ದೆಹಲಿ ಡಿಸಿಎಂ ಮನೆ ಸೇರಿ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ ಸಿಬಿಐ ದಾಳಿ

Social Share

ನವದೆಹಲಿ, ಆ. 19 -ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ದೆಹಲಿ-ಎನ್‍ಸಿಆರ್ ನ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಬಿಐ ಇಂದು ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿದೆ.

ಕಳೆದ ವರ್ಷ ನವೆಂಬರ್‍ನಲ್ಲಿ ರಾಜ್ಯ ಸರ್ಕಾರ ದೆಹಲಿ ಅಬಕಾರಿ ನೀತಿಯ ರಚಿಸಿ ಆದೇಶ ಹೊರಡಿಸಿತ್ತು ಇದರ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವನರ್ ವಿ ಕೆ ಸಕ್ಸೇನಾ ಅವರು ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.ಅದರನ್ವಯ ಸಿಬಿಐ ಎಫ್‍ಐಆರ್ ದಾಖಲಿಸಿತ್ತು.

ಟೆಂಡರ್ ನಂತರದ ಮದ್ಯ ಪರವಾನಗಿದಾರರಿಗೆ ಅನಗತ್ಯ ಪ್ರಯೋಜನಗಳನ್ನು ಒದಗಿಸಲು ಉದ್ದೇಶಪೂರ್ವಕ ಮತ್ತು ಸಮಗ್ರ ಕಾರ್ಯವಿಧಾನದ ಲೋಪಗಳು ಇವೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ದಾಳಿಗೆ ಸಂಬಂದಿಸಿದಂತೆ ಸಿಸೋಡಿಯಾ ಸರಣಿ ಟ್ವೀಟ್‍ಗಳಲ್ಲಿ ಸಿಬಿಐ ದಾಳಿ ಸ್ವಾಗತಾರ್ಹ ಎಂದು ಹೇಳಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೆಹಲಿ ಸರ್ಕಾರ ಮಾಡಿರುವ ಅತ್ಯುತ್ತಮ ಕೆಲಸದಿಂದಾಗಿ ಕೆಲವರಿಗೆ ಸಹಿಸಲು ಸಾಧಯವಾಗುತ್ತಿಲ್ಲ ಅದಕ್ಕಾಗಿಯೇ ಉತ್ತಮ ಕೆಲಸಗಳಿಂದ ನಮ್ಮನ್ನು ತಡೆಯಲು ಸಿಬಿಐ ಮತ್ತು ಇಡಿ ಮಂತ್ರಿಗಳನ್ನು ಟಾರ್ಗೆಟ್ ಮಾಡುತ್ತಿದೆ
ನಮ್ಮ ಮೇಲಿನ ಆರೋಪಗಳು ಸುಳ್ಳು, ನ್ಯಾಯಾಲಯದಲ್ಲಿ ಸತ್ಯ ಹೊರಬರುತ್ತದೆ, ಎಂದು ಅವರು ಹೇಳಿದ್ದರೆ ಅದೇ ರೀತಿ ಸಿಎಂ ಕೇಜ್ರೀವಾಲ್ ಕೂಡ ಸಿಬಿಐ ಕ್ರಮವನ್ನು ಟೀಕಿಸಿದ್ದಾರೆ

Articles You Might Like

Share This Article