ಸಿಬಿಐನಿಂದ ರಾಬ್ರಿ ದೇವಿ ವಿಚಾರಣೆ

Social Share

ಪಾಟ್ನಾ,ಮಾ.6-ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಇಂದು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಪಾಟ್ನಾದ ಅವರ ನಿವಾಸದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಅವರು ತಮ್ಮ ಪತಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಇತರ 14 ಮಂದಿ ಆರೋಪಿಗಳಲ್ಲಿಒಬ್ಬರಾಗಿದ್ದಾರೆ.

ಬಿಗ್‍ಬಿ ಪಕ್ಕೆಲುಬು ಮುರಿತ, ಪ್ರಾಣಾಪಾಯದಿಂದ ಪಾರು

ಬೆಳ್ಳಂಬೆಳಿಗ್ಗೆ ಪಾಟ್ನಾದಲ್ಲಿರುವ ರಾಬ್ರಿ ದೇವಿ ನಿವಾಸಕ್ಕೆ ದೌಡಾಯಿಸಿದ ಸಿಬಿಐ ಅಧಿಕಾರಿಗಳು ಮನೆಯಲ್ಲೇ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

CBI, Questioning, Rabri Devi, Patna Home, Land-For-Jobs, Case,

Articles You Might Like

Share This Article