗಳಲ್ಲಿ ತಹಸೀಲ್ದಾರ್ ಶಿವಮೂರ್ತಿ ಮಾರ್ಗದರ್ಶನದಲ್ಲಿ ನೀರಾವರಿ ಮತ್ತು ಪೋಲೀಸ್ ಅಧಿಕಾರಿಗಳಿಂದ ಬ್ಯಾರಿಕೇಟ್‍ಗಳನ್ನು ಅಳವಡಿಸುವ ಮೂಲಕ ಬಂದೋಬಸ್ತ್ ಮಾಡಲಾಗಿದೆ. ಬತ್ತಿಹೋಗಿದ್ದ ಕಪಿಲಾ ನದಿಯು ಸತತ ಮಳೆಯಿಂದ ಮೈದುಂಬಿ ಹರಿಯುತ್ತಿದ್ದು, ನದಿಯಲ್ಲಿರುವ ಐತಿಹಾಸಿಕ ಹದಿನಾರುಕಾಲು ಮಂಟಪ ಮತ್ತು ಪರಶುರಾಮ ದೇವಸ್ಥಾನಗಳು ಮುಳುಗುವ […]