ರಾಜ್ಯದಲ್ಲಿ ಮತ್ತೆ ಜೋರಾಯ್ತು ಹಲಾಲ್ ಉತ್ಪನ್ನಗಳ ಬಹಿಷ್ಕಾರದ ಕೂಗು

Social Share

ಬೆಂಗಳೂರು,ಅ.17-ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಸಂದರ್ಭದಲ್ಲೇ ಹಿಂದುಪರ ಸಂಘಟನೆಗಳು ರಾಜ್ಯಾದ್ಯಂತ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಅಭಿಯಾನ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಸದಾ ಈಗಾಗಲೇ ಹಲವು ಕಾರಣಗಳಿಂದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಹೊತ್ತಿರುವ ಸಂದರ್ಭದಲ್ಲೇ ಹಿಂದೂಪರ ಸಂಘಟನೆಗಳ ಹಲಾಲ್ ವಿರುದ್ಧದ ಅಭಿಯಾನ ಸಿಎಂ ಬೊಮ್ಮಾಯಿ ಅವರಿಗೂ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಜಿಲ್ಲೆಯಲ್ಲೂ ಹಲಾಲ್ ಉತ್ಪನ್ನಗಳ ವಿರುದ್ಧ ಅಭಿಯಾನ ಕೈಗೊಳ್ಳಬೇಕು ಎಂದು ತೀರ್ಮಾನಿಸಿವೆ.

ಹಲಾಲ್ ಉತ್ಪನ್ನಗಳ ಮಾರಾಟದಿಂದ ದೇಶದಲ್ಲಿ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂ.ಗಳ ವಹಿವಾಟು ನಡೆಯುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆ ರಾಜ್ಯಾದ್ಯಂತ ಆವರಿಸಿದ್ದ ಹಲಾಲ್ ಕಿಚ್ಚು ಮತ್ತೆ ಆವರಿಸಿದೆ. ಹಲಾಲ್ ಎಂದು ಪ್ರಮಾಣೀಕೃತಗೊಂಡಿರುವ ಉತ್ಪನ್ನಗಳನ್ನು ಹಿಂದೂಗಳು ಕೊಳ್ಳಬಾರದು. ಅಂಥ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಹಿಂದೂ ಸಂಘಟನೆಗಳು ಕರೆ ನೀಡಿವೆ.

ಹಿಂದೂಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ಮತ್ತಿತರ ಸಂಘಟನೆಗಳು ರಾಜ್ಯಾದ್ಯಂತ ಒಂದು ಸಮುದಾಯ ತಯಾರಿಸುವ ಉತ್ಪನ್ನಗಳನ್ನು ಖರೀದಿ ಮಾಡದಂತೆ ಅಭಿಯಾನ ಪ್ರಾರಂಭಿಸಿದೆ.

ಅನ್ಯಕೋಮಿನವರು ಹಲಾಲ್‍ನಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ಇದರ ಹಣ ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕರ ಕೈಗೆ ಸೇರುತ್ತಿದೆ. ಹೀಗಾಗಿ ಅಲ್ಲಿ ತಯಾರಾದ ಒಂದೇ ಒಂದೂ ಉತ್ಪನ್ನಗಳನ್ನು ಖರೀದಿ ಮಾಡದಂತೆ ಅಭಿಯಾನ ಪ್ರಾರಂಭವಾಗಿದೆ.

ರಾಜಧಾನಿ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಹುಬ್ಬಳ್ಳಿ-ಧಾರಾವಾಡ, ಶಿವಮೊಗ್ಗ, ದಾವಣಗೆರೆ, ತುಮಕೂರು, ಮೈಸೂರು, ರಾಮನಗರ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಹಿಂದೂಪರ ಸಂಘಟನೆಗಳು ಸದ್ದಿಲ್ಲದೆ ಅಭಿಯಾನವನ್ನು ಆರಂಭಿಸಿದೆ.

ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಮಹಾ ಸಭೆ ನಡೆಸಿರುವ ಹಿಂದೂ ಸಂಘಟನೆಗಳು ಪ್ರತಿ ಜಿಲ್ಲೆಗಳಲ್ಲೂ ಅಭಿಯಾನ ನಡೆಸಲು ಮುಂದಾಗಿವೆ.

ಹಬ್ಬಕ್ಕೂ ಮುನ್ನವೇ ಮುಸ್ಲಿಮರ ಅಂಗಡಿಗಳಲ್ಲಿ ಹಲಾಲ್ ಮಾಂಸ ಖರೀದಿಸಬೇಡಿ. ಉತ್ಪನ್ನಗಳನ್ನೂ ಬಹಿಷ್ಕರಿಸಿ ಎಂಬ ಅಭಿಯಾನ ಶುರುವಾಗಿರುವುದು ಧರ್ಮದ ಕಿಡಿ ಹೆಚ್ಚಾಗುವಂತೆ ಮಾಡಿದೆ. ಹಿಂದೂಪರ ಸಂಘಟನೆಗಳ ಅಭಿಯಾನಗಳಿಗೆ ಕೆಲ ಮುಸ್ಲಿಂ ಮುಖಂಡರುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹಲಾಲ್ ಉತ್ಪನ್ನಗಳ ಮಾರಾಟದಿಂದ ದೇಶದಲ್ಲಿ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂ.ಗಳ ವಹಿವಾಟು ನಡೆಯುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಹಲಾಲ್ ಉತ್ಪನ್ನಗಳ ಮಾರಾಟದ ಮೂಲಕ ಸಂಗ್ರಹಿಸಲಾಗುವ ಕೋಟ್ಯಂತರ ರೂಪಾಯಿಗಳನ್ನು ಮುಸ್ಲಿಂ ರಾಷ್ಟ್ರಗಳು ಉಗ್ರವಾದಕ್ಕೆ ಬಳಸುತ್ತಿವೆ ಎಂದು ಹಿಂದೂ ಪರ ವಿಚಾರವಾದಿ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.

ಅಕ್ಕಿ, ಬಟ್ಟೆಗೂ ಹಬ್ಬಿದ ಹಲಾಲ್ ಈ ಕುರಿತಂತೆ, ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ಗ್ಲಿಸರಿನ್ ಅನ್ನು ಅಕ್ಕಿ ಹಾಗೂ ಬಟ್ಟೆಗಳು ಹೊಳೆಯುವಂತೆ ಪಾಲಿಶ್ ಮಾಡಲಾಗುತ್ತದೆ. ಅಂಥ ಉತ್ಪನ್ನಗಳನ್ನು ಹಲಾಲ್ ಎಂದು ತೀರ್ಮಾನಿಸಬೇಕು ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ

Articles You Might Like

Share This Article