CCB ಕಾರ್ಯಾಚರಣೆ, ದರೋಡೆಗೆ ಸಂಚು ರೌಡಿ-ನಾಲ್ವರು ಸಹಚರರ ಬಂಧನ

Social Share

ಬೆಂಗಳೂರು, ಅ.20- ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಹಾಗೂ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯ ರೌಡಿ ವಿನೋದ್ ಅಲಿಯಾಸ್ ಕಡ್ಡಿ ವಿನೋದ್ ಮತ್ತು ಸಹಚರರಾದ ಗೌತಮ್, ಮಧು, ದೇವಲಿಂಗ ಮತ್ತು ಸಾಗರ್ ಬಂಧಿತರು.

ಪ.ಜಾ ಹಾಗೂ ಪ.ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಜಾರಿ

ಐಷಾರಾಮಿ ಜೀವನ ನಡೆಸಲು, ವಕೀಲರಿಗೆ ಹಣ ನೀಡಲು ಹಾಗೂ ಜೂಜಾಟ ಮತ್ತಿತರ ಅನೈತಿಕ ಚಟುವಟಿಕೆಗಳಿಗೆ ಅಕ್ರಮ ಹಣ ಹೊಂದಿಸುವ ಸಲುವಾಗಿ ಆರೋಪಿಗಳು ದರೋಡೆಗೆ ಸಂಚು ರೂಪಿಸುತ್ತಿದ್ದರು. ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಸಿ ಲೇಔಟ್‍ನ ಬಸವೇಶ್ವರ ವಿದ್ಯಾರ್ಥಿ ನಿಲಯದ ಸಮೀಪದಲ್ಲಿ ಈ ಐದು ಮಂದಿ ಕಬ್ಬಿಣದ ಕತ್ತಿ, ಕಬ್ಬಿಣದ ಪೈಪ್‍ಗಳು, ಮರದ ದೊಣ್ಣೆಯಂತಹ ಮಾರಕಾಯುಧಗಳೊಂದಿಗೆ ಸಜ್ಜಾಗಿ ರಸ್ತೆಯಲ್ಲಿ ಬರುವವರನ್ನು ಹಾಗೂ ಒಬ್ಬಂಟಿಯಾಗಿ ದ್ವಿಚಕ್ರ ವಾಹನಗಳಲ್ಲಿ ಬರುವ ಸವಾರರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು.

ಅಸ್ಸಾಂನಿಂದ ಬೆಂಗಳೂರಿಗೆ ಗಾಂಜಾ, ಮೂವರು ಸೆರೆ

ಈ ಮಾರ್ಗದಲ್ಲಿ ಬರುವುದನ್ನೇ ಕಾಯುತ್ತಾ, ಸವಾರರನ್ನು ಅಡ್ಡಗಟ್ಟಿ ನಿಲ್ಲಿಸಿ ಮಾಕರಾಸ್ತ್ರಗಳನ್ನು ತೋರಿಸಿ ಬೆದರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಲು ಹೊಂಚು ಹಾಕಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದಾವಿಸಿ ರೌಡಿ ಹಾಗೂ ಆತನ ನಾಲ್ವರು ಸಹಚರರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಅಧಿಕಾರಿಗಳ ಚಳಿ ಬಿಡಿಸಿದ ಬಿಬಿಎಂಪಿ ಆಯುಕ್ತರು

ಈ ಕಾರ್ಯಾಚರಣೆಯನ್ನು ಬೈಂಗಳೂರು ನಗರ ಸಿಸಿಸಿ ಸಂಘಟಿತ ಅಪರಾಧ ದಳ (ಪಶ್ಚಿಮ) ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಕೈಗೊಂಡಿದ್ದಾರೆ.

Articles You Might Like

Share This Article