ನವದೆಹಲಿ,ಫೆ.18- ಆಪ್ ಪಕ್ಷದ ಮುಖಂಡ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಿಬಿಐ ನೋಟೀಸ್ ಜಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದ ಸುಮಾರು ಮೂರು ತಿಂಗಳ ನಂತರ ಸಿಬಿಐ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಸಿಸೋಡಿಯಾ ಅವರ ಹೆಸರಿಲ್ಲದಿದ್ದರೂ ಅವರನ್ನು ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಬಂಧಿತ ಉದ್ಯಮಿಗಳಾದ ವಿಜಯ್ ನಾಯರ್ ಮತ್ತು ಅಭಿಷೇಕ್ ಬೋನಪಲ್ಲಿ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.
ವಿಶ್ವದಲ್ಲೇ ಅತಿ ಹೆಚ್ಚು ನಗದುರಹಿತ ವಹಿವಾಟು ನಡೆಸಿ ದಾಖಲೆ ಬರೆದ ಭಾರತ
ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡುವ ದೆಹಲಿ ಸರ್ಕಾರದ ನೀತಿಯು ಕೆಲವು ಡೀಲರ್‍ಗಳಿಗೆ ಲಂಚ ನೀಡಲಾಗಿದೆ ಎಂಬ ಸಿಬಿಐ ಆರೋಪವನ್ನು ಆಪ್ ಸರ್ಕಾರ ನಿರಾಕರಿಸಿದೆ.
ಬಿಲ್ಲು-ಬಾಣದ ಚಿಹ್ನೆ ಚಿಂತೆ ಬಿಡಿ : ಉದ್ಧವ್‍ಗೆ ಪವಾರ್ ಸಲಹೆ
ಅಬಕಾರಿ ನೀತಿಯಲ್ಲಿನ ಮಾರ್ಪಾಡುಗಳು, ಪರವಾನಗಿದಾರರಿಗೆ ಅನಪೇಕ್ಷಿತ ಅನುಕೂಲಗಳು, ಪರವಾನಗಿ ಶುಲ್ಕದಲ್ಲಿ ಕಡಿತ, ಅನುಮೋದನೆಯಿಲ್ಲದೆ ಎಲ್ -1 ಪರವಾನಗಿ ವಿಸ್ತರಣೆ ಇತ್ಯಾದಿ ಸೇರಿದಂತೆ ಅಕ್ರಮಗಳನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
CBI, notice, Delhi, DCM, Manish Sisodia, questioning, excise, scam,