ಬೆಂಗಳೂರು, ಡಿ. 3- ಕೇರಳ ಮೂಲದ ಡ್ರಗ್ ಪೆಡ್ಲರ್ನೊಬ್ಬನನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಆತ ವಾಸವಾಗಿದ್ದ ಫ್ಲಾಟ್ನ್ನು ಪರಿಶೀಲಿಸಿ 25 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು 15 ದಿನಗಳ ಹಿಂದೆ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ಕೇರಳ ಮೂಲದ ಇಬ್ಬರು ಟ್ಯಾಟೋ ಆರ್ಟಿಸ್ಟ್ ಗಳನ್ನು ಬಂಧಿಸಿ 5 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ಇದೇ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿ ಮಾದಕ ದ್ರವ್ಯ ದಳಕ್ಕೆ ವರ್ಗಾವಣೆ ಪಡೆದು ತನಿಖೆಯನ್ನು ಮುಂದುವರೆಸಿ ಆರೋಪಿ ಸಿಜಿಲ್ ವರ್ಗೇಸೆ ವಾಸವಿದ್ದ ಬೆಂಗಳೂರಿನ ಚಂದಾಪುರದಲ್ಲಿರುವ ಫ್ಲಾಟ್ ಪರಿಶೀಲಿಸಿ ಅಂದಾಜು 25 ಲಕ್ಷ ಮೌಲ್ಯದ ನಿಷೇತ ಮಾದಕ ವಸ್ತುಗಳಾದ 100 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 150 ಎಲ್ಎಸ್ಡಿ ಸ್ಟ್ರಿಪ್ಸ್ಗಳು ಮತ್ತು 25 ಎಂ.ಡಿ.ಎಂ.ಎ ಎಕ್ಸ್ಟಸಿ ಮಾತ್ರೆಗಳನ್ನು ಹಾಗೂ ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿದ ಡೈರಿ ಹಾಗೂ ಕೊಲಂಬಿಯಾ ದೇಶದ ಕುಖ್ಯಾತ ಕೊಕೇನ ಪೆಡ್ಲರ್ ಪಾಬ್ಲೋ ಎಕ್ಸೋಬಾರ್ನ ಭಾವಚಿತ್ರವನ್ನು ವಶಪಡಿಸಿಕೊಂಡಿದ್ದಾರೆ.
500ಕೆಜಿ ನಿಷೇಧಿತ ಪ್ಲಾಸ್ಟಿಕ್ ಸೀಜ್, 34 ಸಾವಿರ ರೂ.ದಂಡ
ಕೋಲಂಬಿಯಾ ದೇಶದ ಈ ಡ್ರಗ್ ಪೆಡ್ಲರ್ನನ್ನು ರೋಲ್ಮಾಡೆಲ್ ಆಗಿ ಹೊಂದಿ ಫೇಸ್ಲೆಸ್, ರುಸೆನ್ ಟ್ರೆಸರ್ ಹಂಟ್ ಮಾಡೆಲ್ ರೀತಿಯಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದುದ್ದು ವಿಚಾರಣೆಯಿಂದ ಗೊತ್ತಾಗಿದೆ. ಪಾಬ್ಲೋಎಕ್ಸೋಬಾರ್ ನಂತೆ ತಾವು ಸಹ ಡ್ರಗ್ ಲೋಕದ ದೊರೆಯಾಗಬೇಕೆಂಬ ಉದ್ದೇಶ ಹೊಂದಿದ್ದರೆಂಬುವುದು ತನಿಖೆಯಿಂದ ತಿಳಿದು ಬಂದಿದೆ.
ಆರೋಪಿ ಈಗಾಗಲೇ ಹುಳಿಮಾವು ಪೊಲೀಸ್ ಠಾಣೆಯ ಎನ್ಡಿಪಿಎಸ್ ಪ್ರಕರಣದಲ್ಲಿ ಬಂಧಿತನಾಗಿ
13 ಕೆಜಿ ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಎರಡು ತಿಂಗಳ ಹಿಂದೆ ಜೈಲಿನಿಂದ ಹೊರಬಂದು ಮತ್ತೆ ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿ ಬಹಳ ಮುನ್ನೆಚ್ಚರಿಕೆಯಿಂದ ಡ್ರಗ್ ಸರಬರಾಜು ಮಾಡುತ್ತಿದ್ದು,
ಮಮತಾ ನಾಡಿನಲ್ಲಿ ಮತ್ತೆ ಖೇಲ್ ಹೊಬೆ ಸದ್ದು
ಗಿರಾಕಿಗಳಿಗೆ ನಿರ್ದಿಷ್ಟವಾದ ಸ್ಥಳಗಳಲ್ಲಿ ಅಂದರೆ ಕಂಬದ ಬಳಿ, ಮರದ ಬಳಿ, ರಸ್ತೆಯ ಬದಿ, ಕಸದ ತೊಟ್ಟಿಗಳ ಬಳಿ, ಡ್ರಗ್ಸ್ಗಳನ್ನಿಟ್ಟುಕೊಂಡು ಆ ಸ್ಥಳದ ಫೋಟೋ ಮತ್ತು ವಿಡಿಯೋ ಹಾಗೂ ಲೊಕೇಷನ್ಗಳನ್ನು ಗ್ರಾಹಕರಿಗೆ ಕಳುಹಿಸಿ ಆನ್ಲೈನ್ ಮುಖಾಂತರ ಹಣ ಪಡೆಯುತ್ತಿದ್ದರು.
ಬೆಂಗಳೂರಿನಲ್ಲಿ ಡಿ.8ರಿಂದ 10ರವರೆಗೆ ಫ್ಯೂಚರ್ ಡಿಸೈನ್ ಸಮಾವೇಶ
ಇದರಿಂದ ಡ್ರಗ್ ಪೆಡ್ಲರ್ಗಳು ಹಾಗೂ ಗಿರಾಕಿಗಳು ಮುಖಾಮುಖಿಯಾಗುತ್ತಿರಲಿಲ್ಲ. ಡ್ರಗ್ಸ್ ಮಾರಾಟ ಮಾಡಿದ
ವ್ಯಕ್ತಿ ಯಾರೆಂಬುದು ಸಹ ತಿಳಿಯುತ್ತಿರಲಿಲ್ಲ. ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.
CCB police, 25 lakhs, Drugs, seized, peddler,