ಬೆಂಗಳೂರು, ಸೆ.19- ಉದ್ಯಮಿಗೆ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚಿಸಿರುವ ಪ್ರಕರಣದಲ್ಲಿ ತಲೆಮರೆಸಿ ಕೊಂಡಿದ್ದ 3ನೇ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಯನ್ನು ಒಡಿಶಾದ ಕಟಕ್‍ನಲ್ಲಿ ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಾಲಶ್ರೀ ಸ್ವಾಮೀಜಿ ಒಡಿಸ್ಸಾದಲ್ಲಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಅಲ್ಲಿಗೆ ತೆರಳಿದ್ದ ಸಿಸಿಬಿ ಪೊಲೀಸರ ಒಂದು ತಂಡ ಅಲ್ಲಿನ ಪೊಲೀಸರ ನೆರವಿನಿಂದ ಇಂದು ಕಟಕ್ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಭುವನೇಶ್ವರದಿಂದ ಬೋಧಗಯಾಗೆ ಸ್ವಾಮೀಜಿ ಪ್ರಯಾಣಿಸುತ್ತಿದ್ದಾಗ ಸಿನಿಮೀಯ ರೀತಿ ಬಂಧಿಸಿದೆ. ಇಂದು ರಾತ್ರಿ ಒಡಿಶಾದಿಂದ ಸಿಸಿಬಿ ಪೊಲೀಸರು ಹಾಲಶ್ರೀ ಸ್ವಾಮೀಜಿಯನ್ನು ನಗರಕ್ಕೆ ಕರೆತರಲಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ಇದುವರೆಗೂ ಎಂಟು ಮಂದಿಯನ್ನು ಬಂಧಿಸಲಾಗಿದೆ.
ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬುವರಿಂದ ಹಣ ಪಡೆದು ವಂಚಿಸಿದ ಬಗ್ಗೆ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆಗೆ ಸಿಸಿಬಿಗೆ ವರ್ಗಾವಣೆಯಾಗಿ, ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಉಡುಪಿಯಲ್ಲಿ ಚೈತ್ರಾಳನ್ನು ಬಂಧಿಸಿ ನಂತರ ಶೋಧ ಮುಂದುವರೆಸಿದಾಗ ಹಾಲಶ್ರೀ ಸ್ವಾಮೀಜಿ ಮಠದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಅಂದಿನಿಂದ ಇವರ ಶೋಧ ಕಾರ್ಯ ಮುಂದುವರೆದಿತ್ತು.
BIG NEWS; 5 ದಿನದಲ್ಲಿ ಭಾರತ ತೊರೆಯುವಂತೆ ಕೆನಡ ರಾಜತಾಂತ್ರಿಕರಿಗೆ ಸೂಚನೆ
ಈ ನಡುವೆ ಚೈತ್ರಾಳನ್ನು ಮಹಿಳಾ ಸಾಂತ್ವಾನ ಕೇಂದ್ರದಿಂದ ಎರಡನೇ ದಿನ ಸಿಸಿಬಿ ಕಚೇರಿಗೆ ಕರೆತಂದಾಗ ಸುದ್ದಿಗಾರರನ್ನು ನೋಡಿ ಸ್ವಾಮೀಜಿ ಸಿಕ್ಕಿಬಿದ್ದರೆ ದೊಡ್ಡ ದೊಡ್ಡವರ ಹೆಸರು ಹೊರಬರಲಿದೆ ಎಂದು ಹೇಳುತ್ತಾ ಕಚೇರಿ ಒಳಗೆ ಹೋಗಿದ್ದರು. ಈಕೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಸ್ವಾಮೀಜಿಗಾಗಿ ಹುಡುಕಾಟ ತೀವ್ರಗೊಳಿಸಿದ್ದರು. ಇತ್ತ ಸ್ವಾಮೀಜಿ ತಮ್ಮ ಮೊಬೈಲ್ ಸಿಮ್‍ನ್ನು ಬದಲಿಸಿ ಮೈಸೂರಿಗೆ ಹೋಗಿ ತಲೆಮರೆಸಿಕೊಂಡಿದ್ದರು.
ಕೊರೊನಾ ನಿಯಮ ಉಲ್ಲಂಸಿದ್ದ ಭಾರತೀಯನಿಗೆ ಜೈಲು ಶಿಕ್ಷೆ
ಈ ನಡುವೆ ಸಿಸಿಬಿ ಪೊಲೀಸರು ಸ್ವಾಮೀಜಿಯ ಕಾರು ಚಾಲಕ ಹಾಗೂ ಮೂರ್ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಹಲವು ಮಾಹಿತಿಯನ್ನು ಪಡೆದುಕೊಂಡು ಕಾರನ್ನು ಜಪ್ತಿ ಮಾಡಿ ಸ್ವಾಮೀಜಿಯ ಬಂಧಿಸಲು ಶೋಧ ಮುಂದುವರೆಸಿದ್ದರು. ಅಭಿನವ ಹಾಲಶ್ರೀ ಸ್ವಾಮೀಜಿ ಒಡಿಶಾದ ಕಟಕ್‍ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇಂದು ಬೆಳಗ್ಗೆ ಒಡಿಶಾ ಪೊಲೀಸರ ನೆರವಿನಿಂದ ಚಲಿಸುತ್ತಿದ್ದ ರೈಲಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
CCBpolice, #arrest, #AbhinavaHalashree,