ಮೈಸೂರು, ಮಾ.4- ನಗರದ ಗೋದಾಮೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಕಳ್ಳಸಾಗಣಿಕೆ ಯಿಂದ ಸಂಗ್ರಹಿಸಿಡಲಾಗಿದ್ದ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಪ್ರಖ್ಯಾತ ಕಂಪೆನಿಯ ಸಿಗರೇಟ್‍ಗಳನ್ನು ಜಪ್ತಿ ಮಾಡಿದ್ದಾರೆ.
ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ನಿನ್ನೆ ದಾಳಿ ಮಾಡಿ ಪರಿಶೀಲಿಸಿದಾಗ ಭಾರಿ ಪ್ರಮಾಣದ ಸಿಗರೇಟ್‍ಪ್ಯಾಕ್‍ಗಳು ದಾಸ್ತಾನು ಮಾಡಿರು ವುದು ಕಂಡು ಬಂದಿತು.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಇದು ಕಳ್ಳ ಸಾಗಣಿಕೆ ಮಾಡಿಕೊಂಡು ಬಂದು ದಾಸ್ತಾನು ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮೈಸೂರಿನಲ್ಲಿ ಮಾ.2 6ಕ್ಕೆ ಜೆಡಿಎಸ್ ಪಂಚರತ್ನ ಸಮಾರೋಪ
ಈ ಸಿಗರೇಟ್‍ಗಳನ್ನು ಎಲ್ಲಿಂದ ಕಳ್ಳಸಾಗಣಿಕೆ ಮಾಡಿಕೊಂಡು ಬಂದು ನಗರಕ್ಕೆ ತರಲಾಗಿತ್ತು ಎಂಬುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಗರದ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಅಂಗಡಿಗಳ ಮೇಲೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ಮಾಡಿ ನಕಲಿ ಸಿಗರೇಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಗೆ ಬಂದ ದೂರವಾಣಿ ಕರೆ ಆಧರಿಸಿ ಸಿಸಿಬಿ ಪೊಲೀಸರು ಏಕಕಾಲದಲ್ಲಿ ಅಂಗಡಿಗಳ ಮೇಲೆ ದಾಳಿ ಮಾಡಿ ದಾಸ್ತಾನು ಮಾಡಲಾಗಿದ್ದ ಸಿಗರೇಟ್ ಪ್ಯಾಕ್‍ಪರಿಶೀಲಿಸಿದಾಗ ಪ್ರಖ್ಯಾತ ಕಂಪೆನಿ ಹೆಸರಿನ ಲೋಗೋ ಬಳಸಿಕೊಂಡು ನಕಲಿ ಮಾಡಿರುವುದು ಗೊತ್ತಾಗಿದೆ.
ಈ ಸಿಗರೇಟ್‍ಗಳನ್ನು ನಕಲಿಯಾಗಿ ತಯಾರಿಸಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದುದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸದ್ಯಕ್ಕೆ ನಕಲಿ ಸಿಗರೇಟ್‍ಗಳ ನಿಖರ ಮೌಲ್ಯ ತಿಳಿದುಬಂದಿಲ್ಲ.
ರಷ್ಯಾದಲ್ಲಿ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆ ಶೋಧಿಸಿದ ವಿಜ್ಞಾನಿಯ ಹತ್ಯೆ
ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಮತ್ತು ಕಳ್ಳ ಸಾಗಣಿಕೆ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಅವರು ಈ ಸಂಜೆಗೆ ತಿಳಿಸಿದ್ದಾರೆ. ಈ ನಕಲಿ ಸಿಗರೇಟ್‍ಗಳು ಎಲ್ಲಿ ತಯಾರಾ ಗುತ್ತಿವೆ, ಯಾರು ಅಂಗಡಿಗಳಿಗೆ ಸರಬರಾಜು ಮಾಡಿ ದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
CCB Police, Raid, Mysore, Smuggled, Cigarettes, seized,