ಎಸ್‍ಐ ನೇಮಕಾತಿ ಹಗರಣ: ಬಿಎಸ್‍ಎಫ್ ವೈದ್ಯಕೀಯ ಅಧಿಕಾರಿ ಬಂಧನ

Social Share

ನವದೆಹಲಿ, ಅ.19 – ಜಮ್ಮು ಮತ್ತು ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿ (ಜೆಕೆಎಸ್‍ಎಸ್‍ಬಿ) ವತಿಯಿಂದ ಸಬ್ ಇನ್ಸ್‍ಪೆಕ್ಟರ್ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆಯ ವೈದ್ಯಾಧಿಕಾರಿ ಕರ್ನಿಲ್ ಸಿಂಗ್ ಎಂಬುವವರನ್ನು ಇಂದು ಸಿಬಿಐ ಬಂಧಿಸಿದೆ.

ಸಿಂಗ್ ಅವರನ್ನು ವಿಚಾರಣೆ ನಡೆಸಿದ ನಂತರ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಅಖ್ನೂರ್
ನಲ್ಲಿರುವ ಕೋಚಿಂಗ್ ಸೆಂಟರ್‍ನ ಮಾಲೀಕ ಅವಿನಾಶ್ ಗುಪ್ತಾ ಮತ್ತು ಬೆಂಗಳೂರು ಮೂಲದ ಕಂಪೆನಿಯನ್ನು ಸಿಬಿಐ ಎಫ್‍ಐಆರ್‍ನಲ್ಲಿ ಹೆಸರಿಸಿದೆ ಮೂಲಗಳು ಹೇಳಿವೆ.

ಕಳೆದ ಮಾ.27ರಂದು ನಡೆದ ಲಿಖಿತ ಪರೀಕ್ಷೆ ನಂತರ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೂ ಫಲಿತಾಂಶಗಳನ್ನು ಜೂ.04ರಂದು ಘೋಷಿಸಲಾಯಿತು. ಪ್ರಕರಣ ಗಂಭೀರತೆ ಅರಿತು ಜಮ್ಮು ಮತ್ತು ಕಾಶ್ಮೀರ ಆಡಳಿತವು ಜುಲೈನಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು ಮತ್ತು ಆಯ್ಕೆ ಪ್ರಕ್ರಿಯೆಯ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು.

ಆರೋಪಿಗಳು ಬೆಂಗಳೂರಿನ ಜೆಕೆಎಸ್‍ಎಸ್‍ಬಿ ಅಧಿಕಾರಿಗಳ ನಡುವೆ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖೆಯ ವರದಿಯು ಜಮ್ಮು, ರಜೌರಿ ಮತ್ತು ಸಾಂಬಾ ಜಿಲ್ಲೆಗಳಿಂದ ಆಯ್ಕೆಯಾದ ಅಭ್ಯರ್ಥಿಗಳ ಅಸಹಜವಾಗಿ ಹೆಚ್ಚಿನ ಶೇಕಡಾವಾರು ಹೆಚ್ಚು ಅಂಕ ನೀಡಲಾಗಿತ್ತು. ಬೆಂಗಳೂರು ಮೂಲದ ಖಾಸಗಿ ಕಂಪೆನಿಗೆ ಪ್ರಶ್ನೆ ಪತ್ರಿಕೆ ಮುದ್ರಿಸುವ ಕಾರ್ಯವನ್ನು ನಿಯೋಜಿಸಿತ್ತು.

Articles You Might Like

Share This Article