ನವದೆಹಲಿ,ಡಿ.26-ಸಾವಿರಾರು ಕೋಟಿ ರೂ.ಗಳ ಸಾಲ ವಂಚನೆ ಪ್ರಕರಣದಲ್ಲಿ ಕೊಚ್ಚಾರ್ ದಂಪತಿ ಬಂಧನದ ಬೆನ್ನಲ್ಲೇ ವಿಡಿಯೋಕಾನ್ ಸಿಇಒ ವೇಣುಗೋಪಾಲ್ ಧೋತ್ರನ್ನು ಸಿಬಿಐ ಬಂಧಿಸಿದೆ.
ಐಸಿಐಸಿಐ ಬ್ಯಾಂಕ್ನ ಮಾಜಿ ಸಿಇಒ ಚಂದ ಕೊಚ್ಚಾರ್ ಮತ್ತು ಆಕೆಯ ಪತಿ ದೀಪಕ್ ಕೊಚ್ಚಾರ್ರನ್ನು ನಿನ್ನೆ ಬಂಧಿಸಲಾಗಿತ್ತು. ತನಿಖೆ ಮುಂದುವರೆದ ಬೆನ್ನಲ್ಲೇ ಪ್ರತಿಷ್ಟಿತ ವಿಡಿಯೋಕಾನ್ ಸಂಸ್ಥೆಯ ಮುಖ್ಯ ನಿರ್ವಹಣಾಕಾರಿಯನ್ನು ಬಂಧಿಸಲಾಗಿದೆ.
2018ರ ಅಕ್ಟೋಬರ್ನಲ್ಲಿ ಚಂದನ್ ಕೊಚ್ಚಾರ್ ಬ್ಯಾಂಕ್ನ ಸಿಇಒ ಸ್ಥಾನವನ್ನು ತೊರೆದಿದ್ದರು. 2012ರಲ್ಲಿ ವಿಡಿಯೋಕಾನ್ ಸಂಸ್ಥೆ ಅಕ್ರಮ ಮಾರ್ಗಗಳ ಮೂಲಕ 3250 ಕೋಟಿ ರೂ. ಸಾಲ ಪಡೆದಿದೆ. ಬಳಿಕ ಅದು ಅನುತ್ಪಾದಕ ಆಸ್ತಿ(ಎನ್ಪಿಎ) ಆಗಿ ಪರಿವರ್ತನೆಯಾಗಿದೆ ಎಂಬ ಆರೋಪವಿದೆ.
ಚೀನಾದಿಂದ ಬಂದ ಆಗ್ರಾ ಮೂಲದ ವ್ಯಕ್ತಿಯಲ್ಲಿ ಬಿಎಫ್.7 ವೈರಸ್ ಲಕ್ಷಣ ಪತ್ತೆ
ಸಾಲ ಮಂಜೂರು ಮಾಡಲು ಕೊಚ್ಚಾರ್ ವಿಡಿಯೋಕಾನ್ ಕಂಪನಿಯಿಂದ ಅನಪೇಕ್ಷಿತ ಲಾಭಗಳನ್ನು ಪಡೆದಿದ್ದಾರೆ ಎಂಬ ಆರೋಪವಿದೆ. ದಾಖಲೆಗಳ ಪ್ರಕಾರ ವಿಡಿಯೋಕಾನ್ನ ಸಿಇಒ ಮತ್ತು ಮಾಜಿ ಅಧ್ಯಕ್ಷ ವೇಣುಗೋಪಾಲ್ ಧೋತ್ ಅವರು ದೀಪಕ್ ಪಚ್ಚಾರ್ ಸ್ಥಾಪಿಸಿದ ನವೀಕೃತ ಇಂಧನ ತಯಾರಿಕಾ ಸಂಸ್ಥೆಗೆ ಹಲವಾರು ಕೋಟಿ ರೂ.ಗಳ ಹೂಡಿಕೆ ಮಾಡಿದ್ದರು.
ಹೊಸ ವರ್ಷಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ : ಸಚಿವ ಅಶೋಕ್
ಅದರ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್ನ ಸಿಇಒ ಆಗಿದ್ದ ಚಂದನ್ ಕೊಚ್ಚಾರ್ ವಿಡಿಯೋಕಾನ್ ಸಂಸ್ಥೆಗೆ ಸಾಲ ಬಿಡುಗಡೆ ಮಾಡಿದ್ದರು ಎಂಬ ಆರೋಪವಿದೆ. ಈ ಹಿನ್ನಲೆಯಲ್ಲಿ ನಿನ್ನೆ ಕೊಚ್ಚಾರ್ ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
CBI arrests, Videocon, Chairman, Venugopal Dhoot, ICICI Bank fraud case,