ಬ್ಯಾಂಕ್ ಹಗರಣಗಳಲ್ಲಿ RBI ಅಧಿಕಾರಿಗಳ ಪಾತ್ರ : ಸಿಬಿಐ ತನಿಖೆಗೆ 4 ವಾರ ಕಾಲಾವಕಾಶ

Social Share

ನವದೆಹಲಿ, ನ.18 – ವಿವಿಧ ಬ್ಯಾಂಕಿಂಗ್ ಹಗರಣಗಳಲ್ಲಿ ಕೇಂದ್ರೀಯ ಬ್ಯಾಂಕ್ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಮನವಿಗೆ ಉತ್ತರವನ್ನು ಸಲ್ಲಿಸಲು ಕೇಂದ್ರೀಯ ತನಿಖಾ ದಳ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಾಲ್ಕು ವಾರಗಳ ಕಾಲ ವಿಸ್ತರಿಸಿದೆ.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರ ಪೀಠವು ಆರು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಹೇಳಿದೆ. ,ಕಿಂಗ್‍ಫಿಷರ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಯೆಸ್ ಬ್ಯಾಂಕ್ ಸೇರಿ ವಿವಿಧ ಸಂಸ್ಥೆಗಳಲ್ಲಿ ನಡೆದಿರುವ ಹಗರಣಗಳಲ್ಲಿ ಆರ್‌ಬಿಐ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗಿಲ್ಲ ಎಂದು ಸ್ವಾಮಿ ಆರೋಪಿಸಿ ಅರ್ಜಿ ಸಲ್ಲಿಸಿದ್ದರು ಕಳೆದ ಅಕ್ಟೋಬರ್ 17 ರಂದು ಸುಪ್ರೀಂ ಕೋರ್ಟ್ ಸಿಬಿಐ ಮತ್ತು ಇಡಿಗೆ ನೋಟಿಸ್ ಜಾರಿ ಮಾಡಿ ವಿವರನೆ ಕೇಳಿತ್ತು.

2025ರ ಜೂನ್ ವೇಳೆಗೆ 175 ಕಿ.ಮೀ. ಮೆಟ್ರೋ ಮಾರ್ಗ ಸಿದ್ಧ

ವಿವಿಧ ಯೋಜನೆಗಳಿಗೆ ಹಣ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, 2000 ರಿಂದ ಇಂದಿನವರೆಗೆ ಆರ್‍ಬಿಐ ನಾಮನಿರ್ದೇಶಿತರನ್ನು ಸಿಬಿಐ ವಿಚಾರಣೆಗಳು ಮುಟ್ಟಿಲ್ಲ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.

ಭಾರತದ ಎಲ್ಲಾ ಬ್ಯಾಂಕಿಂಗ್ ಕಂಪನಿಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ, ನಿಯಂತ್ರಣ, ಮೇಲ್ವಿಚಾರಣೆ, ಲೆಕ್ಕಪರಿಶೋಧನೆ ಮತ್ತು ನಿರ್ದೇಶನದ ಅಧಿಕಾರವನ್ನು ಆರ್‍ಬಿಐ ಉಳಿಸಿಕೊಂಡಿದ್ದರೂ ಒಬ್ಬ ಆರ್‍ಬಿಐ ಅಧಿಕಾರಿಯನ್ನು ನ್ಯಾಯಾಂಗಕ್ಕೆ ತರಲಾಗಿಲ್ಲ ಸುಬ್ರಮಣಿಯನ್ ಸ್ವಾಮಿ ಆಕ್ಷೇಪವೆತ್ತಿದ್ದರು.

ಸಿದ್ದರಾಮಯ್ಯ, ಡಿಕೆಶಿ ಚುನಾವಣೆಯಲ್ಲಿ ಸ್ಪರ್ಧಿಸೋದು ಬೇಡ : ಸಂತೋಷ ಲಾಡ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ, ಬ್ಯಾಂಕಿಂಗ್ ರೆಗ್ಯು ಸೇರಿದಂತೆ ಕಾನೂನುಗಳ ನೇರ ಉಲ್ಲಂಘನೆಯಲ್ಲಿ ಆರ್‍ಬಿಐ ಅಧಿಕಾರಿಗಳು ಸಕ್ರಿಯ ಸಹಕಾರದಿಂದ ವರ್ತಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

CBI, investigating, banking, scams, RBI, Supreme Court,

Articles You Might Like

Share This Article