ರಾಮನಗರದಲ್ಲಿ ಕಾಡಾನೆ ಪ್ರತ್ಯಕ್ಷ

ರಾಮನಗರ, ನ.23- ಹೊರವಲಯದ ರಾಯರದೊಡ್ಡಿ ನಗರದ ಬೋಳಪ್ಪನ ಕೆರೆ ಬಳಿ ಒಂಟಿ ಆನೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕೆರೆಯಲ್ಲಿ ಬೀಡುಬಿಟ್ಟಿರುವ ಕಾಡಾನೆಯನ್ನು ನೋಡಲು ತಂಡೋಪ ತಂಡವಾಗಿ ಜನ ಸೇರುತ್ತಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಈ ನಡುವೆ ರಾಮನಗರದ ನಗರಸಭೆ ಅಧ್ಯಕ್ಷರ ಪತಿ ಲಕ್ಷ್ಮಿಪತಿ ಅವರು ಆನೆ ಓಡಿಸಲು ಹೋಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆನೆ ಅಟ್ಟಿಸಿಕೊಂಡು ಬಂದು ಸೊಂಡಿಲಿನಿಂದ ಎಸೆದಿದೆ. ಆದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೈಲಲ್ಲಿ ಹೊಟ್ಟೆ ಬಿರಿಯೋಹಾಗೆ ತಿಂದು 8 ಕೆಜಿ ತೂಕ […]

ಪ್ರಿಯತಮೆಗೆ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿ

ಚನ್ನಪಟ್ಟಣ, ಸೆ.14- ಮದುವೆಗೆ ಪ್ರಿಯತಮೆ ಒಲ್ಲೆ ಎಂದಿದ್ದಕ್ಕೆ ಮನನೊಂದು ಭಗ್ನ ಪ್ರೇಮಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರ ನಗರದ ಟುಪ್ಲೇನ್ ನಿವಾಸಿ ಭಗ್ನಪ್ರೇಮಿ ವೆಂಕಟೇಶ್ (25) ಯುವತಿ ಯೊಬ್ಬಳನ್ನು ಪ್ರೀತಿಸಿದ್ದು, ಮದುವೆಗಾಗಿ ಯುವತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರಿಗೂ ಆಗಾಗ್ಗೆ ಜಗಳ ನಡೆಯುತ್ತಿತ್ತೆಂದು ಹೇಳಲಾಗಿದೆ. ನಗರದ ಮೂರನೇ ಕ್ರಾಸ್‍ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರೆನ್ನಲಾಗಿದ್ದು, ಈ ಸಂದರ್ಭದಲ್ಲಿ ಇಬ್ಬರು ಪರಸ್ಪರ […]

ಗ್ರಾಪಂ ಕಚೇರಿಯ ಬೀಗ ಒಡೆದು ಕಂಪ್ಯೂಟರ್, ದಾಖಲೆಗಳನ್ನು ಕದ್ದ ಕಳ್ಳರು

ಕನಕಪುರ, ಜು.14- ತಾಲ್ಲೂಕಿನ ಅಚ್ಚಲು ಗ್ರಾಮ ಪಂಚಾಯಿತಿ ಕಚೇರಿಯ ಬೀಗ ಒಡೆದು ಕಳ್ಳರು ಕಂಪ್ಯೂಟರ್ ಹಾಗೂ ಕೆಲ ದಾಖಲೆಗಳನ್ನು ಕದ್ದೊಯ್ದಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಇಂದು ಬೆಳಗ್ಗೆ ಗ್ರಾಪಂಗೆ ಬಂದ ಕೆಲ ಅಧಿಕಾರಿಗಳು ಬಾಗಿಲು ತೆರೆದಿರುವುದನ್ನು ನೋಡಿ ಗಾಬರಿಗೊಂಡು ಒಳನೋಡಿದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಗೊತ್ತಾಗಿದೆ. ಕಂಪ್ಯೂಟರ್‍ಗಳು ಮತ್ತು ಬೀರುವಿನಲ್ಲಿಟ್ಟಿದ್ದ ಕೆಲ ದಾಖಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿರುವ ಸಾತನೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ರವಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಗಳ ಪ್ರಕಾರ, ಕೆಲವು […]

ರಾಮನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 7 ಬಾಂಗ್ಲಾ ಪ್ರಜೆಗಳ ಬಂಧನ

ರಾಮನಗರ, ಜು.13- ಸೂಕ್ತ ದಾಖಲೆಗಳಿಲ್ಲದೆ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ 7 ಬಾಂಗ್ಲಾದೇಶದ ಪ್ರಜೆಗಳನ್ನು ರಾಮನಗರ ಜಿಲ್ಲೆಯ ಬಸವನಪುರದಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಮೊಹಮ್ಮದ್ ಸೊಹಿಲ್ ರಾಣಾ(34), ಜುಲಿಕರ್ ಅಲಿ(34), ಉಜಲ್(30), ಮೊಹಮ್ಮದ್ ಮಿನ್ಹಾಜುಲ್ ಹುಸ್ಸೆನ್(25), ಮುಸ್ಸಾ ಶೇಖ್(27), ರಹೀಮ್(27) ಮತ್ತು ಆರಿಫುಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಾಮನಗರ ಜಿಲ್ಲಾ ಪೊಲೀಸ್ ಅೀಧಿಕ್ಷಕ ಸಂತೋಷ್ ಬಾಬು, ಬಸವನಪುರ ಗ್ರಾಮದಲ್ಲಿರುವ ಲಿಂಕ್‍ಅಪ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಅಕ್ರಮವಾಗಿ ಬಂದು ಕೆಲಸ ಮಾಡುತ್ತಿದ್ದಾರೆ ಎಂಬ […]

ಬಿಟ್ಟಿ ಪ್ರಚಾರಕ್ಕೆ ಪಾದಯಾತ್ರೆ: ನಂದಿನಿಗೌಡ ಆರೋಪ

ಬೆಂಗಳೂರು,ಜ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಮೇಕೆದಾಟು ಅಣೆಕಟ್ಟು ಯೋಜನೆಗೆ ಡಿಪಿಆರ್ ತಯಾರಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿದ್ದಾರೆ. ಅನುಮೋದನೆ ಸಿಕ್ಕ ಕೂಡಲೇ ಯೋಜನೆ ಅನುಷ್ಠಾನಗೊಳ್ಳಲಿದೆ. ಈ ಲಾಭ ಬಿಜೆಪಿಗೆ ಆಗಲಿದೆ ಎಂಬ ದುರುದ್ದೇಶದಿಂದ ಡಿ.ಕೆ ಶಿ.ವಕುಮಾರ್ ಬಿಟ್ಟಿ ಪ್ರಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರಾಮನಗರ ಜಿಲ್ಲಾ ಭಾರತೀಯ ಜನತಾ ಪಕ್ಷ ಉಪಾಧ್ಯಕ್ಷರಾದ ನಂದಿನಿ ಗೌಡ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು , ಡಾ.ನಂಜುಂಡಪ್ಪ ಅವರ ವರದಿಯಂತೆ, ಕನಕಪುರ ತಾಲ್ಲೂಕು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದೆ. […]