ಬೆಂಗಳೂರು, ಸೆ.19- ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಬೆಳೆಗೆ ಸಾಕಷ್ಟು ನೀರು ಇಲ್ಲದಿರುವಾಗ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಡದಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ-ಗಣೇಶ ಹಬ್ಬ ಆಚರಣೆ ಮಾಡುವ ಸಂದರ್ಭದಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು ತಮಿಳುನಾಡಿಗೆ ನೀರು ಬಿಡಲು ಆದೇಶ ಮಾಡಿದೆ. ನಿನ್ನೆ ರಾತ್ರಿಯಿಂದಲೇ 2 ಸಾವಿರ ಕ್ಯುಸೆಕ್ಸ್ ನೀರು ಕಾವೇರಿಯಿಂದ ಮತ್ತು ಕಬಿನಿಯಿಂದ ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುತ್ತಿದ್ದಾರೆ ಎಂದರು.
ಸಚಿವ ರಾಜಣ್ಣ 3 ಡಿಸಿಎಂ ಹೇಳಿಕೆಗೆ ದ್ವನಿಗೊಡಿಸಿದ ಗೃಹ ಸಚಿವ ಪರಮೇಶ್ವರ್
ನಾವು ಕಟ್ಟಿರುವ ಜಲಾಶಯಕ್ಕೆ ಯಾವ ಸರ್ಕಾರವು ಹಣ ಕೊಟ್ಟಿಲ್ಲ. ನಮ್ಮ ರಾಜ್ಯವನ್ನು ಕೇಂದ್ರ ಸರ್ಕಾರ ಲೆಕ್ಕಕ್ಕೆ ಇಟ್ಟಿಲ್ಲ. ರಸ್ತೆಯಲ್ಲಿ ಪ್ರತಿಭಟನೆ ಮಾಡಿದರೆ ಸಮಸ್ಯೆ ಪರಿಹಾರ ಆಗಲ್ಲ. ರಾಜ್ಯ ಸರ್ಕಾರ ಕಠಿಣ ನಿರ್ದಾರ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ನಮ್ಮ ದುಡ್ಡಿನಲ್ಲಿ ಡ್ಯಾಮ್ ಕಟ್ಟಿರೋದು ತಮಿಳುನಾಡಿಗೆ ನೀರು ಬಿಡೋಕಾ? ಎಂದು ಪ್ರಶ್ನಿಸಿದ ಅವರು, ಬೇಕಿದ್ದರೆ ಅಲ್ಲಿ ಅವರ ದುಡ್ಡಿನಲ್ಲಿ 2 ಮೂರು ಡ್ಯಾಮ್ ಕಟ್ಟಲಿ ಎಂದರು. ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಬಾಂಗ್ಲಾದೇಶದ ನೀರಿನ ಸಮಸ್ಯೆ ಬಗೆಹರಿಸಿದರು.ನಮ್ಮ ದುರದೃಷ್ಟಕರ ನಮ್ಮ ನೀರಿನ ಸಮಸ್ಯೆ ಬಗೆಹರಿಸಲು ಆಗಲಿಲ್ಲ. ರಾಜ್ಯಸಭೆಯಲ್ಲಿ ನಿನ್ನೆ ತಮಿಳುನಾಡು ಸಂಸದರು ನೀರು ಸರಿಯಾಗಿ ಬಿಡುತ್ತಿಲ್ಲ ಎಂಬ ಆರೋಪವನ್ನು ನಮ್ಮ ಮೇಲೆ ಮಾಡಿದ್ದಾರೆ. ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ವಿಚಾರವಾಗಿ ಚರ್ಚೆಮಾಡುವುದಾಗಿ ಅವರು ಹೇಳಿದರು.
BIG NEWS: ರಾಜ್ಯಾದ್ಯಾಂತ ಹುಕ್ಕಾಬಾರ್ ನಿಷೇಧಿಸಿಲು ರಾಜ್ಯ ಸರ್ಕಾರ ತೀರ್ಮಾನ
ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ಸಭೆಯಲ್ಲಿ ಕಾವೇರಿ ವಿಚಾರವಾಗಿ ಮಾತನಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲಿದ್ದರು? ದೇವೇಗೌಡರು ನಿಲ್ಲಲು ಸಾಧ್ಯವಾಗದೆ ಇರೋ ಪರಿಸ್ಥಿತಿಯಲ್ಲಿ ಸದನದಲ್ಲಿ ಚರ್ಚೆ ಮಾಡಿದ್ದಾರೆ. ತಮಿಳುನಾಡಿನವರು ಹೇಗೆ ನಡೆದುಕೊಳ್ಳುತ್ತಾರೆ? ನೀವು ಹೇಗೆ ನಡೆದುಕೊಳ್ಳುತ್ತೀರ ಎಂಬುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ತಮಿಳುನಾಡು ಅರ್ಜಿ ಹಾಕಿದ ತಕ್ಷಣವೇ ಯಾಕೆ ನೀರು ಬಿಟ್ಟಿರಿ? ಈ ಸರ್ಕಾರದವರು ಯಾಕೆ ವಿರೋಧಿಸಲಿಲ್ಲ. ಪ್ರಾಧಿಕಾರ ನೀರು ಬೀಡು ಎಂದ ತಕ್ಷಣ ಬಿಡಬೇಕು ಎಂದೇನು ಇಲ್ಲ. ಸದನದಲ್ಲಿ ದೇವೇಗೌಡರು ಏಕಾಂಗಿಯಾಗಿ ಹೋರಾಟ ಮಾಡಬೇಕು. ಐಎನ್ಡಿಐಎ ಒಕ್ಕೂಟದ ಅಧ್ಯಕ್ಷ ಖರ್ಗೆ ಅವರು ಕಾವೇರಿ ಬಗ್ಗೆ ಮಾತನಾಡಬೇಕಿತ್ತು. ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.
ಧೈರ್ಯವಾಗಿ ಸಮಸ್ಯೆ ಎದುರಿಸಿ. ಸ್ವಾತಂತ್ರ್ಯ ಬಂದ ಬಳಿಕವೂ ನಮಗೆ ನೀರಿನ ಹಂಚಿಕೆ ಸರಿಯಾಗಿ ಆಗಿಲ್ಲ. ಕೇಂದ್ರದಲ್ಲಿ ಧ್ವನಿ ಎತ್ತುವವರು ಇಲ್ಲ. ಎಲ್ಲರೂ ಕೇಂದ್ರ ಮುಂದೆ ಧೈರ್ಯವಾಗಿ ಕೇಳಬೇಕು ಎಂದು ನಾನು ಬಿಜೆಪಿ ಸ್ನೇಹಿತರಿಗೂ ಹೇಳುತ್ತನೆ. 5 ಜನರ ತಂಡದಿಂದ ಸ್ಥಳ ಪರಿಶೀಲನೆ ಮಾಡಿ ನಿರ್ದಾರ ತೆಗೆದುಕೊಳ್ಳಿ ಎಂದು ದೇವೇಗೌಡರು ಸದನದಲ್ಲಿ ಹೇಳಿದ್ದಾರೆ. ಇಲ್ಲಿ ನೀರು ಹರಿದು ಹೋಗುತ್ತಿದೆ. ಗ್ಯಾರಂಟಿನ ತೆಲಂಗಾಣಕ್ಕೆ ಎತ್ತಿಕೊಂಡು ಹೋಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಜೆಡಿಎಸ್ ಮೈತ್ರಿ: ರಾಜ್ಯದ ಕೆಟ್ಟ ಸರ್ಕಾರ ತೆಗೆಯಲು ಬಿಜೆಪಿ ಜತೆ ಮೈತ್ರಿಯ ಅವಶ್ಯಕ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ರಾಜ್ಯದ ಹಿತಕ್ಕಾಗಿ ನಾವು ಸ್ವಲ್ಪ ಶಕ್ತಿ ಹೆಚ್ಚು ಮಾಡಿಕೊಳ್ಳಲು ಈ ನಿರ್ಧಾರ ಮಾಡಿದ್ದೇವೆ. ಸೆ.21ರ ಬೆಳಗ್ಗೆ ದೆಹಲಿಗೆ ಹೋಗುತ್ತಿದ್ದನೆ. ಅಲ್ಲಿ ಮೈತ್ರಿ ಚರ್ಚೆ ಮಾಡುತ್ತೇನೆ. ಸದ್ಯಕ್ಕೆ ಯಾವುದೇ ಚರ್ಚೆ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
#Cauverywater, #TamilNadu, #HDKumaraswamy,