ಅಮೆರಿಕ – ಭಾರತ ನಕಲಿ ನೋಟು ಜಾಲ ಪತ್ತೆ

Social Share

ಬೆಂಗಳೂರು, ಡಿ.14- ಹಣ ದ್ವಿಗುಣಗೊಳಿಸುವುದು, ವಿದೇಶಿ ಹೂಡಿಕೆ ಸೇರಿದಂತೆ ಹಲವು ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಕತರ್‍ನಾಕ್ ಜಾಲವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ.

ಈ ಮೂಲಕ ಹಣಕಾಸು ವ್ಯವಸ್ಥೆ ಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದ ವಿದೇಶಿ ಸಂಪರ್ಕಿತ ದಂಧೆಯೊಂದು ಬಯಲಿಗೆ ಬಂದಿದೆ. ಆರೋಪಿಗಳ ಮನೆಯಲ್ಲಿ ಒಂದು ಕೋಟಿ 10 ಲಕ್ಷ ರೂಪಾಯಿ ಮೌಲ್ಯದ ಭಾರತ ಮತ್ತು ಅಮೆರಿಕದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ಸಿಸಿಬಿಯ ಮಾದಕ ದ್ರವ್ಯನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿತು. ಈ ವೇಳೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಶೋಧ ಕಾರ್ಯಾಚರಣೆ ನಡೆಸಿದಾಗ 500 ಮುಖಬೆಲೆಯ 10 ಸಾವಿರದ 33 ಭಾರತಿಯ ನಕಲಿ ನೋಟುಗಳು, ನೂರು ಡಾಲರ್ ಮುಖಬೆಲೆಯ 708 ಅಮೆರಿಕದ ನಕಲಿ ಕರೆನ್ಸಿ ಪತ್ತೆಯಾಗಿವೆ.

ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ..?

ಮತ್ತಷ್ಟು ನಕಲಿ ನೋಟುಗಳ ಮುದ್ರಣಕ್ಕಾಗಿ ಸಂಗ್ರಹಿಸಲಾಗಿದ್ದ ಕಪ್ಪು ಬಣ್ಣದ ಒಂದು ಸಾವಿರ ನೋಟಿನ ಮಾದರಿಯ ಹಾಳೆಗಳು ಮತ್ತು ಬಿಳಿ ಬಣ್ಣದ ನೋಟಿನ ಅಳತೆಯ ಹಾಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ನಕಲಿ ನೋಟುಗಳ ಮುದ್ರಣಕ್ಕೆ ಬಳಸಲಾಗುತ್ತಿದ್ದ ವಿವಿಧ ರಾಸಾಯನಿಕಗಳನ್ನೊಳಗೊಂಡ ಬಾಟಲ್‍ಗಳು, ಎಲೆಕ್ಟ್ರಾನಿಕ್ ಡ್ರೈಯಿಂಗ್ ಮಿಷನ್, ಕೆಂಪು, ಗುಲಾಬಿ, ಹಳದಿ ಮತ್ತು ಕಪ್ಪು ಬಣ್ಣದ ಕೆನಾನ್ ಕಂಪೆನಿಯ ನಾಲ್ಕು ಪ್ರಿಂಟರ್ ಇಂಕ್ ಜಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬೆಂಗಳೂರಿನ ಸ್ಥಳೀಯರು ಹಾಗೂ ವಿದೇಶಿ ಮೂಲದ ವ್ಯಕ್ತಿಗಳ ಜೊತೆ ಸಂಪರ್ಕ ಬೆಳೆಸುತ್ತಿದ್ದರು. ಹಣ ದ್ವಿಗುಣಗೊಳಿಸುವುದು, ಅಸಲಿ ನೋಟುಗಳಿಗೆ ನಕಲಿ ನೋಟುಗಳ ವಿನಿಮಯ ಮಾಡುವುದು, ಅಮೆರಿಕ ಡಾಲರ್ ಇನ್‍ವೆಸ್ಟ್‍ಮೆಂಟ್ ಯೋಜನೆ ಹಾಗೂ ಬ್ಲಾಕ್ ಬಿಲ್ ಅನ್‍ಮಾಸ್ಕಿಂಗ್ ಎಂಬ ವಿವಿಧ ಸ್ಕೀಮ್‍ಗಳನ್ನು ಪರಿಚಯಿಸುತ್ತಿದ್ದರು. ಇದನ್ನು ನಂಬಿ ಸಾರ್ವಜನಿಕರು ಹಣ ಹೂಡಿಕೆ ಮಾಡುತ್ತಿದ್ದರು. ಸಾಕಷ್ಟು ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಈ ಆರೋಪಿಗಳ ಬಗ್ಗೆ ದೂರು ಕೇಳಿಬಂದಿದ್ದವು.

ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಾದರಿ ವಿಧಿವಿಜ್ಞಾನ ವಿವಿ ಸ್ಥಾಪನೆ

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ತಮ್ಮ ಮನೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಸಂಗ್ರಹಿಸಿಟ್ಟುಕೊಂಡಿದ್ದು, ಸಾರ್ವಜನಿಕರನ್ನು ನಂಬಿಸಿ ಹಲವು ಮಾದರಿಯಲ್ಲಿ ಚಲಾವಣೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ತಲೆ ಮರೆಸಿಕೊಂಡಿರುವ ವಿದೇಶಿ ಮೂಲದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ.

ಭಾರತದ ಆರ್‍ಬಿಐನ ಕರೆನ್ಸಿಗಳು ಮತ್ತು ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಕರೆನ್ಸಿಗಳನ್ನು ನಕಲಿ ಎಂದು ಪತ್ತೆ ಮಾಡಲು ಕಷ್ಟ ಸಾಧ್ಯವಾದ ಮಟ್ಟಿಗೆ ಮುದ್ರಿಸಿ ಜನರನ್ನು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

CCB police, US-India, money,

Articles You Might Like

Share This Article