ಜಮ್ಮು-ಕಾಶ್ಮೀರದಲ್ಲಿ ನೇಮಕಾತಿ ಹಗರಣ: ಬೆಂಗಳೂರು ಸೇರಿ ದೇಶದ ಹಲವೆಡೆ CBI ದಾಳಿ

Social Share

ನವದೆಹಲಿ.ಸೆ.13- ಜಮ್ಮು-ಕಾಶ್ಮೀರದಲ್ಲಿ ಸಬ್ ಇನ್‍ಸ್ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದೇಶದ ಹಲವೆಡೆ ಸಿಬಿಐ ದಾಳಿ ನಡೆಸಿದೆ. ಜಮ್ಮು, ಶ್ರೀನಗರ, ಕರ್ನಾಲ, ಮಹೇಂದರ್‍ಗಢ, ಹರಿಯಾಣದ ರೇವಾರಿ, ಗುಜರಾತ್‍ನ ಗಾಂಧಿನಗರ, ಉತ್ತರ ಪ್ರದೇಶದ ಗಾಜಿಯಾಬಾದ, ಕರ್ನಾಟಕದ ಬೆಂಗಳೂರು ಮತ್ತು ದೆಹಲಿ ಸೇರಿದಂತೆ ದೇಶದಾದ್ಯಂತ ಸುಮಾರು 33 ಸ್ಥಳಗಳಲ್ಲಿ ಈ ದಾಳಿ ನಡೆಸಿದೆ.

ಜೆಕೆಎಲ್‍ಎ ಮಾಜಿ ಅಧ್ಯಕ್ಷ ಖಾಲಿದ್ ಜಹಾಂಗೀರ್, ಜೆಕೆಎಲ್‍ಎಪರೀಕ್ಷಾ ನಿಯಂತ್ರಕ ಅಶೋಕ್ ಕುಮಾರ್ ಮತ್ತು ಮತ್ತು ಇ್ಕPಊ ಸೇರಿದಂತೆ ಒಓ ಪೊಲೀಸ್‍ನ ಕೆಲವು ಅಧಿಕಾರಿಗಳ ಕಚೇರಿ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ.

ಜಮ್ಮುವಿನ 14, ಶ್ರೀನಗರದ ಒಂದು, ಹರಿಯಾಣದ 13, ಗಾಂಧಿನಗರದ ಒಂದು ಮತ್ತು ಬೆಂಗಳೂರಿನಲ್ಲಿ ಒಂದು ಸೇರಿದಂತೆ 33 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Articles You Might Like

Share This Article