ಮೈಸೂರು, ಮಾ.4- ನಗರದ ಹನ್ನೊಂದು ಅಂಗಡಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ಪ್ರಖ್ಯಾತ ಕಂಪೆನಿ ಹೆಸರಿನ ನಕಲಿ ಸಿಗರೇಟ್‍ಗಳನ್ನು ಜಪ್ತಿ ಮಾಡಿದ್ದಾರೆ. ನಗರದ ಮಂಡಿ ಪೊಲೀಸ್ ಠಾಣೆ ಹಾಗೂ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹನ್ನೊಂದು ಅಂಗಡಿಗಳ ಮೇಲೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ನಿನ್ನೆ ದಿಢೀರ್ ದಾಳಿ ಮಾಡಿ ನಕಲಿ ಸಿಗರೇಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಗೆ ಬಂದ ದೂರವಾಣಿ ಕರೆ ಆಧರಿಸಿ ಸಿಸಿಬಿ ಪೊಲೀಸರು ಏಕಕಾಲದಲ್ಲಿ ಅಂಗಡಿಗಳ ಮೇಲೆ
ದಾಳಿ ಮಾಡಿ ದಾಸ್ತಾನು ಮಾಡಲಾಗಿದ್ದ ಸಿಗರೇಟ್ ಪ್ಯಾಕ್‍ಗಳನ್ನು ಪರಿಶೀಲಿಸಿದಾಗ ಪ್ರಖ್ಯಾತ ಕಂಪೆನಿ ಹೆಸರಿನ ಲೋಗೋ ಬಳಸಿಕೊಂಡು ನಕಲಿ ಮಾಡಿರುವುದು ಗೊತ್ತಾಗಿದೆ.
ಪಾಕ್‍ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ ; ಭಾರತ ತಿರುಗೇಟು
ಈ ಸಿಗರೇಟ್‍ಗಳನ್ನು ನಕಲಿಯಾಗಿ ತಯಾರಿಸಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದುದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ಸದ್ಯಕ್ಕೆ ಇವುಗಳ ಮೌಲ್ಯ ತಿಳಿದುಬಂದಿಲ್ಲ. ಈ ಬಗ್ಗೆ ಮಂಡಿ ಪೊಲೀಸ್ ಠಾಣೆ ಹಾಗೂ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಅವರು ಈ ಸಂಜೆಗೆ ತಿಳಿಸಿದ್ದಾರೆ.
ಸರ್ಕಾರಿ ಇಂಧನ ಸಂಗ್ರಹಣ ಡಿಪೋದಲ್ಲಿ ಅಗ್ನಿ ಅವಘಡ, 16 ಮಂದಿ ಸಾವು
ಈ ನಕಲಿ ಸಿಗರೇಟ್‍ಗಳು ಎಲ್ಲಿ ತಯಾರಾಗುತ್ತಿವೆ, ಯಾರು ಅಂಗಡಿಗಳಿಗೆ ಸರಬರಾಜು ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
CCB Police, Raid, Mysore, Fake, Cigarettes,