ಅಕ್ರಮ ಆಸ್ತಿಗಳಿಕೆ : ಎ.ರಾಜಾ ವಿರುದ್ಧ ಸಿಬಿಐ ಚಾರ್ಜ್‍ಶೀಟ್

Social Share

ನವದೆಹಲಿ . ಅ.11- ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಡಿಎಂಕೆ ನಾಯಕ ಎ ರಾಜಾ ಅವರು 5.53 ಕೋಟಿ ರೂಪಾಯಿಗಳಷ್ಟು ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ.

ಚೆನ್ನೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ದೊಷಾರೋಪಣ ಪಟ್ಟಿಯಲ್ಲಿ ರಾಜಾ ಅವರು ತಮ್ಮ ನಿಕಟವರ್ತಿ ಸಿ ಕೃಷ್ಣಮೂರ್ತಿ ಅವರು ಜನವರಿ 2007ರಲ್ಲಿ ಕೋವೈ ಶೆಲ್ಟರ್ಸ್ ಪ್ರಮೋರ್ಟಸ್‍ಎಂಬ ಕಂಪನಿಯನ್ನು ಸ್ಥಾಪಿಸಿದ್ದರು ಅದೇ ವರ್ಷದ ಫೆಬ್ರವರಿಯಲ್ಲಿ 4.56 ಕೋಟಿ ರೂ ಮೊತ್ತವನ್ನು ಗುರುಗ್ರಾಮ್ ಮೂಲದ ರಿಯಲ್ ಎಸ್ಟೇಟ್ ಕಂಪನಿಯಿಂದ ಕಾಂಚೀಪುರಂನಲ್ಲಿ ಜಮೀನು ಖರೀದಿಸಿದ್ದರು ಅದು ಕಮಿಷನ್ ಹಣ ಎಂದು ಉಲ್ಲೇಕಿಸಲಾಗಿದೆ.

ರಾಜಾ ಅವರು ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮೂಲಸೌಕರ್ಯ ಕಂಪನಿಯ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ಲಂಚದ ರೂಪದಲ್ಲಿ ಈ ದಂಧೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಸಲ್ಲಿಸಿದ್ದ ಚಾರ್ಜ್ ಶೀಟ್‍ನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಉದ್ದೇಶಿಸಲಾದ ಭೂ ವ್ಯವಹಾರವನ್ನು ಹೊರತುಪಡಿಸಿ ಕಂಪನಿಯು ಬೇರೆ ಯಾವುದೇ ರಿಯಲ್ ಎಸ್ಟೇಟ್ ಚಟುವಟಿಕೆಯನ್ನು ಕೈಗೊಂಡಿಲ್ಲ ಎಂದು ಸಿಬಿಐ ಆರೋಪಿಸಿದೆ.

ನಂತರ ಕಂಪನಿಯು ಕೊಯಮತ್ತೂರಿನಲ್ಲಿ ಕೃಷಿ ಭೂಮಿಯನ್ನು ಖರೀದಿಸಿತ್ತು, ರಾಜಾ ಅವರ ಆಪ್ತರು ನಿರ್ದೇಶಕರಾಗಿದ್ದ ಕಂಪನಿಗೆ 4.56 ಕೋಟಿ ರೂ. ಪಾವತಿ ಸೇರಿದಂತೆ ಸಚಿವರಾಗಿ ರಾಜಾ ಅವರು 5.53 ಕೋಟಿ ರೂ. ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿದೆ,

ತಿಳಿದಿರುವ ಆದಾಯದ ಮೂಲಗಳಿಂದ 579 ಪ್ರತಿಶತದಷ್ಟು ಆಸ್ತಿಹೆಚ್ಚುವರಿಯಾಗಿದೆ ಎಂದು ಸಿಬಿಐ ಹೇಳಿದೆ,ರಾಜಾ ಮತ್ತು ಅವರ ಸೋದರಳಿಯ ಪರಮೇಶï, ಪತ್ನಿ ಪರಮೇಶ್ವರಿ, ಆತ್ಮಹತ್ಯೆ ಮಾಡಿಕೊಂಡಿದ್ದು ರಾಜಾ ಅವರ ಸಹವರ್ತಿ ಸಾದಿಕ್ ಬಾಷಾ ಅವರ ಪತ್ನಿ ಕೋವೈ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರೂ ಆಗಿರುವ ಅವರ ಸಹವರ್ತಿ ಕೃಷ್ಣಮೂರ್ತಿ ಸೇರಿದಂತೆ 16 ಜನರ ವಿರುದ್ಧ 2015 ರಲ್ಲಿ ಸಂಸ್ಥೆ ಪ್ರಕರಣ ದಾಖಲಿಸಿತ್ತು.

2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಸಿದಂತೆ ಮಾಜಿ ಟೆಲಿಕಾಂ ಸಚಿವ ರಾಜಾ ಅವರನ್ನು ಸಿಬಿಐ ದಾಖಲಿಸಿತ್ತು ಆದರೆ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳನ್ನು ಸಾಬೀತುಪಡಿಸಲು ಸಂಸ್ಥೆ ವಿಫಲವಾದ ಕಾರಣ ವಿಶೇಷ ನ್ಯಾಯಾಲಯದಿಂದ ಅವರನ್ನು ದೋಷಮುಕ್ತಗೊಳಿಸಲಾಯಿತು.

Articles You Might Like

Share This Article