ಸಾವಿನಲ್ಲೂ ಒಂದಾದ ದಂಪತಿ

ಕೊಪ್ಪಳ, ನ.3- ಅನಾರೋಗ್ಯದಿಂದ ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಪತಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕುಷ್ಟಗಿ ತಾಲೂಕಿನ ಮುದಲಗಟ್ಟಿ ಗ್ರಾಮದ ಹೊನ್ನಮ್ಮ ತಳವಾರ್ (56) ಹಾಗೂ ಶಿವಪ್ಪ ತಳವಾರ್ (65) ಮೃತಪಟ್ಟ ದಂಪತಿ. ಮಲಗಟ್ಟಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅನ್ಯೋನ್ಯವಾಗಿ ದಂಪತಿ ವಾಸವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಹೊನ್ನಮ್ಮ ತಳವಾರ್ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು ಪತಿ ಶಿವಪ್ಪ ಅವರಿಗೆ ಹೃದಯಾಘಾತವಾಗಿ ಮೂರು ಗಂಟೆ ಅಂತರದಲ್ಲಿ ಮೃತಪಟ್ಟಿದ್ದಾರೆ. ವರುಣಾರ್ಭಟಕ್ಕೆ ತತ್ತರಿಸಿದ ತಮಿಳುನಾಡು, ಇನ್ನೂ 3 ದಿನ […]