ಅಕ್ರಮ ಸಿಲಿಂಡರ್ ದಾಸ್ತಾನು- ರೀಫಿಲ್ಲಿಂಗ್ ಮಾಡುತ್ತಿದ್ದ ಮನೆಮೇಲೆ ಸಿಸಿಬಿ ದಾಳಿ

Social Share

ಬೆಂಗಳೂರು, ಮಾ.11- ಪರವಾನಗಿ ಪಡೆದುಕೊಳ್ಳದೆ ವಿವಿಧ ಕಂಪೆನಿಗಳ ಗ್ಯಾಸ್ ಸಿಲಿಂಡರ್‍ಗಳನ್ನು ದಾಸ್ತಾನು ಮಾಡಿಕೊಂಡು ಅನಾಧಿಕೃತವಾಗಿ ರೀಫಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಐದು ಲಕ್ಷ ರೂ. ಬೆಲೆಬಾಳುವ 311 ಸಿಲಿಂಡರ್‍ಗಳನ್ನು ಜಪ್ತಿ ಮಾಡಿದ್ದಾರೆ.

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ರಜತಾದ್ರಿ ಫ್ಲಾಜಾ, ಹೆಚ್‍ಡಿಎಫ್‍ಸಿ ಬ್ಯಾಂಕ್ ಪಕ್ಕದ ಹಾಗೂ ಜನ ವಾಸದ ಸ್ಥಳದಲ್ಲಿನ ಶೀಟ್ ಮನೆಯಲ್ಲಿ ಸರ್ಕಾರಿ ಸ್ವಾಮ್ಯದ ಇಂಡೇನ್ ಗ್ಯಾಸ್ ಕಂಪೆನಿಯ ಸಿಲಿಂಡರ್‍ಗಳನ್ನು ಅನಕೃತವಾಗಿ ದಾಸ್ತಾನು ಮಾಡಿಕೊಂಡು ರೀಫಿಲ್ಲಿಂಗ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಈ ಮನೆಯ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದು, ಸರ್ಕಾರದ ಯಾವುದೇ ಪ್ರಾಕಾರದಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಹಾಗೂ ಯಾವುದೇ ಸುರಕ್ಷತಾ ನಿಯಮಗಳನ್ನು ಅನುಸರಿಸದೇ ಸಾರ್ವಜನಿಕ ಜೀವ ಮತ್ತು ಆಸ್ತಿ-ಪಾಸ್ತಿಗೆ ಹಾನಿವುಂಟಾಗುವ ಸಂಭವವಿದೆಯೆಂದು ಗೊತ್ತಿದ್ದರೂ ಅನಧಿಕೃತವಾಗಿ ಸಿಲಿಂಡರ್‍ಗಳನ್ನು ದಾಸ್ತಾನು ಇಟ್ಟುಕೊಂಡು ರಿಫಿಲ್ಲಿಂಗ್ ಮಾಡಿ ಮಾರಾಟದಿಂದ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದುದ್ದು ಕಂಡು ಬಂದಿದೆ.

ನಾಳೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ

ದಾಳಿ ವೇಳೆ ಸುಮಾರು 5 ಲಕ್ಷ ರೂ. ಬೆಲೆಬಾಳುವ 6 ಗೃಹ ಬಳಕೆಯ ಇಂಡೇನ್ ಕಂಪೆನಿಯ ಸಿಲಿಂಡರ್ 2 ವಾಣಿಜ್ಯ ಬಳಿಕೆಯ ಇಂಡೇನ್ ಕಂಪೆನಿಯ ಸಿಲಿಂಡರ್, 3 ಗೃಹ ಬಳಕೆಯ ಭಾರತ್ ಕಂಪೆನಿಯ ಸಿಲಿಂಡರ್, 2 ಎಚ್‍ಪಿ ಕಂಪೆನಿಯ ಗೃಹ ಬಳಕೆ ಸಿಲಿಂಡರ್, 15 ಸೂರ್ಯ ಕಂಪೆನಿಯ 12 ಕೆಜಿ ತೂಕದ ಸಿಲಿಂಡರ್, 69 ಖಾಸಗೀ ಕಂಪೆನಿಯ 5 ಕೆಜಿ ತೂಕದ ತುಂಬಿರುವ ಸಣ್ಣ ಸಿಲಿಂಡರ್, 214 ಖಾಸಗಿ ಕಂಪೆನಿಯ 5 ಕೆಜಿ ತೂಕದ ಸಣ್ಣ ಸಿಲಿಂಡರ್‍ಗಳು, 3 ತೂಕ ಮಾಡುವ ಯಂತ್ರ, 3 ರಿಫೀಲ್ಲಿಂಗ್ ರಾಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯನ್ನು ಜಂಟಿಯಾಗಿ ಸಿಸಿಬಿ ಆರ್ಥಿಕ ಅಪರಾಧ ದಳದ ಅಕಾರಿ ಮತ್ತು ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಕೈಗೊಂಡಿದ್ದರು.

ಮುಟ್ಟಿನ ರಕ್ತಕ್ಕಾಗಿ ಮಹಿಳೆಗೆ ಒತ್ತಾಯ : 7 ಜನರ ವಿರುದ್ಧ ಕೇಸ್

ಏಜೆನ್ಸಿ ಮೇಲೆ ಕ್ರಮ: ಗೃಹ ಬಳಕೆಗೆ ಉಪಯೋಗಿಸಬೇಕಾದ ಸಿಲಿಂಡರ್‍ಗಳನ್ನು ವಾಣಿಜ್ಯ ಉದ್ದೇಶದ ಬಳಕೆಗೆ ಅನುಕೂಲವಾಗುವಂತೆ ಅನಧಿಕೃತವಾಗಿ ಫಿಲ್ಲಿಂಗ್ ರಾಡುಗಳು ಮತ್ತು ತೂಕದ ಯಂತ್ರಗಳನ್ನು ಬಳಸಿ ಖಾಲಿ ಸಿಲಿಂಡರ್‍ಗಳಿಗೆ ತುಂಬಿಸಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಇಂತಹ ಅಪಾಯಕಾರಿ ಕೃತ್ಯಕ್ಕೆ ಸಹಕರಿಸಿದ ವಿವಿಧ ಗೃಹ ಬಳಕೆ ಸಿಲಿಂಡರ್‍ಗಳನ್ನು ಸರಬರಾಜು ಮಾಡುತ್ತಿರುವ ಏಜೆನ್ಸಿಗಳ ಮೇಲೆ ತೀವ್ರ ಕ್ರಮ ಜರುಗಿಸಲು ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ.

CCB, Police, Raid, Illegal, Cylinder, Stock, Refilling,

Articles You Might Like

Share This Article