ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ

Social Share

ಮಂಡ್ಯ, ಅ.22- ಕಾವೇರಿ ಜಲಾನಯನ ಪ್ರದೇಶದಲ್ಲಿ 4 ತಿಂಗಳಿನಿಂದ ಆರಂಭವಾದ ವರುಣನ ಆರ್ಭಟ ಆಗಾಗ ವಿರಾಮ ಪಡೆದು ಮತ್ತೆ ಮುಂದುವರಿದಿರುವುದು ಜನರ ಆತಂಕವನ್ನು ಇಮ್ಮಡಿಗೊಳಿಸಿದೆ. ಬಹುತೇಕ ದಿನಗಳಲ್ಲಿ ಕನಿಷ್ಠ 25 ಸಾವಿರ ಕ್ಯುಸೆಕ್ ನೀರಿನಿಂದ ಮೈದುಂಬಿ ಹರಿಯತ್ತಿರುವ ಕಾವೇರಮ್ಮನ ಜತೆಗೆ ಮಳೆರಾಯ ಕೂಡ ಆರ್ಭಟಿಸುತ್ತಿದ್ದಾನೆ.

ಚಳಿಗಾಲವೂ ಮಳೆಗಾಲವಾಗಿ ಪರಿವರ್ತನೆ ಆಗಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡಲಾರಂಭಿಸಿದೆ. ಏಕೆಂದರೆ ಈಗಾಗಲೇ ಪ್ರಕೃತಿ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಯಿಂದಾಗಿ ಬೇಸಿಗೆ ಮತ್ತು ಮಳೆಗಾಲ ಇರಲಿದೆ ಎಂದು ಪರಿಸರ ವಿಜ್ಞಾನಿಗಳು ನೀಡಿದ್ದ ಎಚ್ಚರಿಕೆ ನಿಜವಾಗಿದೆಯೇ ಎಂಬ ಅನುಮಾನವೂ ಕಾಡುತ್ತಿದೆ.

ಜೂನ್ ತಿಂಗಳಲ್ಲಿ ಆರಂಭವಾದ ಮಳೆ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ಈಗಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಮಾತ್ರವಲ್ಲ ಹೇಮಾವತಿ ಪಾತ್ರದಲ್ಲೂ ಮಳೆ ಆಗುತ್ತಿರುವುದರಿಂದ ಕನ್ನಂಬಾಡಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಕಾಂಗ್ರೆಸ್‍ನಲ್ಲೀಗ ಮೂರು ಶಕ್ತಿ ಕೇಂದ್ರಗಳಿವೆ : ಶೆಟ್ಟರ್ ವ್ಯಂಗ್ಯ

ಸದ್ಯ ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಹಗಲು ಬಿಸಿಲಿನ ಪ್ರತಾಪವಿದ್ದರೆ, ರಾತ್ರಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಹಾಗಾಗಿ ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸತತ ಮಳೆ ಜತೆಗೆ ಬಿಸಿಲಿನಿಂದಾಗಿ ಜನಜೀವನದಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಮನೆಗಳು ಶಿಥಿಲ: ರಾತ್ರಿ ವೇಳೆ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಶಿಥಿಲಗೊಂಡಿರುವ ಮನೆಯ ನಿವಾಸಿಗಳು, ಮನೆ ಬೀಳುವ ಆತಂಕದಿಂದ ಜಾಗರಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಭಾರೀ ಮಳೆ ಮುಂದುವರಿದಿರುವ ಪರಿಣಾಮ ಯಾವ ಕೆರೆ, ಕಟ್ಟೆಗಳು ಮತ್ತುನಾಲೆಗಳು ಯಾವಾಗ ಒಡೆಯುತ್ತವೆ ಎಂಬುದನ್ನು ಊಹಿಸಲಾಗುತ್ತಿಲ್ಲ. ರಾತ್ರಿ ಚನ್ನಾಗಿದ್ದ ಕೆರೆ, ನಾಲೆಗಳು ಬೆಳಗ್ಗಿನ ವೇಳೆಗೆ ರೌದ್ರಾವತಾರ ತಾಳುತ್ತಿದ್ದು, ಜನತೆ ನೆಮ್ಮದಿಯಿಂದ ನಿದ್ರೆ ಮಾಡಲಾಗದ ಸ್ಥಿತಿ ಎದುರಾಗಿದೆ.

ಖರ್ಗೆ ಆಯ್ಕೆ ಬೆನ್ನಲ್ಲೇ ತಂತ್ರ ಬದಲಿಸಿದ ಬಿಜೆಪಿ

ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ಜುಲೈ ತಿಂಗಳಿಂದಲೂ ನೀರಿನ ಮಟ್ಟ 124 ಅಡಿಗಿಂತ ಹೆಚ್ಚಿದೆ. 5 ತಿಂಗಳಿಂದ ನೀರಿನ ಮಟ್ಟ ಸಮತೋಲನ ಕಾಯ್ದುಕೊಂಡಿರುವುದು ವಿಶೇಷ.ಕೆಲವೊಮ್ಮೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಕಟ್ಟೆಯ ಹಿತದೃಷ್ಟಿಯಿಂದ ಹೊರಹರಿವನ್ನು ಹೆಚ್ಚಿಸಿದ ಸಂದರ್ಭದಲ್ಲಿ ಮಾತ್ರ 123 ಅಡಿಗಿಳಿದಿದೆ. ಸದ್ಯ ಕಟ್ಟೆಗೆ 54ಸಾವಿರ ಕ್ಯುಸೆಕ್ ನೀರು ಬರುತ್ತಿದ್ದು, ಕಟ್ಟೆಯಿಂದ 52 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.

Articles You Might Like

Share This Article