ಗೈಲ್ ನಿರ್ದೇಶಕರಿಗೆ ಸಿಬಿಐನಿಂದ ಗ್ರಿಲ್

Social Share

ನವದೆಹಲಿ, ಜ.16- ಭಾರತೀಯ ಅನಿಲ ಪ್ರಾಕಾರ ಲಿಮಿಟೆಡ್ (ಜಿಎಐಎಲ್)ನಿಂದ ಮಾರಾಟ ಮಾಡುವ ಪೆಟ್ರೋಲಿಯಂ ಉತ್ಪನ್ನಗಳಿಗೆ ರಿಯಾಯಿತಿ ನೀಡಲು ಲಂಚ ಕೇಳಿದ ಮಾರುಕಟ್ಟೆ ವಿಭಾಗದ ನಿರ್ದೇಶಕ ರಂಗನಾಥ್ ಅವರನ್ನು ಭಾನುವಾರವೂ ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಮಧ್ಯವರ್ತಿಗಳ ಮೂಲಕ ರಂಗನಾಥ್ 50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು, ರಂಗನಾಥ್ ಪರವಾಗಿ ಮಧ್ಯವರ್ತಿಗಳು ಲಂಚವನ್ನು ಪಡೆದಿದ್ದರು ಎಂದು ಆರೋಪಿಸಿ ದೆಹಲಿ ಮೂಲದ ಎರಡು ಖಾಸಗಿ ಕಂಪೆನಿಗಳು ಆರೋಪಿಸಿದ್ದವು. ದೂರು ದಾಖಲಿಸಿದ ಸಿಬಿಐ ನಿನ್ನೆ ಎಂಟು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.
ಈ ವೇಳೆ 1.29 ಕೋಟಿ ರೂಪಾಯಿ ನಗದು, ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರ ಆರ್.ಸಿ. ಜೋಶಿ ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಸಿಂದೆ ಶನಿವಾರ ಐದು ಆರೋಪಿಗಳನ್ನು ಬಂಸಲಾಗಿದೆ. ಭಾನುವಾರ ರಜಾ ದಿನವೂ ರಂಗನಾಥ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಸಿಬಿಐ ಅಕಾರಿಗಳು ಮತ್ತಷ್ಟು ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆಸಿದರು.

Articles You Might Like

Share This Article