ದೆಹಲಿ ಡಿಸಿಎಂ ವಿರುದ್ಧ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್

Social Share

ನವದೆಹಲಿ,ಫೆ.22- ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಪ್ರತಿಪಕ್ಷಗಳ ಮಾಹಿತಿಗಳಿಗೆ ಕನ್ನ ಹಾಕಿದ ಆರೋಪದ ಮೇಲೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ಧದ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಸಿಸೋಡಿಯಾ ಅವರನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ ಕಳೆದ ಭಾನುವಾರ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ,ಅವರು ಬಜೆಟ್ ಸಿದ್ದಪಡಿಸುತ್ತಿರುವುದರಿಂದ ಸದ್ಯ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ನುಣುಚಿಕೊಂಡಿದ್ದರು, ಇದರ ಮಧ್ಯೆ, ಮಾಹಿತಿ ಕನ್ನ ಆರೋಪದ ಮೇಲೂ ಸಿಸೋಡಿಯಾ ವಿರುದ್ಧ ತನಿಖೆ ನಡೆಯುವುದರಿಂದ ಆಪ್ ಪಕ್ಷ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ಕಳವು ಮಾಲು ಜಪ್ತಿ ವೇಳೆ ಪೊಲೀಸರ ಕಿರುಕುಳ : ಶರವಣ ಆಕ್ರೋಶ

ದೆಹಲಿ ಸರ್ಕಾರದ ವಿಜಿಲೆನ್ಸ್ ವಿಭಾಗದ ಮುಖ್ಯಸ್ಥರಾಗಿರುವ ಸಿಸೋಡಿಯಾ ಅವರು ಆ ಘಟಕವನ್ನು ಸಚಿವಾಲಯಗಳು, ವಿರೋಧ ಪಕ್ಷಗಳು ಹಾಗೂ ಇತರ ವ್ಯಕ್ತಿಗಳ ಮೇಲೆ ಕಣ್ಣಿಡಲು ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.

ಈ ಸ್ನೂಪಿಂಗ್ ಘಟಕ, ಯಾವುದೇ ಶಾಸಕಾಂಗ ಅಥವಾ ನ್ಯಾಯಾಂಗದ ಮೇಲ್ವಿಚಾರಣೆಯಿಲ್ಲದೆ, ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿಕಟ ಸಹಾಯಕರು ಮತ್ತು ಸಲಹೆಗಾರರಿಂದ ನಡೆಸಲ್ಪಡುತ್ತಿದೆ ಮತ್ತು ನಿರ್ವಹಿಸುತ್ತಿದೆ ಎಂದು ಆರೋಪಿಸಲಾಗಿದೆ.

ರಾಮನಗರದಲ್ಲಿ ರಾಮಮಂದಿರ ನಿರ್ಮಾಣವೇ ಬಿಜೆಪಿ ಚುನಾವಣಾ ಅಸ್ತ್ರ

ಈ ಪ್ರಕರಣದಲ್ಲಿ ಸಿಬಿಐ ವರದಿಯನ್ನು ಅನುಸರಿಸಿ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಗೃಹ ವ್ಯವಹಾರಗಳ ಸಚಿವಾಲಯದ ಮೂಲಕ ರಾಷ್ಟ್ರಪತಿಗಳಿಗೆ ರವಾನಿಸಿದ್ದರು ಇದೀಗ ಕೇಂದ್ರ ಗೃಹ ಸಚಿವಾಲಯ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ.

CBI, Probe, Manish Sisodia, ‘Snooping’ Case, Centre, Gives, Go-Ahead,

Articles You Might Like

Share This Article