“ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ನಾವು ವಿಶ್ವಕಪ್ ಬಹಿಷ್ಕರಿಸಬೇಕಾಗುತ್ತದೆ”

ಇಸ್ಲಮಾಬಾದ್,ನ.26- ಭಾರತ ನಮ್ಮ ದೇಶಕ್ಕೆ ಬಂದು ಆಡದಿದ್ದರೆ ನಾವು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಎಚ್ಚರಿಕೆ ನೀಡಿದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಭಾಗವಹಿಸದಿದ್ದರೆ, ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಗೆ ನಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಎಚ್ಚರಿಸಿದ್ದಾರೆ. ವಿಶ್ವಕಪ್ ಪಂದ್ಯಕ್ಕೂ ಮುನ್ನ ಏಷ್ಯಾ ಕಪ್ ಪಂದ್ಯ ನಡೆಯುವುದರಿಂದ ಪಾಕ್ ಇಂತಹ ತೀರ್ಮಾನಕ್ಕೆ ಬಂದಿದೆ. ನಮ್ಮ ತಂಡ […]

ಯೋಲೋ247 ಮೂಲಕ ಮೋಜಿನ ಗೇಮಿಂಗ್ ಅನುಭವ

ಬೆಂಗಳೂರು, ನವೆಂಬರ್ 21, 2022: ಭಾರತ ಅನಾದಿ ಕಾಲದಿಂದಲೂ ಆಟ ಮತ್ತು ಭವಿಷ್ಯವನ್ನು ಅಂದಾಜಿಸುವ ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದೆ. ಮಹಾಭಾರತದಿಂದ ಹಿಡಿದು ಪ್ರಸ್ತುತ ಕಾಲಘಟ್ಟದಲ್ಲಿ ಬ್ರಿಟಿಷರು ಭಾರತದಲ್ಲಿ ಕ್ರಿಕೆಟ್ ಆಟವನ್ನು ಸಮುದಾಯದ ಆಚರಣೆಗಳಿಗೆ ಪರಿಚಯಿಸುವವರೆಗೆ, ವಿನೋದ ಮತ್ತು ಭವಿಷ್ಯವಾಣಿಯ ಪರಿಕಲ್ಪನೆಯು ನಮ್ಮ ದೇಶದಲ್ಲಿ ನಿರಂತರ ಹಾಗೂ ಶಾಶ್ವತವಾಗಿದೆ. ನಾವು ಮನರಂಜನೆಯಲ್ಲಿ ತೊಡಗಿಸಿಕೊಳ್ಳುವ ವಿಧಾನವು ಕಳೆದ ಹಲವು ವರ್ಷಗಳಲ್ಲಿ ಅನೇಕ ರೂಪಗಳನ್ನು ಪಡೆದಿದ್ದರೂ, ಆಟದಲ್ಲಿ ಮೋಜು ಮತ್ತು ಭವಿಷ್ಯವನ್ನು ಅಂದಾಜಿಸುವ ನಿಜವಾದ ಮನೋಭಾವ ಬದಲಾಗಿಲ್ಲ. ಇಂದು, ಇಂಟರ್‍ನೆಟ್ ಆಗಮನದೊಂದಿಗೆ, […]

ಗೂಗಲ್ ಡೂಡಲ್‍ನಲ್ಲಿ ಫಿಫಾ ಮೆರಗು

ಕತಾರ್, ನ. 20- ವಿಶ್ವದ ಅತ್ಯಂತ ಕ್ರೀಡಾ ಕೂಟಗಳಲ್ಲಿ ಒಂದಾಗಿರುವ ಫಿಫಾ ಫುಟ್ಬಾಲ್ ಮಹಾ ಸಂಗ್ರಾಮವು ಇಂದಿನಿಂದ ಕಾತರ್‍ನಲ್ಲಿ ಆರಂಭಗೊಳ್ಳಲಿದ್ದು ಅದರ ಸಲುವಾಗಿಯೇ ಗೂಗಲ್ ವಿಶೇಷ ಅನಿಮೇಷನ್ ಡೂಡಲ್ ಮೂಡಿಸಿದೆ. ಫುಟ್ಬಾಲ್ ಆಟವನ್ನು ಬಿಂಬಿಸುವ ಚೆಂಡು ಹಾಗೂ ಬೂಟುಗಳನ್ನು ಪರದೆ ಮೇಲೆ ಮೂಡಿಸುವ ಮೂಲಕ ಆಸಕ್ತಿ ಮೂಡಿಸಿದ್ದು, ಈ ಚಿತ್ರದ ಮೇಲೆ ಕ್ಲಿಕ್ ಮಾಡಿದ ತಕ್ಷಣ ಫಿಫಾ ಫುಟ್ಬಾಲ್‍ನ ಸಂಪೂರ್ಣ ವಿವರವುಳ್ಳ ಪುಟ ತೆರೆದುಕೊಳ್ಳುವ ಮೂಲಕ ಫುಟ್ಬಾಲ್ ಪ್ರೇಮಿಗಳ ಆಸಕ್ತಿ ಹೆಚ್ಚಿಸುತ್ತದೆ. ಗೂಗಲ್ ಡೂಡಲ್ ಈ ಬಾರಿ […]

ಕೊಹ್ಲಿ ದಾಖಲೆ ಮುರಿಯಲು ಹೊರಟ ಸೂರ್ಯಕುಮಾರ್

ವೆಲ್ಲಿಂಗ್ಟನ್, ನ. 17- ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ ತಂಡದ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಅವರು ವಿರಾಟ್ ಕೊಹ್ಲಿಯ ಮಹತ್ತರ ದಾಖಲೆ ಮುರಿಯುವ ಹೊಸ್ತಿನಲ್ಲಿದ್ದಾರೆ. 2016ರಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ವಿರಾಟ್ ಕೊಹ್ಲಿ ಅವರು ಟಿ 20 ಮಾದರಿಯ ಎಲ್ಲ ಕ್ರಿಕೆಟ್ನಲ್ಲಿ 1614 ರನ್ಗಳನ್ನು ಸಿಡಿಸಿದ್ದರು. ಆ ವರ್ಷದ ಐಪಿಎಲ್ನಲ್ಲಿ 4 ಭರ್ಜರಿ ಶತಕ ಗಳಿಸಿ 147.14 ಸ್ಟೈಕ್ರೇಟ್ನಲ್ಲಿ 89.66 ಸರಾಸರಿಯಲ್ಲಿ 1000 ಸಾವಿರ ರನ್ ಗಳಿಸಿದ್ದರು. ಭಾರತದ ಪರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟಿ ಮಾದರಿಯ […]

ಭಾರತ ತಂಡದ ‘ಸೂಪರ್ ಸ್ಟಾರ್’ಗಳ ಬಗ್ಗೆ ಎಚ್ಚರವಹಿಸಿ

ನವದೆಹಲಿ, ನ. 16- ಟಿ 20 ವಿಶ್ವಕಪ್ ನಂತರ ಸೆಮಿಫೈನಲ್ ಸೋತು ಪ್ರಶಸ್ತಿ ಕೈಚೆಲ್ಲಿರುವ ನ್ಯೂಜಿಲ್ಯಾಂಡ್ ಹಾಗೂ ಭಾರತ ತಂಡಗಳು ಈಗ ಟ್ವೆಂಟಿ-20 , ಏಕದಿನ ಸರಣಿಗಳನ್ನು ಆಡಲು ಸಜ್ಜಾಗಿದೆ. ಸರಣಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್, ಭಾರತ ತಂಡವು ಟಿ-20 ಮುಕುಟ ಗೆಲ್ಲುವಲ್ಲಿ ಎಡವಿದ್ದರೂ ಕೂಡ ಆ ತಂಡದಲ್ಲಿ ಸೂಪರ್ ಸ್ಟಾರ್ಗಳ ದಂಡೇ ಇರುವುದರಿಂದ ನಾವು ಅವರನ್ನು ಲಘುವಾಗಿ ಪರಿಗಣಿಸುವುದಿಲ್ಲ’ ಎಂದು ಹೇಳಿದ್ದಾರೆ. ಟೀಂ ಇಂಡಿಯಾವು ಕಳೆದೆರಡು ವರ್ಷಗಳಿಂದ ಟಿ 20 […]

ಅಚಂತಾ ಶರತ್ ಕಮಲ್‍ಗೆ ಖೇಲ್ ರತ್ನ ಪ್ರಶಸ್ತಿ

ನವದೆಹಲಿ, ನ. 15- ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳಿಗೆ ನೀಡುವ ಪ್ರತಿಷ್ಠಿತ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಹಾಗೂ ಅರ್ಜುನ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು ನವೆಂಬರ್ 30 ರಂದು ಕೇಂದ್ರ ಸರ್ಕಾರವು ಪ್ರಶಸ್ತಿ ಪ್ರದಾನ ಮಾಡಲಿದೆ. ಟೇಬಲ್ ಟೆನ್ನಿಸ್ನ ಧ್ರುವತಾರೆ ಅಚಂತಾ ಶರತ್ ಅವರು ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರೆ, ಮಹಿಳಾ ಬಾಕ್ಸರ್ ನಿಕಿತಾ ಜಾರನ್, ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್, ಚೆಸ್ ಮಾಸ್ಟರ್ ಪಿ.ಪರಂಗನಂದ ಸೇರಿದಂತೆ 25 ಮಂದಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ. ಮಾಜಿ ಕ್ರಿಕೆಟಿಗ […]

ಭಾರತದ ಸರಣಿಗೆ ಕಿವೀಸ್ ತಂಡ ಪ್ರಕಟ

ನವದೆಹಲಿ, ನ. 15- ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ 20 ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಸೋತು ಪ್ರಶಸ್ತಿ ಆಸೆ ಕೈಚೆಲ್ಲಿದ್ದ ನ್ಯೂಜಿಲ್ಯಾಂಡ್ ತಂಡವು ಭಾರತದ ವಿರುದ್ಧದ ಏಕದಿನ ಹಾಗೂ ಟಿ 20 ಸರಣಿಗೆ 15 ಸದಸ್ಯರ ತಂಡವನ್ನು ಇಂದು ಪ್ರಕಟಿಸಿದೆ. ತಂಡದ ಹಿರಿಯ ಆಟಗಾರರಾದ ಮಾರ್ಟಿನ್ ಗುಪ್ಟಿಲ್ ಹಾಗೂ ಟ್ರೆಂಟ್ ಬೌಲ್ಟ್ ಅವರು ತಂಡದಿಂದ ಹೊರಗಿಡಲಾಗಿದೆ. ನವೆಂಬರ್ 18 ರಿಂದ ಮೆನ್ ಇನ್ ಬ್ಲೂ ವಿರುದ್ಧ ನ್ಯೂಜಿಲ್ಯಾಂಡ್ ತಂಡವು 3 ಏಕದಿನ ಹಾಗೂ 3 ಟ್ವೆಂಟಿ 20 ಪಂದ್ಯವನ್ನು […]

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೂರ್ಯ ಸಿಡಿದೇಳಬೇಕಿತ್ತು: ಜಾಫರ್

ನವದೆಹಲಿ,ನ.15- ಈ ಬಾರಿಯ ಟಿ-20 ವಿಶ್ವಕಪ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದರೂ ಪ್ರಮುಖ ಪಂದ್ಯಗಳಲ್ಲಿ ಅವರ ಬ್ಯಾಟ್‍ನಿಂದ ರನ್ ಹರಿದುಬರಲಿಲ್ಲ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಾಸೀಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡಕ್ಕೆ ನಿರ್ಣಾಯಕ ಪಂದ್ಯಗಳಾಗಿದ್ದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರಿಸಲಿಲ್ಲ ಹಾಗಂತ ಅವರ ಸಾಧನೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಜಾಫರ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ಆಡಿದ ಆರು […]

ವಿಶ್ವಶ್ರೇಷ್ಠ ತಂಡದಲ್ಲಿ ಕೊಹ್ಲಿ, ಸೂರ್ಯಕುಮಾರ್ ಯಾದವ್‍ಗೆ ಸ್ಥಾನ

ನವದೆಹಲಿ, ನ. 14- ಆಸ್ಟ್ರೇಲಿಯಾ ಟಿ 20 ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆದ ನಂತರ ಕ್ರಿಕೆಟ್ ವಿಶ್ಲೇಷರು ಬಲಿಷ್ಠ 11 ಆಟಗಾರರ ತಂಡವನ್ನು ಪ್ರಕಟಿಸಿದೆ. ಮಾಜಿ ಕ್ರಿಕೆಟಿಗರಾದ ಇಯಾನ್ ಬಿಸಪ್, ಶಿವನಾರಾಯಣ್ ಚಂದ್ರಪಾಲ್, ವಿಶ್ಲೇಷಕ ಮೇಲ್ ಜೋನ್ಸ್, ಪತ್ರಕರ್ತ ಪಾರ್ಥ ಬಾದೂರಿ ಹಾಗೂ ಐಸಿಸಿ ಕಮಿಟಿಯ ಮುಖ್ಯ ಕಾರ್ಯದರ್ಶಿ ವಾಸಿಮ್ ಕಾನ್ ಅವರು ಈ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದಾರೆ. ಟಿ 20 ವಿಶ್ವಕಪ್ ಟೂರ್ನಿಯಲ್ಲಿ 4 ಅರ್ಧಶತಕ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಭಾರತದ […]

ರಾತ್ರೋ ರಾತ್ರಿ ನಂ.1 ತಂಡ ಕಟ್ಟಲಾಗಲ್ಲ : ಸಚಿನ್

ಮುಂಬೈ, ನ. 13- ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್‍ಗಳಿಂದ ದಯನೀಯ ಸೋಲು ಕಂಡು 15 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದ್ದರಿಂದ ಅನೇಕ ಮಾಜಿ ಕ್ರಿಕೆಟಿಗರು ತಮ್ಮ ಅಸಮಾಧಾನ ಹೊರಹಾಕಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಈ ಸೋಲಿನ ಕುರಿತು ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ಹಾಗೂ ಭಾರತ ನಡುವೆ ಸೆಮಿಫೈನಲ್ ನಡೆದ ಅಡಿಲೇಡ್ ಮೈದಾನದ ಬೌಂಡರಿಗಳು ತುಂಬಾ ಚಿಕ್ಕದಾಗಿದ್ದು, ಈ ಮೈದಾನದಲ್ಲಿ […]