ಬಿಜಾಪುರ ನಗರಪಾಲಿಕೆ ಅತಂತ್ರ, ಅಧಿಕಾರಕ್ಕೇರಲು ಬಿಜೆಪಿಗೆ 1 ಸ್ಥಾನದ ಕೊರತೆ

ಬಿಜಾಪುರ,ಅ.31-ಜಿದ್ದಾಜಿದ್ದಿನ ಕಣವಾಗಿದ್ದ ನಗರಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟು 35 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಾಲಿಕೆಯಲ್ಲಿ ಚುಕ್ಕಾಣಿ ಹಿಡಿಯಲು ಒಂದು ಸ್ಥಾನದ ಕೊರತೆ ಎದುರಾಗಿದ್ದು, ಪಕ್ಷೇತರ ಬೆಂಬಲದಿಂದ ಅಕಾರಕ್ಕೆ ಬರುವ ಸಾಧ್ಯತೆ ಇದೆ. ಕಾಂಗ್ರೆಸ್ 10 ಸ್ಥಾನ ಪಡೆದು 2ನೇ ಸ್ಥಾನದಲ್ಲಿದ್ದರೆ ಪಕ್ಷೇತರರು 5 ವಾರ್ಡ್‍ಗಳಲ್ಲಿ ಜೆಡಿಎಸ್-1 ಹಾಗೂ ಎಂಐಎ 2 ವಾರ್ಡ್‍ಗಳಲ್ಲಿ ಗೆಲುವು ಸಾಸಿದೆ. ಮಾಜಿ […]

ಟ್ರ್ಯಾಕ್ಟರ್‌ಗೆ ಕ್ರೂಸರ್ ಡಿಕ್ಕಿ, ದಂಪತಿ ಸಾವು

ವಿಜಯಪುರ, ಅ.27- ಕಬ್ಬು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್‍ಗೆ ಹಿಂಬದಿಯಿಂದ ಬಂದ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧೂಳ್‍ಖೇಡ್ ಬಳಿಯ ಎನ್‍ಎಚ್-50ರಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಬಯ್ಯಾಜಿ ಶಿಂಧೆ (50) ಹಾಗೂ ಅವರ ಪತ್ನಿ ಸುಮಿತ್ರಾ ಶಿಂಧೆ (40) ಮೃತಪಟ್ಟ ದಂಪತಿ. ಘಟನೆಯಲ್ಲಿ 9 ಜನರಿಗೆ ಗಾಯಗಳಾಗಿದ್ದು, ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟಿ ಕಂಠ ಗಾಯನ : 1 […]