170 ಅಡಿಕೆ ಗಿಡ ಕಡಿದು ನಾಶ ಮಾಡಿದ ಕಿಡಿಗೇಡಿಗಳು

ಬೇಲೂರು, ಫೆ.23- ಜಮೀನಿನಲ್ಲಿ ಹುಲುಸಾಗಿ ಬೆಳೆದಿದ್ದ 170ಕ್ಕೂ ಹೆಚ್ಚಿನ ಅಡಿಕೆ ಗಿಡಗಳನ್ನು ಯಾರೋ ಕಿಡಿಗೇಡಿಗಳು ಕಡಿದು ಹಾಕಿ, ಪೈಪ್‍ಗಳನ್ನು ನಾಶಪಡಿಸಿರುವ ಘಟನೆ ತಾಲೂಕಿನ ಶಂಭುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ಸಂತೋಷ್ ಎಂಬುವವರು ಕಳೆದ ಎರಡು ವರ್ಷಗಳಿಂದ ಎಲ್ಲ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ ಮಾಡಿ ಅಡಿಕೆ ಗಿಡಗಳನ್ನು ಬೆಳೆಸಿದ್ದರು. ಆದರೆ ಸುಮಾರು 170ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಾಶ ಮಾಡಿದ್ದಾರೆ. ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದನ್ನು ಕಂಡ ರೈತ ಸಂತೋಷ್ ಆತಂಕ ವ್ಯಕ್ತಪಡಿಸಿದ್ದಲ್ಲದೆ, ಕಣ್ಣೀರಿಟ್ಟು […]

ಕುಡಿದ ಮತ್ತಲ್ಲಿ ತಾಯಿಯನ್ನು ಕೊಂದು, ಹೆಂಡತಿ ಮೇಲೆ ಹಲ್ಲೆ ಮಾಡಿದ ಕುಡುಕ..!

ಹಾಸನ: ಕುಡಿದ ಮತ್ತಿನಲ್ಲಿದ್ದ ಮಗ ತನ್ನ ತಾಯಿಯ ಬರ್ಬರ ಹತ್ಯೆಗೈದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೇ ಮಾಡಿರುವ ಘಟನೆ ಸಂಕಲಾಪುರ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲಾಯ ಸಂಕಲಾಪುರ ಗ್ರಾಮದ ಸಣ್ಣಮ್ಮ( 68) ಹತ್ಯೆಯಾದ ಮಹಿಳೆಯಾಗಿದ್ದು, ಪತ್ನಿ ರೂಪ ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಕಂಠಪೂರ್ತಿ ಕುಡಿದು ಬಂದ ಪುತ್ರ ನಂಜೇಶ್ ಗೌಡ ಹೆತ್ತಮ್ಮ ನನ್ನು ಬರ್ಬರ ವಾಗಿ ಹತ್ಯೆ ಮಾಡಿದ್ದಾನೆ. ತಾಯಿಯನ್ನು ಕೊಂದ ಬಳಿಕ ಪತ್ನಿಯ ಕ್ಯಾಂಟೀನ್ ಬಳಿಬಂದು ಮಾರಣಾಂತಿಕ ಹಲ್ಲೇ ಮಾಡಿದ್ದಾರೆ. ತಾಯಿ […]

ಹಸುಗೂಸನ್ನು ಹರಿದು ತಿಂದ ನಾಯಿಗಳು..!

ಹಾಸನ,ಫೆ.6- ನವಜಾತ ಶಿಶುವನ್ನು ಶ್ವಾನಗಳು ತಿಂದುಹಾಕಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ನಗರದ ಹೊಸ ಬಸ್ ನಿಲ್ದಾಣದ ಬಳಿ ಯಾರೋ ನವಜಾತ ಶಿಶುವನ್ನು ಎಸೆದು ಹೋಗಿದ್ದು, ನಾಯಿಗಳು ಶಿಶುವನ್ನು ಎಳೆದುಕೊಂಡು ಹೋಗುತ್ತಿದ್ದು, ಇದನ್ನು ನೋಡಿದ ಸ್ಥಳೀಯರು ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಾಗಲೇ ಶಿಶುವನ್ನು ನಾಯಿಗಳು ಅರ್ಧಂಬರ್ಧ ತಿಂದು ಹಾಕಿವೆ. ಕರುಣೆ ಇಲ್ಲದ ಕ್ರೂರಿ ತಾಯಿ ಅಕ್ರಮ ಸಂಬಂಧದಿಂದ ಮಗುವಿಗೆ ಜನ್ಮ ನೀಡಿ ಬಳಿಕ ಮಗುವನ್ನು ರಸ್ತೆ ಬದಿ ಎಸೆದು ಹೋಗಿದ್ದು, ಕಣ್ಣು ಬಿಡದ ಕಂದಮ್ಮ ನಾಯಿಗಳಿಗೆ ಆಹಾರವಾಗಿದೆ. […]

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಬೇಲೂರು, ಹಳೇಬೀಡು

ಹಾಸನ, ಫೆ.3- ಈ ಬಾರಿಯ ಬಜೆಟ್ನಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯ ನಾಮ ನಿರ್ದೇಶನ ಮಾಡಿರುವುದು ಸಂತಸ ತಂದಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ಲಿಂಗೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಬೇಲೂರು-ಹಳೇಬೀಡು ಸೇರಿರುವುದು ಜಿಲ್ಲಾಯ ಮಟ್ಟಿಗೆ ಅಲ್ಲದೆ ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಹಕಾರ ನೀಡಿದೆ ಅಲ್ಲದೆ ಕಲೆ ಮತ್ತು ಸಂಸ್ಕøತಿ ಉಳಿಸಿ ಬೆಳೆಸಲು ಉತ್ತೇಜನ ನೀಡಿದಂತಾಗಿದೆ […]

ಹಲವು ವರ್ಷಗಳ ನಂತರ ಎದ್ದು ನಿಂತ 40 ಟನ್ ತೂಕದ ಆನೆ..!

ಬೇಲೂರು,ಜ.21- ತಾಲೂಕಿನ ಬೆಣ್ಣಿನಮನೆ ಗ್ರಾಮದ ಜಮೀನಿನಲ್ಲಿ ಹಲವು ವರ್ಷಗಳಿಂದ ಬಿದ್ದಿದ್ದ ಬೃಹತ್ ಗಾತ್ರದ ಕಲ್ಲಿನ ಆನೆಯನ್ನು 2 ಕ್ರೇನ್ ಹಾಗೂ 1 ಜೆಸಿಬಿ ಯಂತ್ರದ ಮೂಲಕ ಮೇಲಕ್ಕೆತ್ತಲಾಗಿದೆ. ಹೊಯ್ಸಳರ ಕಾಲದಲ್ಲಿ ಬೇಲೂರಿನ ಶ್ರೀ ಚನ್ನಕೆಶವಸ್ವಾಮಿ ದೇಗುಲ ನಿರ್ಮಾಣದ ಸಂದರ್ಭದ ಬೆಣ್ಣಿನಮನೆ ಗ್ರಾಮದಲ್ಲಿದ್ದ ಬೃಹತ್ ಗಾತ್ರದ ಬಂಡೆಕಲ್ಲಿನಿಂದ ಸಾಕಷ್ಟು ಕಲ್ಲಿನ ವಿಗ್ರಹಗಳನ್ನು ಕೆತ್ತಲಾಗಿದೆ ಎಂಬ ಉಹಾ ಪೋಹಗಳು ಹಿಂದಿನಿಂದಲೂ ಗ್ರಾಮಸ್ಥರನ್ನು ಕಾಡುತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಬೆಣ್ಣಿನಮನೆ ಗ್ರಾಮದಲ್ಲಿ 35 ರಿಂದ 40 ಟನ್ ತೂಕದಕಲ್ಲಿನ ಕಲ್ಲಿನ ಆನೆ […]

ಕಾಫಿ ತೋಟದಲ್ಲಿ ಪುರಾತನ ಕಾಲದ ಬೆಳ್ಳಿ ನಾಣ್ಯಗಳು ಪತ್ತೆ

ಹಾಸನ,ಜ.14- ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪುರಾತನ ಕಾಲದ 28 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಸಕಲೇಶಪುರ ತಾಲ್ಲೂಕಿನ ಹಾಲೆಬೇಲೂರು ಗ್ರಾಮದ ಶ್ಯಾಮ್ ಎಂಬುವವರ ಕಾಫಿ ತೋಟದಲ್ಲಿ ಕಾರ್ಮಿಕನೊಬ್ಬ ಕೆಲಸ ಮಾಡುತ್ತಿದ್ದಾಗ ಬ್ರಿಟಿಸ್ ಕಾಲದ ಒಂದು ರೂ. ಮುಖ ಬೆಲೆಯ ರಾಣಿ ವಿಕ್ಟೋರಿಯಾ ಅವರ ಚಿತ್ರವಿರುವ 28 ಬೆಳ್ಳಿ ನಾಣ್ಯಗಳು ಪತ್ತೆಯಾಗಿದ್ದು, ಮಾಲೀಕನಿಗೆ 9 ನಾಣ್ಯಗಳನ್ನು ಕೊಟ್ಟು ಉಳಿದ ನಾಣ್ಯಗಳನ್ನು ಕಾರ್ಮಿಕ ಹರೀಶ್ ಬಚ್ಚಿಟ್ಟುಕೊಂಡಿದ್ದ. ವಿಷಯ ತಿಳಿದ ಪೊಲೀಸರು ಹರೀಶ್‍ನನ್ನು ಬಂಸಿ ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 1860ರಿಂದ […]

ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಗೂಡ್ಸ್ ಗಾಡಿ : ತಪ್ಪಿದ ಭಾರೀ ಅನಾಹುತ

ಅರಸೀಕೆರೆ,ಜ.6- ನಿದ್ದಾಯ ಮಂಪರಿಗೆ ಜಾರಿದ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಗಾಡಿ ಹೆದ್ದಾರಿಗೆ ಅಡ್ಡಲಾಗಿ ಮಗುಚಿ ಬಿದ್ದಿದು, ಅದೃಷ್ಟವಶಾತ್ ಸಾವು-ನೋವು ಸಂಭವಿಸಿಲ್ಲ. ಅಕ್ಕಿ ತುಂಬಿಕೊಂಡು ಶಿವಮೊಗ್ಗದಿಂದ ಬೆಂಗಳೂರು ಕಡೆ ಸಾಗುತ್ತಿದ್ದ ಬುಲೆರೋ ಗೂಡ್ಸ್ ಗಾಡಿ ನಗರದ ಪಿಪಿ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ವಿಭಜಕದ ಮಧ್ಯೆ ಅಳವಡಿಸಿರುವ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿ ಹೊಡೆದಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಹೆದ್ದಾರಿಯಲ್ಲಿ ಈ ವೇಳೆ ಯಾವುದೇ ವಾಹನಗಳು ಸಾಗದೆ ಇದುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು […]