ಉಡುಪಿಯಲ್ಲಿ ಪತ್ತೆಯಾಯ್ತು ಶಿಲಾಯುಗದ ಗುಹೆ..!

Spread the love

ಮಂಗಳೂರು, ಏ.2- ಉಡುಪಿಯ ಪುನಿಯಾಡಿಯಲ್ಲಿರುವ ಅನಂತ ಪದ್ಮನಾಭ ದೇವಾಲಯದ ಪುನರ್ ನವೀಕರಣ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಶಿಲಾಯುಗದ ಗುಹೆಯೊಂದು ಪತ್ತೆಯಾಗಿದೆ. ಶಿಲಾಯುಗದ ಗುಹೆ ಪತ್ತೆಯಾಗಿರುವುದನ್ನು ಶಿರ್ವಾದಲ್ಲಿರುವ ಎಂಎಸ್‍ಆರ್‍ಎಸ್ ಕಾಲೇಜಿನ ಪ್ರಾಚ್ಯವಸ್ತು ವಿಭಾಗದ ಸಹಾಯಕ ಪ್ರಾಧ್ಯಾಪಕ ಟಿ. ಮುರುಗೇಶಿ ಸ್ಪಷ್ಟಪಡಿಸಿದ್ದಾರೆ.

ದೇವಾಲಯದ ಸಮೀಪ ನವೀಕರಣ ಕಾರ್ಯ ನಡೆಸುತ್ತಿದ್ದಾಗ ಬಂಡೆ ಕೊರೆದು ಗುಹೆ ನಿರ್ಮಿಸಿರುವುದು ಪತ್ತೆಯಾಯಿತು. ಇದರ ಬಗ್ಗೆ ಆಧ್ಯಯನ ನಡೆಸಿದಾಗ ಅದು ಶಿಲಾಯುಗದ ಗುಹೆ ಎಂದು ತಿಳಿದು ಬಂದಿದೆ ಎನ್ನಲಾಗಿದೆ.

ಈ ಗುಹೆಯನ್ನು 800ನೆ ಶತಮಾನದ್ದು ಎಂದು ಅಂದಾಜಿಸಲಾಗಿದ್ದು , ಗುಹೆಗೆ 2000 ವರ್ಷಗಳ ಇತಿಹಾಸವಿದೆ ಎಂದು ತಿಳಿದುಬಂದಿದೆ. ಕರಾವಳಿ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಇದೇ ಮಾದರಿಯ ಗುಹೆಗಳು ಈ ಹಿಂದೆ ಪತ್ತೆಯಾಗಿದ್ದವು.

Facebook Comments